For Quick Alerts
ALLOW NOTIFICATIONS  
For Daily Alerts
 

Champions Trophy: ಮಿನಿ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್- 5 ಬ್ಯಾಟರ್ಸ್‌ ಇವರೇ..

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಆತಿಥ್ಯ ಪಾಕಿಸ್ತಾನದ ಕೈಯಲ್ಲಿದೆ. ಈ ಮೆಗಾ ಟೂರ್ನಿಯ 10ನೇ ಆವೃತ್ತಿಯು ಹೈಬ್ರಿಡ್ ಮಾದರಿಯಲ್ಲಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್ 2023ರ ಅಂಕಪಟ್ಟಿಯಲ್ಲಿ ಅಗ್ರ 8 ತಂಡಗಳು ಪ್ರಶಸ್ತಿಗಾಗಿ ಮೈದಾನಕ್ಕಿಳಿಯಲಿವೆ. ಟೂರ್ನಿಯಲ್ಲಿ ಮತ್ತೊಮ್ಮೆ ಬ್ಯಾಟರ್‌ಗಳ ಅಮೋಘ ಪ್ರದರ್ಶನ ಕಾಣಲಿದೆ. ಕ್ರಿಕೆಟ್ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗುವ ಮೊದಲು ಇಲ್ಲಿವರೆಗೆ ಟೂರ್ನಿಯಲ್ಲಿ ವಿಶ್ವದ ಟಾಪ್-5 ಬ್ಯಾಟರ್‌ಗಳು ಅತಿ ಹೆಚ್ಚು ರನ್ ಗಳಿಸಿದ್ದಾರೆ. ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಅಂತಹ ಟಾಪ್-5 ಬ್ಯಾಟರ್‌ಗಳು ಬಗ್ಗೆ ಇಲ್ಲಿದೆ ಮಾಹಿತಿ.

Champions Trophy Top 5 batsmen with the most runs

ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)

ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 17 ಪಂದ್ಯಗಳಲ್ಲಿ 52.73 ರ ಅತ್ಯುತ್ತಮ ಸರಾಸರಿಯಲ್ಲಿ ಒಟ್ಟು 791 ರನ್ ಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 133 ರನ್‌. ಈ ಐಸಿಸಿ ಟೂರ್ನಿಯಲ್ಲಿ 3 ಶತಕ ಹಾಗೂ 1 ಅರ್ಧ ಶತಕನ್ನೂ ಬಾರಿಸಿದ್ದಾರೆ.

ಮಹೇಲಾ ಜಯವರ್ಧನೆ (ಶ್ರೀಲಂಕಾ)

ಶ್ರೀಲಂಕಾದ ಸ್ಟಾರ್ ಬ್ಯಾಟರ್ ಮಹೇಲ ಜಯವರ್ಧನೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅವರು 22 ಪಂದ್ಯಗಳಲ್ಲಿ 41.22 ರ ಸರಾಸರಿಯಲ್ಲಿ 742 ರನ್ ಗಳಿಸಿದ್ದಾರೆ. 5 ಅರ್ಧ ಶತಕಗಳನ್ನೂ ಬಾರಿಸಿದ್ದಾರೆ. ಅವರ ಔಟಾಗದೆ ಗರಿಷ್ಠ 84 ರನ್ ಗಳಿಸಿದ್ದಾರೆ.

ಶಿಖರ್ ಧವನ್ (ಭಾರತ)

ಭಾರತದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಭಾರತೀಯ ಮತ್ತು ಮೂರನೇ ಬ್ಯಾಟರ್ ಆಗಿದ್ದಾರೆ. ಚಾಂಪಿಯನ್ ಟ್ರೋಫಿಯಲ್ಲಿ ಅವರು 10 ಪಂದ್ಯಗಳಲ್ಲಿ 77.88 ರ ಅತ್ಯುತ್ತಮ ಸರಾಸರಿಯಲ್ಲಿ ಒಟ್ಟು 701 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಅವರ ಗರಿಷ್ಠ ಸ್ಕೋರ್ 125 ರನ್. 2013ರಲ್ಲಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಶಿಖರ್ ಧವನ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಅವರಿಗೆ ಮ್ಯಾನ್ ದಿ ಸೀರಿಸ್ ಪ್ರಶಸ್ತಿ ಸಿಕ್ಕಿತ್ತು.

ಕುಮಾರ ಸಂಗಕ್ಕಾರ (ಶ್ರೀಲಂಕಾ)

ಶ್ರೀಲಂಕಾದ ದಿಗ್ಗಜ ಬ್ಯಾಟರ್ ಕುಮಾರ ಸಂಗಕ್ಕಾರ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಅವರು 22 ಪಂದ್ಯಗಳನ್ನು ಆಡಿದ್ದು ಒಟ್ಟು 683 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 134 ರನ್ ಔಟಾಗದೆ. ಟೂರ್ನಿಯಲ್ಲಿ ಅವರ ಹೆಸರಿನಲ್ಲಿ 4 ಅರ್ಧಶತಕಗಳೂ ಇವೆ.

ಸೌರವ್ ಗಂಗೂಲಿ (ಭಾರತ)

ಭಾರತದ ದಿಗ್ಗಜ ಮಾಜಿ ನಾಯಕ ಸೌರವ್ ಗಂಗೂಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಟಾಪ್-5 ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಭಾರತೀಯರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು 13 ಪಂದ್ಯಗಳಲ್ಲಿ 665 ರನ್ ಗಳಿಸಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 141 ರನ್ ಔಟಾಗದೆ.

Story first published: Friday, January 17, 2025, 7:01 [IST]
Other articles published on Jan 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+