RCB ಮಾಜಿ ಸಹಾಯಕ ಕೋಚ್‌ಗೆ ಸಿಎಸ್‌ಕೆ ಗಾಳ
ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಮೆಗಾ ಲೀಗ್‌ಗೆ ಭರ್ಜರಿ ತಯಾರಿಗಳು ನಡೆದಿವೆ. ಈ ಲೀಗ್‌ನ ಯಶಸ್ವಿ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸ್ಥಾನ ಪಡೆದಿವೆ. ಚೆನ್ನೈ ಈ ಬಾರಿಯ ಐಪಿಎಲ್‌ಗೆ ಸನ್ನದ್ಧವಾಗಿದ್ದು, ಫೈನಲ್ ಟಚ್ ನೀಡುತ್ತಿದೆ. ಈ ಬಾರಿ ಆರನೇ ಬಾರಿ ಟ್ರೋಫಿಗೆ ಮುತ್ತಿಡುವ ಕನಸನ್ನು ಚೆನ್ನೈ ಕಾಣುತ್ತಿದೆ. ಈ ವೇಳೆ ತಂಡಕ್ಕೆ ಸ್ಟಾರ್ ಸಹಾಯಕ ಸಿಬ್ಬಂದಿ ಎಂಟ್ರಿ ಪಡೆದಿದ್ದಾರೆ. ಇವರ ಆಗಮನದಿಂದ ಚೆನ್ನೈ ತಂಡದ ಬಲ ಹೆಚ್ಚಾಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಈ ಬಾರಿ ತನ್ನ ಅಭಿಯಾನವನ್ನು ಮಾರ್ಚ್ 23 ರಂದು ಆಡಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸವಾಲು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಮ್ಯಾನೇಜ್ಮೆಂಟ್ ಸಹಾಯಕ ಮಂಡಳಿಗೆ ಸ್ಟಾರ್ ಸಿಬ್ಬಂದಿಯನ್ನು ಬರಮಾಡಿಕೊಂಡಿದೆ. ಅವರೇ ಅಪಾರ ಅನುಭವ ಹೊಂದಿರುವ ಬೌಲಿಂಗ್ ಕೋಚ್ ಶ್ರೀಧರನ್ ಶ್ರೀರಾಮ್. ಇವರ ಆಗಾಮನ ನಿಜಕ್ಕೂ ಚೆನ್ನೈ ತಂಡದ ಬಲವನ್ನು ವೃದ್ಧಿಗೊಳಿಸಿದೆ.

ಬ್ರಾವೋ ಬದಲಿಗೆ ಶ್ರೀಧರನ್
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ತಂಡದ ಬೌಲಿಂಗ್ ಕೋಚ್ ಆಗಿ ವೆಸ್ಟ್ ಇಂಡೀಸ್ ತಂಡ ಡ್ವೇನ್ ಬ್ರಾವೋ ಕಾರ್ಯನಿರ್ವಹಿಸಿದ್ದರು. ಈಗ ಇವರು ಕೋಲ್ಕತ್ತಾ ನೈಟ್ ರೈಟರ್ಸ್‌ನ ಮಾರ್ಗದರ್ಶಕರಾಗಿದ್ದಾರೆ. ಹೀಗಾಗಿ ಇವರ ಸ್ಥಾನಕ್ಕೆ ಸಿಎಸ್‌ಕೆ ಮ್ಯಾನೇಜ್ಮೆಂಟ್ ಶ್ರೀಧರನ್ ಶ್ರೀರಾಮ್ ಅವರನ್ನು ನೇಮಕ ಮಾಡಿದೆ.
ಶ್ರೀಧರನ್ ಅನುಭವ
ಈಗಾಗಲೇ ಶ್ರೀಧರನ್ ಅವರು ಐಪಿಎಲ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ಇವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹಾಯಕ ಕೋಚ್ ಆಗಿದ್ದರು. ಅಲ್ಲದೆ ಡೆಲ್ಲಿ ಕ್ಯಾಂಪ್‌ನಲ್ಲಿ ಕೆಲಸ ಮಾಡಿದ ಅನುಭವ ಸಹ ಹೊಂದಿದ್ದಾರೆ. ಈಗ ಇವರು ಯೆಲ್ಲೋ ಆರ್ಮಿ ತಂಡ ಸೇರಿಕೊಂಡಿದ್ದಾರೆ. ಇವರು ಕೋಚ್ ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಶ್ರೀಧರನ್ ಶ್ರೀರಾಮ್ 2016 ರಿಂದ 20224 ವರೆಗೆ ಆಸ್ಟ್ರೇಲಿಯಾ ತಂಡದ ಸಹಾಯಕ ತರಬೇತುದಾರರಾಗಿ ಕೆಲಸ ಮಾಡಿದ ಅನುಭ ಹೊಂದಿದ್ದಾರೆ. ಅವರು ಆರ್‌ಸಿಬಿ ತಂಡದೊಂದಿಗೆ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್ ತರಬೇತುದಾರರಾಗಿ ಕೆಲಸ ಮಾಡಿದರು. ಇನ್ನು ಇವರು ಬಾಂಗ್ಲಾದೇಶ ಪರವೂ ಕೆಲಸ ಮಾಡಿದ ಅನುಭವಿ.
ಸಿಎಸ್‌ಕೆ ತಂಡ: ರುತುರಾಜ್ ಗಾಯಕ್ವಾಡ್, ಮಥಿಶಾ ಪತಿರಾನ, ಶಿವಂ ದುಬೆ, ರವೀಂದ್ರ ಜಡೇಜ, ಎಂಎಸ್ ಧೋನಿ, ಡೆವೊನ್ ಕಾನ್ವೇ, ರಾಹುಲ್ ತ್ರಿಪಾಠಿ, ರಚಿನ್ ರವೀಂದ್ರ, ಆರ್. ಅಶ್ವಿನ್, ಖಲೀಲ್ ಅಹ್ಮದ್, ನೂರ್ ಅಹ್ಮದ್, ವಿಜಯ್ ಶಂಕರ್, ಸ್ಯಾಮ್ ಕರನ್, ಶೇಖ್ ರಶೀದ್, ಅನ್ಶುಲ್ ಕಾಂಬೋಜ್, ಮುಖೇಶ್ ಚೌಧರಿ, ದೀಪಕ್ ಹೂಡಾ, ಗುರ್ಜಪ್ನೀತ್ ಸಿಂಗ್, ನಾಥನ್ ಎಲ್ಲಿಸ್, ಜೇಮೀ ಓವರ್ಟನ್, ಕಮಲೇಶ್ ನಾಗರ್ಕೋಟಿ, ರಾಮಕೃಷ್ಣ ಘೋಷ್, ಶ್ರೇಯಸ್ ಗೋಪಾಲ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications