Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Turning point: ಸಿಎಸ್‌ಕೆ ತಂಡದ ಹೀನಾಯ ಸೋಲಿಗೆ ಇದೇ ಕಾರಣ

ಐಪಿಎಲ್ 2025 ರ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಕೆಕೆಆರ್ 8 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಸಿಎಸ್‌ಕೆ ಐಪಿಎಲ್ 2025 ರಲ್ಲಿ ಸತತ ಐದನೇ ಸೋಲನ್ನು ಎದುರಿಸಬೇಕಾಯಿತು. ಸಿಎಸ್‌ಕೆ ತಂಡದ ಒಂದೇ ಸೀಸನ್‌ನಲ್ಲಿ ಸತತ ಐದು ಸೋಲುಗಳನ್ನು ಕಂಡಿರುವುದು ಇದೇ ಮೊದಲು.

ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‍‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 103 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 10.1 ಓವರ್‍‌ಗಳಲ್ಲಿ 107 ರನ್ ಗಳಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಹೀನಾಯ ಸೋಲಿಗೆ ಈ ಒಂದು ವಿಕೆಟ್ ಕಾರಣವಾಯಿತು. ಒಂದು ವೇಳೆ ಈ ಬ್ಯಾಟರ್ ವಿಕೆಟ್‌ ಕಳೆದುಕೊಳ್ಳದಿದ್ದರೆ ಸಿಎಸ್‌ಕೆ ಒಳ್ಳೆಯ ಸ್ಕೋರ್ ಗಳಿಸಬಹುದಾಗಿತು.

Chennai Super Kings vs Kolkata Knight Riders IPL 2025 Match 25 Turning Point

ಸುನಿಲ್ ನರೈನ್ ಅವರ ಮಾರಕ ಸ್ಪಿನ್ ದಾಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತತ್ತರಿಸಿತು. ಒಂದು ಪ್ರಮುಖ ಹಂತದಲ್ಲಿ ವಿಜಯ್ ಶಂಕರ್ ಅವರ ಔಟ್ ಆಗಿದ್ದು, ಪಂದ್ಯವನ್ನು ಕೆಕೆಆರ್ ಪರವಾಗಿ ತಿರುಗಿಸಿತು. ಇದು ಪಂದ್ಯದ ಪ್ರಮುಖ ಟರ್ನಿಂಗ್ ಪಾಯಿಂಟಿ ಆಯಿತು.

ಸಿಎಸ್‌ಕೆ ತಂಡ 10 ನೇ ಓವರ್‌ನಲ್ಲಿ 2 ವಿಕೆಟ್‌ಗೆ 59 ರನ್ ಗಳಿಸಿದ್ದಾಗ, ವಿಜಯ್ ಶಂಕರ್ ಅದ್ಭುತವಾಗಿ ಆಡುತ್ತಿದರು. ಅವರು 21 ಎಸೆತಗಳಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 29 ರನ್ ಗಳಿಸಿ ಸ್ಥಿರ ಪ್ರದರ್ಶನ ನೀಡುತ್ತಿದರು. ಅವರು ಆಡುತ್ತಿದ್ದ ರೀತಿ ಸಿಎಸ್‌ಕೆ ತಂಡದ ಇನ್ನಿಂಗ್ಸ್ ಅನ್ನು ಬಲಪಡಿಸುವಂತಿತ್ತು.

ವಿಜಯ್ ಶಂಕರ್ ಸಿಎಸ್‌ಕೆ ತಂಡವನ್ನು 140 ರನ್‌ಗಳತ್ತ ಮುನ್ನಡೆಸತ್ತಾರೆ ಎಂಬ ನಿರೀಕ್ಷೆಗಳನ್ನು ಅಭಿಮಾನಿಗಳು ಇಟ್ಟುಕೊಂಡಿದ್ದರು. ಆದರೆ, ಸಿಎಸ್‌ಕೆ ತಂಡ ಮತ್ತು ಅಭಿಮಾನಿಗಳ ಲೆಕ್ಕಚಾರವನ್ನು ವರುಣ್ ಚಕ್ರವರ್ತಿ ಉಲ್ಟಾ ಮಾಡಿದರು. ವಿಜಯ್ ಶಂಕರ್ ವಿಕೆಟ್ ಪಡೆದ ವರುಣ್ ಚಕ್ರವರ್ತಿ ಎಲ್ಲಾ ಭರವಸೆಗಳನ್ನು ಕೆಲವೇ ಸೆಕೆಂಡುಗಳಲ್ಲಿ ಮುರಿದರು. ಇದು ಸಿಎಸ್‌ಕೆ ಸೋಲಿಗೆ ಪ್ರಮುಖ ಕಾರಣವಾಯಿತು. ಅಲ್ಲದೆ, ಪಂದ್ಯ ಟರ್ನಿಂಗ್ ಪಾಯಿಂಟ್ ಇದಾಯಿತು. ಒಂದು ವೇಳೆ ಕ್ರೀಸ್‌ನಲ್ಲಿ ಶಿವಂ ದುಬೆ ಅವರೊಂದಿಗೆ ವಿಜಯ್ ಶಂಕರ್ ಇದಿದ್ದರೆ, ಸಿಎಸ್‌ಕೆ ಸವಾಲಿನ ಮೊತ್ತ ಕಲೆ ಹಾಕುವ ಅವಕಾಶವನ್ನು ಹೊಂದಿರುತ್ತಿತ್ತು.

Story first published: Friday, April 11, 2025, 23:28 [IST]
Other articles published on Apr 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+