ಕ್ರಿಕೆಟ್: ಐಪಿಎಲ್ ಗೆಲುವಿನಲ್ಲಿ ಸೆಂಚುರಿ ಬಾರಿಸಿದ ಚೆನ್ನೈ ಸೂಪರ್ ಕಿಂಗ್ಸ್

ವಿಶಾಖಪಟ್ಟಣ, ಮೇ 11: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಫೈನಲ್ ಪ್ರವೇಶದ ಕನಸನ್ನು ನುಚ್ಚುನೂರು ಮಾಡಿದ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ 100ನೇ ಗೆಲುವಿನ ಸಂಭ್ರಮಾಚರಿಸಿದೆ. ವಿಶಾಖಪಟ್ಟಣದಲ್ಲಿ ಶುಕ್ರವಾರ (ಮೇ 10) ನಡೆದ ಕ್ವಾಲಿಫೈಯರ್-2ರ ಗೆಲುವಿನೊಂದಿಗೆ ಸಿಎಸ್‌ಕೆ ಐಪಿಎಲ್ ಜಯದ ಸೆಂಚುರಿ ಬಾರಿಸಿತು.
ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಜಯ ಗಳಿಸಿ 8ನೇ ಬಾರಿಗೆ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನಲ್ಲಿ ಚೆನ್ನೈ, ಮುಂಬೈ ಇಂಡಿಯನ್ಸ್ ಎದುರು ಕಾದಾಡಲಿದೆ.
ಈ ಬಾರಿಯ ಐಪಿಎಲ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವ ಎಂಐ ಮತ್ತು ಸಿಎಸ್‌ಕೆ ಎರಡೂ ತಂಡಗಳು ಐಪಿಎಲ್ 100 ಗೆಲುವಿನ ಸಂಭ್ರಮಾಚರಿಸಿಕೊಂಡಿವೆ. ಎರಡೂ ತಂಡಗಳೂ ತಲಾ ಮೂರು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವುದು ಮತ್ತೊಂದು ವಿಶೇಷ. ಹೀಗಾಗಿ 12ನೇ ಆವೃತ್ತಿಯ ಈ ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications