Champions Trophy 2025: ಟೂರ್ನಿಯಲ್ಲಿ ಯಾವುದೇ ತಂಡ ನಿರ್ಮಿಸಿಲ್ಲ ಈ ದಾಖಲೆ: ಯಾವ ರೆಕಾರ್ಡ್?
ಚಾಂಪಿಯನ್ಸ್ ಟ್ರೋಫಿ ಬುಧವಾರದಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿದೆ. ಈ ಟೂರ್ನಿಗೆ ಭಾಗವಹಿಸಲು ಈಗಾಗಲೇ ಎಲ್ಲ ತಂಡಗಳು ಪಾಕ್‌ನಲ್ಲಿ ಬೀಡು ಬಿಟ್ಟಿಗೆ. ಭದ್ರತಾ ಕಾರಣದಿಂದ ಭಾರತ, ಟೂರ್ನಿಯಲ್ಲಿ ಭಾಗವಹಿಸದ ಕಾರಣ, ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಟೀಮ್ ಇಂಡಿಯಾ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲೇ ಆಡಲಿದೆ. ಬುಧವಾರ ಕರಾಚಿ ಮೈದಾನದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಉದ್ಘಾಟನಾ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಹಲವು ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು, ಇವರು ಅಭಿಮಾನಿಗಳನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಇನ್ನು ಪ್ರತಿ ತಂಡದಲ್ಲೂ ಪಂದ್ಯದ ಗತಿಯನ್ನೇ ಬದಲಿಸುವ ಆಟಗಾರರು ಇದ್ದಾರೆ. ಇವರು ಕೆಲವೇ ಎಸೆತದಲ್ಲಿ ಪಂದ್ಯದ ಗತಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚಿನ ದಾಖಲೆಗಳು ನಿರ್ಮಾಣ ಆಗುವ ಸಾಧ್ಯತೆ ಇದೆ.

ಏಕದಿನ ಕ್ರಿಕೆಟ್‌ನಲ್ಲಿ 350 ಕ್ಕಿಂತ ಹೆಚ್ಚು ರನ್‌ಗಳಿಸುವುದು ಸಾಮಾನ್ಯ. ಇನ್ನು ಮಾರ್ಡನ್ ಡೇ ಕ್ರಿಕೆಟ್‌ನಲ್ಲಿ ಮೊದಲು ಆಡುವ ತಂಡ ಬಿಗ್ ಸ್ಕೋರ್ ಕಲೆ ಹಾಕುತ್ತದೆ. ಚೇಸ್ ಮಾಡುವ ತಂಡ ಇದನ್ನು ಬೆನ್ನಟ್ಟಿ ಗೆಲ್ಲುವ ಸಾಧಿಸುತ್ತದೆ. ಹೀಗಾಗಿ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ನಾವು 350 ರನ್ ನೋಡಬಹುದಾಗಿದೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ವರೆಗೆ ಇನ್ನು ಒಂದೇ ಒಂದು ತಂಡ 350ರ ಸ್ಕೋರ್ ಮುಟ್ಟಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ರನ್ ಕಲೆ ಹಾಕಿದ ತಂಡ ಯಾವುದು?
ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಕೀರ್ತಿ ನ್ಯೂಜಿಲೆಂಡ್ ತಂಡದ್ದಾಗಿದೆ. ಕಿವೀಸ್ 2004ರಲ್ಲಿ ಈ ಸಾಧನೆ ಮಾಡಿತ್ತು. ಯುಎಇ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 347 ರನ್ ದಾಖಲಾಗಿತ್ತು. ಆದರೆ 350 ರನ್ ಮಾರ್ಕ್ ಮುಟ್ಟಲು ಸಾಧ್ಯವೇ ಆಗಿರಲಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಈಗಾಗಲೇ 17 ಬಾರಿ ತಂಡಗಳು 300ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿವೆ. ಭಾರತ ಸಹ ಈ ಟೂರ್ನಿಯಲ್ಲಿ 4 ಬಾರಿ 300ಕ್ಕೂ ಹೆಚ್ಚು ರನ್ ಸಿಡಿಸಿದ ಹಿರಿಮೆ ತನ್ನದಾಗಿಸಿಕೊಂಡಿದೆ.
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಳಿಸಿದ ಮೊತ್ತ 331 ರನ್. 2013ರಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಕಾರ್ಡಿಫ್‌ನಲ್ಲಿ ಈ ಸಾಧನೆ ಮಾಡಿತ್ತು. ಆ ವರ್ಷ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ತಂಡ ಚಾಂಪಿಯನ್ ಪಟ್ಟಕ್ಕೇ ಇರಿತ್ತು. ಈ ಬಾರಿ ಟೀಮ್ ಇಂಡಿಯಾ ತನ್ನ ದಾಖಲೆಯನ್ನು ಉತ್ತಮ ಪಡಿಸಿಕೊಳ್ಳುತ್ತದಾ ಎಂಬುದು ಕುತೂಹಲ ಹೆಚ್ಚಿಸಿದೆ.
ಐಸಿಸಿ ಮೆಗಾ ಟೂರ್ನಿಯಲ್ಲಿ ಯಾವ ತಂಡ ಈ ದಾಖಲೆಯನ್ನು ಮೊದಲ ನಿರ್ಮಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈ ಐಸಿಸಿ ಟೂರ್ನಮೆಂಟ್‌ನಲ್ಲಿ ಭಾರತ 331 ರನ್‌ಗಳ ಅತ್ಯಧಿಕ ಸ್ಕೋರ್ ಗಳಿಸಿದೆ.
ಭಾರತದ ಬಗ್ಗೆ ಹೇಳುವುದಾದರೆ, 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಏಳು ವಿಕೆಟ್ ನಷ್ಟಕ್ಕೆ 331 ರನ್ ಗಳಿಸಿತ್ತು. ಇದು ಈ ಟೂರ್ನಿಯಲ್ಲಿ ಭಾರತದ ಅತ್ಯಧಿಕ ಸ್ಕೋರ್ ಆಗಿದೆ. ಆ ವರ್ಷ, ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಕೂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಟೀಮ್ ಇಂಡಿಯಾ ಈ ಸ್ಕೋರ್ ಅನ್ನು ಮತ್ತಷ್ಟು ಹೆಚ್ಚಿಸಿಕೊಂಡು 350 ರನ್ ಗಳಿಸಲು ಸಾಧ್ಯವಾಗುತ್ತದೆಯೇ ಎಂದು ನೋಡಲು ಆಸಕ್ತಿದಾಯಕವಾಗಿದೆ.
ಈ ಬಾರಿ ಟೂರ್ನಿ ಪಾಕ್‌ನಲ್ಲಿ ನಡೆಯಲಿದೆ. ಈ ಮೈದಾನಗಳು ಬ್ಯಾಟಿಂಗ್ ಫ್ರೆಂಡ್ಲಿ ಆಗಿರಲಿವೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ಸಾಕಷ್ಟು ರನ್ ಹರಿದು ಬರುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications