ಭಾರತ vs ದಕ್ಷಿಣ ಆಫ್ರಿಕಾ ಪಂದ್ಯ ಮಳೆಯಿಂದ ರದ್ದಾದರೆ, ಮುಂದೇನು?
ಲಂಡನ್, ಜೂನ್ 09: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ಸ್ ಟೀಂ ಇಂಡಿಯಾಕ್ಕೆ ಶ್ರೀಲಂಕಾ ಸೋಲುಣಿಸುತ್ತಿದ್ದಂತೆ ಅಂಕಪಟ್ಟಿ, ರನ್ ರೇಟ್ ಲೆಕ್ಕಾಚಾರ ಶುರುವಾಗಿದೆ.
ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು
ಜೊತೆಗೆ ಇಂಗ್ಲೆಂಡಿನ ತಿಕ್ಕಲು ಮಳೆಯ ಬಗ್ಗೆ ಹವಾಮಾನ ವರದಿ ಏನು ಹೇಳುತ್ತದೆ ಎಂಬುದನ್ನು ಗಮನವಿಟ್ಟು ಬಿ ಗುಂಪಿನ ತಂಡಗಳು ನೋಡುತ್ತಿವೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ನಡೆಯಲಿರುವ ಭಾರತ vs ದಕ್ಷಿಣ ಆಫ್ರಿಕಾ ಪಂದ್ಯವು ಮಳೆಯಿಂದ ರದ್ದಾದರೆ, ಮುಂದೇನು? ಯಾರಿಗೆ ಲಾಭ? ಎಂಬ ಚರ್ಚೆಗೆ ಉತ್ತರ ಇಲ್ಲಿದೆ...

ಈ ಚರ್ಚೆ ಆರಂಭವಾಗಲು ಕಾರಣ ಶ್ರೀಲಂಕಾ ತಂಡದ ಗೆಲುವು. ಏಂಜೆಲೊ ಮ್ಯಾಥ್ಯೂಸ್ ನೇತೃತ್ವದ ಶ್ರೀಲಂಕಾ ತಂಡವು 322ರನ್ ಚೇಸ್ ಮಾಡಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಮೊತ್ತ ಚೇಸ್ ಮಾಡಿದ ದಾಖಲೆ ಬರೆಯಿತು. ಜತೆಗೆ ಐಸಿಸಿ ಟೂರ್ನಿಗಳಲ್ಲಿ ಇದೇ ಮೊದಲ ಬಾರಿಗೆ 300 ಪ್ಲಸ್ ರನ್ನುಗಳನ್ನು ಗಳಿಸಿ ಪಂದ್ಯವನ್ನು ಉಳಿಸಿಕೊಳ್ಳಲಾಗದೆ ಭಾರತ ಪರದಾಡಿತು.
ಭಾರತದ ಸೋಲಿನ ಪರಿಣಾಮ ಬಿ ಗುಂಪಿನಲ್ಲಿ ಎಲ್ಲಾ ತಂಡಗಳಿಗೂ ಸೆಮಿಫೈನಲ್ ಗೇರುವ ಅವಕಾಶ ಲಭಿಸುವಂತಾಗಿದೆ. ಭಾರತ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳ ಭವಿಷ್ಯ ಭಾನುವಾರ ನಿರ್ಧಾರವಾಗಲಿದೆ. ಆದರೆ, ಒಂದು ವೇಳೆ ಮಳೆ ಬಿದ್ದರೆ, ಭಾರತಕ್ಕೆ ಲಾಭ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Will India qualify for CT semis?
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications