ಐಪಿಎಲ್ ಇತಿಹಾಸದಲ್ಲಿ ಎರಡು ಅತ್ಯಂತ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಪಂದ್ಯ ರೋಚಕತೆ ಹುಟ್ಟಿಸಿದೆ. ಭಾನುವಾರ (ಮಾರ್ಚ್ 23) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025 ರ ಮೂರನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ . ಭಾರತೀಯ ಕಾಲಮಾನ ಪ್ರಕಾರ ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಮಧ್ಯಾಹ್ನ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‍ಹೆಚ್) ಹಾಗೂ ರಾಜಸ್ಥಾನ ರಾಯಲ್ಸ್ (ಆರ್‍ಆರ್) ತಂಡಗಳು ಕಾದಾಟ ನಡೆಸಲಿವೆ.
ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದ್ದು, ಐಪಿಎಲ್ 2025ರಲ್ಲಿ ತನ್ನ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸುವ ನಿರೀಕ್ಷೆಯಿಟ್ಟುಕೊಂಡಿದೆ. ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಕೂಡ ಚಾಂಪಿಯನ್ ಆಟಗಾರರನ್ನು ಹೊಂದಿದ್ದು, ಗೆಲುವಿನ ಖಾತೆ ತೆರೆಯಲು ಸಜ್ಜಾಗಿದೆ.

ರವೀಂದ್ರ ಜಡೇಜಾ ಅವರಂತಹ ಅನುಭವಿ ಆಟಗಾರರು ಮತ್ತು ಮಥೀಷ ಪತಿರಾನ ಅವರಂತಹ ಯುವ ಆಟಗಾರರೊಂದಿಗೆ ಸಿಎಸ್‌ಕೆ ತಂಡ ತವರಿನ ಚೆಪಾಕ್ ಮೈದಾನದಲ್ಲಿ ಪ್ರಾಬಲ್ಯ ಸಾಧಿಸುವ ಗುರಿಯನ್ನು ಹೊಂದಿದೆ. ಮುಂಬೈ ಇಂಡಿಯನ್ಸ್ ತಂಡವು ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಆಡುತ್ತಿದ್ದರೂ, ಶುಭಾರಂಭ ಮಾಡಲು ರೆಡಿಯಾಗಿದೆ.
ಐಪಿಎಲ್‌ನಲ್ಲಿ ಸಿಎಸ್‌ಕೆ ಮತ್ತು ಎಂಐ ತಂಡಗಳು ಒಟ್ಟು 37 ಬಾರಿ ಮುಖಾಮುಖಿಯಾಗಿವೆ. ಎಂಐ 20 ಗೆಲುವುಗಳೊಂದಿಗೆ ಸ್ವಲ್ಪ ಮುನ್ನಡೆಯಲ್ಲಿದ್ದರೆ, ಸಿಎಸ್‌ಕೆ 17 ಗೆಲುವುಗಳನ್ನು ಗಳಿಸಿದೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ವಿರುದ್ಧ ಮುಂಬೈ ಪ್ರಾಬಲ್ಯ ಸಾಧಿಸಿದೆ.
ಸಿಎಸ್‌ಕೆ: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಶಿವಂ ದುಬೆ, ದೀಪಕ್ ಹೂಡಾ, ಸ್ಯಾಮ್ ಕುರಾನ್, ಎಂಎಸ್ ಧೋನಿ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ನೂರ್ ಅಹ್ಮದ್, ಮಥೀಶ ಪತಿರಾನ, ಖಲೀಲ್ ಅಹ್ಮದ್.
ಎಂಐ: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್‌ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ನಮನ್ ಧೀರ್, ರಾಬಿನ್ ಮಿಂಜ್, ದೀಪಕ್ ಚಹಾರ್, ಮಿಚೆಲ್ ಸ್ಯಾಂಟ್ನರ್, ಕರ್ಣ್ ಶರ್ಮಾ, ಟ್ರೆಂಟ್ ಬೌಲ್ಟ್, ರೀಸ್ ಟಾಪ್ಲೆ.
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಡೆವೊನ್ ಕಾನ್ವೇ, ರಾಹುಲ್ ತ್ರಿಪಾಠಿ, ಶೇಕ್ ರಶೀದ್, ವಂಶ್ ಬೇಡಿ (ವಿಕೆಟ್ ಕೀಪರ್), ಸಿ ಆಂಡ್ರೆ ಸಿದ್ಧಾರ್ಥ್, ರಾಚಿನ್ ರವೀಂದ್ರ, ರವಿಚಂದ್ರನ್ ಅಶ್ವಿನ್, ವಿಜಯ್ ಶಂಕರ್, ಸ್ಯಾಮ್ ಕರನ್, ಅಂಶುಲ್ ಕಾಂಬೋಜ್, ದೀಪಕ್ ಹೂಡಾ, ಜೇಮೀ ಓವರ್ಟನ್, ಕಮಲೇಶ್ ನಾಗರ್ಕೋಟಿ, ರಾಮಕೃಷ್ಣ ಘೋಷ್, ರವೀಂದ್ರ ಜಡೇಜಾ, ಶಿವಂ ದುಬೆ, ಖಲೀಲ್ ಅಹ್ಮದ್, ನೂರ್ ಅಹ್ಮದ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್, ನಾಥನ್ ಎಲ್ಲಿಸ್, ಶ್ರೇಯಸ್ ಗೋಪಾಲ್, ಮಥೀಷ ಪತಿರಾನ.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಾಬಿನ್ ಮಿಂಜ್, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಶ್ರೀಜಿತ್ ಕೃಷ್ಣನ್ (ವಿಕೆಟ್ ಕೀಪರ್), ಬೆವೊನ್ ಜಾಕೋಬ್ಸ್, ತಿಲಕ್ ವರ್ಮಾ, ನಮನ್ ಧೀರ್, ವಿಲ್ ಜಾಕ್ಸ್, ಮಿಚೆಲ್ ಸ್ಯಾಂಟ್ನರ್, ರಾಜ್ ಅಂಗದ್ ಬಾವಾ, ವಿಘ್ನೇಶ್ ಪುತೂರ್, ಕಾರ್ಬಿನ್ ಬಾಷ್, ಟ್ರೆಂಟ್ ಬೌಲ್ಟ್, ಕರ್ಣ್ ಶರ್ಮಾ, ದೀಪಕ್ ಚಾಹರ್, ಅಶ್ವನಿ ಕುಮಾರ್, ರೀಸ್ ಟೋಪ್ಲಿ, ವಿಎಸ್ ಪೆನ್ಮೆಟ್ಸಾ, ಅರ್ಜುನ್ ತೆಂಡೂಲ್ಕರ್, ಮುಜೀಬ್ ಉರ್ ರೆಹಮಾನ್, ಜಸ್ಪ್ರೀತ್ ಬುಮ್ರಾ.