Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 CSK vs DC: ಚೆನ್ನೈ ತಂಡಕ್ಕೆ ಸವಾಲಿನ ಗುರಿ; ಕೆಎಲ್ ರಾಹುಲ್ ಅರ್ಧಶತಕದ ಮಿಂಚು

ಇಂದು ಐಪಿಎಲ್‌ನಲ್ಲಿ ಡಬಲ್ ಹೆಡರ್ ಇದೆ. ಮಧ್ಯಾಹ್ನದ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಐಪಿಎಲ್ 2025 ರ 17ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಚೆಪಾಕ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಭರ್ಜರಿ ಇನ್ನಿಂಗ್ಸ್ ಆಡಿದ್ದಾರೆ.

ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಸರ್ ಪಟೇಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‍‌ಗಳ ಬೆವರಿಳಿಸಿದ ಡೆಲ್ಲಿ ಬ್ಯಾಟರ್ ಕೆಎಲ್ ರಾಹುಲ್ ಅಮೋಘ ಅರ್ಧಶತಕ ಬಾರಿಸಿ ಮಿಂಚಿದರು. ಕೆಎಲ್ ರಾಹುಲ್ ಅವರ ಅರ್ಧಶತಕ ನೆರವಿನಿಂದ ಡೆಲ್ಲಿ ನಿಗದಿತ 20 ಓವರ್‍‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 183 ರನ್‌ ಕಲೆ ಹಾಕಿದೆ. ಚೆನ್ನೈ ಗೆಲುವು ಸಾಧಿಸಲು 184 ರನ್ ಗಳಿಸಬೇಕಾಗಿದೆ.

Chennai Super Kings vs Delhi Capitals IPL 2025 17th Match First innings report

ಡೆಲ್ಲಿ ಕ್ಯಾಪಿಟಲ್ಸ್ ಪರ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್‍‌ನಲ್ಲೇ ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್ ಅವರು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಔಟ್ ಮಾಡಿ ಡೆಲ್ಲಿ ತಂಡಕ್ಕೆ ಶಾಕ್ ನೀಡಿದರು. ನಂತರ ಕೆಎಲ್ ರಾಹುಲ್ ಜೊತೆಗೂಡಿದ ಅಭಿಷೇಕ್ ಪೊರೆಲ್ ಡೆಲ್ಲಿ ತಂಡಕ್ಕೆ ನೆರವಾದರು. ಕೆಎಲ್ ರಾಹುಲ್ ಮತ್ತು ಅಭಿಷೇಕ್ ಪೊರೆಲ್ 54 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.

ಅದ್ಭುತವಾಗಿ ಆಡುತ್ತಿದ್ದ ಅಭಿಷೇಕ್ ಪೊರೆಲ್ 33 ರನ್ ಗಳಿಸಿ ಔಟಾದರೆ, ನಾಯಕ ಅಕ್ಸರ್ ಪಟೇಲ್ 21 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಚೆನ್ನೈ ಬೌಲರ್‍‌ಗಳನ್ನು ಬೆಂಡೆತ್ತಿದರು. ಅಲ್ಲದೆ, ಅರ್ಧಶತಕವನ್ನು ಪೂರೈಸಿ ಮಿಂಚಿದರು. ಇತ್ತ ಸಮೀರ್ ರಿಜ್ವಿ 20 ರನ್ ಗಳಿಸಿ ಔಟ್ ಆದರು.

ಕೆಎಲ್ ರಾಹುಲ್ ಅಬ್ಬರ

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ರಾಹುಲ್ ಅರ್ಧಶತಕ ಸಿಡಿಸುವ ಮೂಲಕ ಡೆಲ್ಲಿ 150 ರನ್‌ಗಳ ಗಡಿ ದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು 51 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 77 ರನ್‌ಗಳನ್ನು ಕಲೆ ಹಾಕಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಅಶುತೋಷ್ ಶರ್ಮಾ ಕೂಡ 1 ರನ್‌ ಗಳಿಸಿ ರನೌಟ್‌ಗೆ ಬಲಿಯಾದರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 12 ಎಸೆತಗಳಲ್ಲಿ 24 ರನ್ ಗಳಿಸಿ ಅಜೇಯರಾಗುಳಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ತವರಿನಲ್ಲಿ ಬೌಲರ್‍‌ಗಳು ಮತ್ತೊಮ್ಮೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡುವಿದರು. ಖಲೀಲ್ ಅಹ್ಮದ್ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ, ನೂರ್ ಆಹ್ಮದ್ ಮತ್ತು ಮಥೀಷ ಪತಿರಾನ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಮುಖೇಶ್ ಚೌಧರಿ ತಮ್ಮ 4 ಓವರ್‍‌ಗಳಲ್ಲಿ 50 ರನ್ ನೀಡಿ ದುಬಾರಿ ಬೌಲರ್‍‌ ಎನಿಸಿಕೊಂಡರು.

Story first published: Saturday, April 5, 2025, 17:26 [IST]
Other articles published on Apr 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+