ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ 2025 ರ 17ನೇ ಪಂದ್ಯ ಇಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲಿದೆ. ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಎರಡರಲ್ಲಿ ಸೋಲು ಕಂಡಿರುವ ಸಿಎಸ್‌ಕೆ 2 ಅಂಕಗಳೊಂದಿಗೆ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಡಿಸಿ ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇಂದಿನ ಮೊದಲ ಪಂದ್ಯದಲ್ಲಿ ಸ್ಟಾರ್ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅದರಲ್ಲೂ ಡಿಸಿ ಪರ ಆಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಆಟದ ಮೇಲೆ ಎಲ್ಲರ ಕಣ್ಣಿದೆ.
ಈ ಪಂದ್ಯದಲ್ಲಿ ಸಿಎಸ್‌ಕೆ ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸುತ್ತಿದ್ದರೆ, ಡೆಲ್ಲಿ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದೆ. ಈ ಪಂದ್ಯವು ಚೆನ್ನೈನ ಬಿಸಿಲಿನ ಮಧ್ಯೆ ಮಧ್ಯಾಹ್ನ ನಡೆಯಲಿದ್ದು, ಇಲ್ಲಿನ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯಕವಾಗಿದ್ದು, ಎರಡೂ ತಂಡಗಳ ಗೆಲುವಿನ ಸಾಧ್ಯತೆಗಳು ಬಹುತೇಕ ಸಮಾನವಾಗಿವೆ.

ಡೆಲ್ಲಿ ಕ್ಯಾಟಪಿಲ್ಸ್ ತಂಡ ಸ್ಟಾರ್ ಆಟಗಾರರಿಂದ ತುಂಬಿದೆ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ಫಿಟ್ ಆಗಿದೆ. ಆಟಗಾರರು ಕೂಡ ಡೆಲ್ಲಿ ಪರ ಕಳೆದ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೆಎಲ್ ರಾಹುಲ್, ಫಾಪ್ ಡು ಪ್ಲೆಸಿಸ್, ಅಕ್ಸರ್ ಪಟೇಲ್, ಟ್ರಿಸ್ಟಾನ್ ಸ್ಟಬ್ಸ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್ ಮತ್ತು ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್ ಅವರಂತಹ ಸ್ಟಾರ್ ಆಟಗಾರರು ಅಬ್ಬರಿಸುವ ನಿರೀಕ್ಷೆಯಿದೆ.
ಸತತ ಎರಡು ಸೋಲುಗಳಿಂದ ಕೆಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಸಾಮಾನ್ಯ ತಂಡದಂತೆ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿ ಬ್ಯಾಟಿಂಗ್ ಲೈನ್ ಆಫ್ ಹೇಳಿಕೊಳ್ಳುವಂತಿಲ್ಲ. ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ರವಿಚಂದ್ರನ್ ಅಶ್ವಿನ್ ಮತ್ತು ನೂರ್ ಅಹ್ಮದ್ ಅವರಿಂದ ಹೆಚ್ಚಿನ ಪ್ರದರ್ಶನವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ 30 ಪಂದ್ಯಗಳ ನಡೆದಿವೆ. ಚೆನ್ನೈ ತಂಡ 19 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ. ಡೆಲ್ಲಿ ಕೇವಲ 11 ರಲ್ಲಿ ಗೆಲುವು ಕಂಡಿದೆ. ಇನ್ನೂ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡ ನಡುವಿನ 9 ಮುಖಾಮುಖಿಯಲ್ಲಿ ಚೆನ್ನೈ 7 ರಲ್ಲಿ ಜಯಗಳಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್: ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ರಾಹುಲ್ ತ್ರಿಪಾಠಿ, ಶಿವಂ ದುಬೆ, ವಿಜಯ್ ಶಂಕರ್, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್‌ಕೀಪರ್), ಜೇಮಿ ಓವರ್ಟನ್, ಆರ್ ಅಶ್ವಿನ್, ನೂರ್ ಅಹ್ಮದ್, ಮಥೀಸಾ ಪತಿರಾನ
ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೆಯಿದೆ. ಈ ಪಂದ್ಯದಲ್ಲಿ ಉಭಯ ತಂಡಗಳಲ್ಲಿರುವ ಸ್ಟಾರ್ ಆಟಗಾರರು ಮಿಂಚುವ ಸಾಧ್ಯತೆಯಿದೆ. ಅಲ್ಲದೆ, ಇಂತಹ ಆಟಗಾರರನ್ನು ಡ್ರೀಮ್ ಟೀಮ್ ಮಾಡುವವರು ಸೇರಿಸಿಕೊಳ್ಳಬಹುದು. ಈ ಕುರಿತು ಎಂಬುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್‌ಕೀಪರ್‍ಗಳಿದ್ದಾರೆ. ಚೆನ್ನೈ ತಂಡದಲ್ಲಿ ದಿಗ್ಗಜ ಎಂಎಸ್ ಧೋನಿ ಇದ್ದಾರೆ, ಡೆಲ್ಲಿ ತಂಡಕ್ಕೆ ಕೆಎಲ್ ರಾಹುಲ್ ಆಸರೆಯಾಗಿದ್ದಾರೆ. ಐಪಿಎಲ್ 2025 ರಲ್ಲಿ ಧೋನಿ ಕೆಲವು ಸ್ಟಂಪ್ ಔಟ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಆದರೆ ಡೆಲ್ಲಿ ಪರ ಒಂದು ಪಂದ್ಯ ಆಡಿರುವ ರಾಹುಲ್ ಅವರಿಂದ ಇನ್ನೂ ಅದ್ಭುತ ನಡೆದಿಲ್ಲ. ಹೀಗಾಗಿ ಈ ಇಬ್ಬರು ವಿಕೆಟ್‌ಕೀಪರ್‍ಗಳ ಮೇಲೆ ಇಂದು ಎಲ್ಲರ ಚಿತ್ತ ನೆಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರಚಿನ್ ರವೀಂದ್ರ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ತಂಡದಲ್ಲಿ ಹಾಕಿಕೊಳ್ಳಬಹುದಾಗಿದೆ. ಚೆನ್ನೈ ಪರ ಈ ಇಬ್ಬರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಡೆಲ್ಲಿ ಕಡೆ ನೋಡುವುದಾರೆ ಆರಂಭಿಕ ಫಾಫ್ ಡು ಪ್ಲೆಸಿಸ್ ಡ್ರೀಮ್ ತಂಡದಲ್ಲಿ ಟಾಪ್ ಬ್ಯಾಟರ್ ಆಗಿದ್ದಾರೆ. ಫಾಫ್ ಕೂಡ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಉಭಯ ತಂಡಗಳಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‍ಗಳಿದ್ದಾರೆ. ಐಪಿಎಲ್ 2025 ರಲ್ಲಿ ಡೆಲ್ಲಿ ನಾಯಕ ಅಕ್ಸರ್ ಪಟೇಲ್ ಮತ್ತು ಚೆನ್ನೈ ಸ್ಪಿನ್ನರ್ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಇಬ್ಬರು ಆಲ್‌ರೌಂಡರ್‍ಗಳು ಪಂದ್ಯದ ಗತಿಯನ್ನು ಬ್ಯಾಟಿಂಗ್ ಅಥವಾ ಬೌಲಿಂಗ್ ಮೂಲಕ ಬದಲಾಯಿಸಬಲ್ಲರು. ಹೀಗಾಗಿ ಈ ಇಬ್ಬರು ಡ್ರೀಮ್ ಟೀಮ್‌ನಲ್ಲಿರುವುದು ಉತ್ತಮ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ವಿದೇಶಿ ಬೌಲರ್‍ಗಳ ಬಲವಿದೆ. ಡೆಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಮಿಚೆಕ್ ಸ್ಟಾರ್ಕ್ ಮುನ್ನಡೆಸುತ್ತಿದ್ದಾರೆ. ಇನ್ನೂ ಚೆನ್ನೈ ತಂಡದ ಪರ ಮಥೀಶ ಪತಿರಾನ ಮತ್ತು ನೂರ್ ಅಹ್ಮದ್ ಜೋಡಿ ಬೌಲಿಂಗ್‌ನಲ್ಲಿ ನೆರವಾಗುತ್ತಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಪಿಚ್ ಸ್ಪಿನ್ನರ್‍ಗಳಿಗೆ ನೆರವಾಗುವ ಕಾರಣ ಕುಲ್‌ದೀಪ್ ಯಾದವ್ ಮತ್ತು ನೂರ್ ಅಹ್ಮದ್ ಅವರನ್ನು ಡ್ರೀಮ್ ಟೀಮ್‌ಗೆ ಆಯ್ಕೆ ಮಾಡಬಹುದಾಗಿದೆ.
ವಿಕೆಟ್ ಕೀಪರ್‌ಗಳು: ಕೆಎಲ್ ರಾಹುಲ್, ಎಂಎಸ್ ಧೋನಿ
ಬ್ಯಾಟರ್‌ಗಳು: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಚಿನ್ ರವೀಂದ್ರ (ನಾಯಕ)
ಆಲ್‌ರೌಂಡರ್‌ಗಳು: ಅಕ್ಷರ್ ಪಟೇಲ್, ರವೀಂದ್ರ ಜಡೇಜಾ
ಬೌಲರ್‌ಗಳು: ಮಿಚೆಲ್ ಸ್ಟಾರ್ಕ್ (ಉಪನಾಯಕ), ಕುಲದೀಪ್ ಯಾದವ್, ಮಥೀಶ ಪತಿರಾನ, ನೂರ್ ಅಹ್ಮದ್