ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನಕ್ಕೆ ದೊಡ್ಡ ತಲೆ ನೋವು: ಪಾಪ... ಬಾಬರ್ ಅಜಂ ಪಡೆ!
2023ರ ಏಕದಿನ ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹಿನ್ನಡೆಯಾಗಿದೆ. ಪಾಕ್ ಮೈದಾನದಲ್ಲಿ ಸ್ಥಿರ ಪ್ರದರ್ಶನ ನೀಡದಿರುವುದು ಒಂದು ಕಡೆ ಆದರೆ, ಇನ್ನೊಂದು ಬದಿ ಪಾಕ್ ಆಟಗಾರರ ಜೇಬು ಖಾಲಿ ಖಾಲಿ ಆಗಿದೆ. ವರದಿಗಳ ಪ್ರಕಾರ ಪಾಕ್ ಆಟಗಾರರು ಕಳೆದ ನಾಲ್ಕು ತಿಂಗಳಿಂದ ಸಂಬಳ ಪಡೆದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.
ಸಂಬಳ ನೀಡದ ಕಾರಣ, ಪಾಕಿಸ್ತಾನ ಆಟಗಾರರು, ಕ್ರಿಕೆಟ್ ಮಂಡಳಿಗೆ ಧಮ್ಕಿ ಹಾಕುತ್ತಿದ್ದಾರೆ. ಆಟಗಾರರು, ತಂಡದ ವಿಶ್ವಕಪ್ ಪ್ರಚಾರ ಮತ್ತು ಪ್ರಾಯೋಜಕತ್ವದ ಲೋಗೊಗಳನ್ನು ಬಹಿಷ್ಕರಿಸುವ ಬೆದರಿಕೆ ಹಾಕುತ್ತಿದ್ದಾರೆ. ಇದು ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಕ್ರಿಕೆಟ್ ಪಾಕಿಸ್ತಾನ ವರದಿಯ ಪ್ರಕಾರ, ಕಳೆದ ನಾಲ್ಕು ತಿಂಗಳಿಂದ ಪಾಕಿಸ್ತಾನಿ ಆಟಗಾರರು ತಮ್ಮ ಪಂದ್ಯ ಶುಲ್ಕ ಅಥವಾ ಸಂಬಳವನ್ನು ಪಡೆದಿಲ್ಲ. ಇದರಿಂದಾಗಿ ಆಟಗಾರರಲ್ಲಿ ಸಾಕಷ್ಟು ಕೋಪವಿದೆ. ಆಟಗಾರರ ವೇತನದಲ್ಲಿ ಭಾರಿ ಏರಿಕೆ ಆಗಲಿದೆ ಎಂದು ಹಿಂದಿನ ವರದಿಗಳು ಹೇಳಿದ್ದವು. ಆದರೆ ಹೊಸ ಕೇಂದ್ರ ಒಪ್ಪಂದಕ್ಕೆ ಇನ್ನೂ ಸಹಿ ಹಾಕಿಲ್ಲ.
ಹೆಸರು ಬಹಿರಂಗಗೊಳಿಸದ ಪಾಕಿಸ್ತಾನ ತಂಡದ ಆಟಗಾರರೊಬ್ಬರು ಪಿಸಿಬಿಗೆ, "ನಾವು ಪಾಕಿಸ್ತಾನವನ್ನು ಉಚಿತವಾಗಿ ಪ್ರತಿನಿಧಿಸಲು ಸಿದ್ಧರಿದ್ದೇವೆ, ಆದರೆ ಮಂಡಳಿಯೊಂದಿಗೆ ಸಂಬಂಧ ಹೊಂದಿರುವ ಪ್ರಾಯೋಜಕತ್ವದ ಜನರನ್ನು ನಾವು ಏಕೆ ಉತ್ತೇಜಿಸಬೇಕು" ಎಂಬುದಾಗಿ ಪ್ರಶ್ನಿಸಿದ್ದಾರೆ.
ಐಸಿಸಿ ಮತ್ತು ಪ್ರಾಯೋಜಕರಿಂದ ಆದಾಯದ ಪಾಲು
ಅಂತೆಯೇ, ನಾವು ಪ್ರಚಾರ ಚಟುವಟಿಕೆಗಳಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರಾಕರಿಸಬಹುದು. "ವಿಶ್ವಕಪ್ ಸಮಯದಲ್ಲಿ, ನಾವು ICC ವಾಣಿಜ್ಯ ಪ್ರಚಾರಗಳು ಮತ್ತು ಚಟುವಟಿಕೆಗಳೊಂದಿಗೆ ಸಂಬಂಧ ಹೊಂದುವುದಿಲ್ಲ" ಎಂದಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಆಟಗಾರರು ಐಸಿಸಿ ಮತ್ತು ಪ್ರಾಯೋಜಕರಿಂದ ಆದಾಯದ ಪಾಲನ್ನು ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ಮತ್ತು ಪ್ರಾಯೋಜಕರಿಂದ ಸುಮಾರು 9.8 ಶತಕೋಟಿ ರೂಪಾಯಿಗಳನ್ನು ಪಡೆಯುತ್ತದೆ.
ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡ
ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು 2023 ರ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಅಕ್ಟೋಬರ್ 6 ರಂದು ಹೈದರಾಬಾದ್‌ನಲ್ಲಿ ಆಡಲಿದೆ.
ಇದಾದ ಬಳಿಕ ತಂಡ ತನ್ನ ಎರಡನೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಅಕ್ಟೋಬರ್ 10ರಂದು ಹೈದರಾಬಾದ್‌ನಲ್ಲಿಯೇ ಆಡಲಿದೆ. ನಂತರ ತಂಡವು ಅಹಮದಾಬಾದ್ ತಲುಪಲಿದ್ದು, ಇಲ್ಲಿ ಅಕ್ಟೋಬರ್ 14 ರಂದು ಭಾರತದ ವಿರುದ್ಧ ಹೈವೋಲ್ಟೇಜ್ ಪಂದ್ಯವನ್ನು ಆಡಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications