For Quick Alerts
ALLOW NOTIFICATIONS  
For Daily Alerts
 

ಮುಂದಿನ ಆವೃತ್ತಿಗೆ CSK ಯಾವ ಆಟಗಾರರನ್ನು ಕೈ ಬಿಡಬಹುದು

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತನ್ನದೇ ಆದ ಗತ್ತು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ಬಾರಿ ಚೆನ್ನೈ ಅಂಕ ಪಟ್ಟಿಯಲ್ಲಿ ಕೊನೆಯಿಂದ ಮೊದಲ ಸ್ಥಾನದಲ್ಲಿದೆ. ಈ ವೇಳೆ ಸಿಎಸ್‌ಕೆ ತಂಡ ಮುಂದಿನ ಆವೃತ್ತಿಗೆ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ನಲ್ಲಿ ಐದು ಬಾರಿ ಟ್ರೋಫಿಗೆ ಮುತ್ತಿಟ್ಟ ತಂಡ. ಐದು ಬಾರಿ ಲೀಗ್ ಚಾಂಪಿಯನ್‌ ಪಟ್ಟಕ್ಕೇ ಏರಿದ ತಂಡಗಳಲ್ಲಿ ಸಿಎಸ್‌ಕೆಗೆ ಅಗ್ರ ಸ್ಥಾನ. ಧೋನಿ ಸಾರಥ್ಯದಲ್ಲಿ ಈ ತಂಡ ಕಮಾಲ್‌ ಮಾಡಿದೆ. ಆದರೆ ಈ ಆವೃತ್ತಿಯಲ್ಲಿ ಸಿಎಸ್‌ಕೆ ಅಬ್ಬರಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಎಷ್ಟು ಆಟಗಾರರನ್ನು ತಂಡ ಉಳಿಸಿಕೊಳ್ಳುತ್ತದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

Chennai Super Kings Fail to Impress in IPL 2025 Who Will They Release Next Season

ಚೆನ್ನೈ ಈ ಆವೃತ್ತಿಯಲ್ಲಿ ಆಡಿದ 13 ಪಂದ್ಯಗಳಲ್ಲಿ 3 ಜಯ ಸಾಧಿಸಿದ್ದು, ಈ ಮೂಲಕ 6 ಅಂಕಗಳನ್ನು ಕಲೆ ಹಾಕಿದೆ. ಈ ಮೂಲಕ ಪ್ಲೇ ಆಫ್‌ ಪ್ರವೇಶಿಸದೇ ಮತ್ತೊಂದು ಲೀಗ್‌ನ್ನು ಕೈ ಬಿಟ್ಟಿದೆ.

ಕಿವೀಸ್‌ ಪ್ಲೇಯರ್‌ಗಳ ಫ್ಲಾಪ್‌ ಶೋ!

ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ರಚಿನ್‌ ರವೀಂದ್ರ ಅವರ ಮೇಲೆ ಚೆನ್ನೈ ಭರವಸೆ ಇಟ್ಟಿತ್ತು. ಇವರು ಈ ಲೀಗ್‌ನಲ್ಲಿ ಒಮ್ಮೆ ಮಾತ್ರ ಅರ್ಧಶತಕ ಬಾರಿಸಿದ್ದಾರೆ. ಇವರು ಕಳಪೆ ಪ್ರದರ್ಶನ ಮುಂದುವರೆಸಿದ್ದರಿಂದ ಇವರಿಗೆ ಲೀಗ್‌ನ ಅಷ್ಟೂ ಪಂದ್ಯಗಳನ್ನು ಆಡುಡ ಅವಕಾಶ ಸಿಗಲಿಲ್ಲ. ಇವರು ಆಡಿದ 8 ಪಂದ್ಯಗಳಲ್ಲಿ 27.29ರ ಸರಾಸರಿಯಲ್ಲಿ 191 ರನ್ ಗಳಿಸಿದರು. ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ ತಂಡದ ಡೇವಾನ್‌ ಕಾನ್ವೆ ಈ ಬಾರಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದರು. ಇವರು ಆಡಿದ 5 ಪಂದ್ಯಗಳಲ್ಲಿ 104 ನರ್‌ ಸಿಡಿಸಿ ನಿರಾಸೆ ಅನುಭವಿಸಿದರು.

Chennai Super Kings Fail to Impress in IPL 2025 Who Will They Release Next Season

ರಾಹು ಕಾಟ

ಒಂದು ಆವೃತ್ತಿಯಲ್ಲಿ ಸತತ 5 ಪಂದ್ಯಗಳಲ್ಲಿ 5 ಸಿಕ್ಸರ್‌ ಬಾರಿಸಿ ಸುದ್ದಿಯಲ್ಲಿದ್ದ ರಾಹುಲ್ ತ್ರಿಪಾಠಿ, ಈ ಬಾರಿ ಫ್ಲಾಪ್ ಆದ್ರು. ಇವರು ಆಡಿದ 5 ಪಂದ್ಯಗಳಲ್ಲಿ 11ರ ಸರಾಸರಿಯಲ್ಲಿ 55 ರನ್‌ ಕಲೆ ಹಾಕಿದ್ದಾರೆ. ದೀಪಕ್‌ ಹೂಡ್ ಸಹ ಚೆನ್ನೈ ತಂಡವನ್ನು ಖರೀದಿಸಿತ್ತು. ಆದರೆ ಈ ಬಾರಿ ಐಪಿಎಲ್‌ನಲ್ಲಿ ಇವರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಹೀಗಾಗಿ ಇವರನ್ನು ಸಹ ಚೆನ್ನೈ ಮುಂದಿನ ಐಪಿಎಲ್‌ನಲ್ಲಿ ಉಳಿಸಿಕೊಳ್ಳುವುದು ಡೌಟ್‌ ಎನ್ನಲಾಗುತ್ತಿದೆ.

Story first published: Wednesday, May 21, 2025, 21:02 [IST]
Other articles published on May 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+