ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಚ್ ನೋಡಲು ಬಂದ ಮಲ್ಯಗೆ ಆಯ್ತು ಕೆಟ್ಟ ಅನುಭವ!

ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ 11ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ಸೆಣಸಾಟ ನೋಡಲು ಓವಲ್ ಮೈದಾನದಲ್ಲಿ ಬಂದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಕೆಟ್ಟ ಅನುಭವವಾಗಿದೆ.

By Mahesh

ಲಂಡನ್. ಜೂನ್ 11: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ 11ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ಸೆಣಸಾಟ ನೋಡಲು ಓವಲ್ ಮೈದಾನದಲ್ಲಿ ಬಂದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಕೆಟ್ಟ ಅನುಭವವಾಗಿದೆ.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ಭಾರತ-ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಮಲ್ಯ ಅವರು ಬರ್ಮಿಂಗ್ ಹ್ಯಾಮ್ ನ ಮೈದಾನಕ್ಕೆ ಬಂದಿದ್ದರು. ನಂತರ ಈ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದು ಗಮನಿಸಿ ಈ ಬಗ್ಗೆ ಪ್ರತಿಕ್ರಿಯಿಸಿದ್ದರು.

ಚಾಂಪಿಯನ್ಸ್ ಟ್ರೋಫಿ : ಸೆಮಿಫೈನಲ್ ವೇಳಾಪಟ್ಟಿಚಾಂಪಿಯನ್ಸ್ ಟ್ರೋಫಿ : ಸೆಮಿಫೈನಲ್ ವೇಳಾಪಟ್ಟಿ

Champions Trophy: Vijay Mallya booed during India-South Africa match in London

'ನಾನು ಭಾರತದ ಎಲ್ಲಾ ಪಂದ್ಯಗಳನ್ನು ನೋಡಲು ಬರುತ್ತಿದ್ದೇನೆ' ಎಂದು ಟ್ವೀಟ್ ಮಾಡಿದ್ದರು. ಅದರಂತೆ, ಇಂದಿನ ಪಂದ್ಯ ನೋಡಲು ಬಂದಿದ್ದರು.

ಗ್ಯಾಲರಿ: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು, ಉಪಾಂತ್ಯಕ್ಕೆ ಲಗ್ಗೆ ಇಟ್ಟ ಭಾರತ

ಆದರೆ, ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದ ಮಲ್ಯರನ್ನು ಕಂಡ ಭಾರತೀಯ ಮೂಲದ ಪ್ರೇಕ್ಷಕರು, 'ಕಳ್ಳ ಕಳ್ಳ' ಎಂದು ಕರೆದು ಕಿಚಾಯಿಸಿದರು.



ವಿವಿಧ ಬ್ಯಾಂಕುಗಳಿಂದ ಸುಮಾರು 9 ಸಾವಿರ ಕೋಟಿ ರು ಗೂ ಸಾಲ ಹೊತ್ತುಕೊಂಡು ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರು ಈಗ ಲಂಡನ್ನಿನ ನಿವಾಸಿಯಾಗಿದ್ದಾರೆ.


ಮನಿಲಾಂಡ್ರಿಂಗ್ ಕೇಸಿನ ಆರೋಪ ಹೊತ್ತಿರುವ ವಿಜಯ್ ಮಲ್ಯ ಅವರು ಭಾರತ ತೊರೆದು ಇಂಗ್ಲೆಂಡಿನಲ್ಲಿ ನೆಲೆಸಿದ್ದು, ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ತನಿಖಾ ತಂಡಗಳು ಹರ ಸಾಹಸ ಪಡುತ್ತಿವೆ.

ಲಂಡನ್ನಿನಲ್ಲಿ ಜಸ್ಟೀಸ್ ಅಂಡ್ ಕೇರ್ ಸಂಸ್ಥೆಗೆ ಹಣ ಸಂಗ್ರಹಿಸಲು ಚಾರಿಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದರಿಂದ ಟೀಂ ಇಂಡಿಯಾದ ಆಟಗಾರರು ಮುಜುಗರ ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X