For Quick Alerts
ALLOW NOTIFICATIONS  
For Daily Alerts
 

IPL 2025 CSK vs RR: ಸಿಎಸ್‌ಕೆ ಎದುರು ಗೆಲುವಿನ ನಿರೀಕ್ಷೆಯಲ್ಲಿ ರಿಯಾನ್ ಪರಾಗ್ ಪಡೆ

ಐಪಿಎಲ್ 2025 ರ 11 ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಫಾರ್ಮ್‌ಗೆ ಮರಳಲು ತಯಾರಿ ನಡೆಸಿವೆ. ಉಭಯ ತಂಡಗಳ ಪಂದ್ಯಕ್ಕೆ ಗುವಾಹಟಿ ಬರ್ಸಪರ ಕ್ರಿಕೆಟ್ ಸ್ಟೇಡಿಯಂ ಅತಿಥ್ಯ ವಹಿಸಿದ್ದು, ಇಂದು ಅಂದರೆ ಭಾನುವಾರ ರಾತ್ರಿ 7.30 ಗಂಟೆಗೆ ಪಂದ್ಯ ಆರಂಭವಾಗಲಿದೆ. ರಾಜಸ್ಥಾನ ರಾಯಲ್ಸ್ ಆಡಿರುವ ಎರಡು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಪಂದ್ಯದ ಗೆಲುವಿನ ನಂತರ ಆರ್‍‌ಸಿಬಿ ವಿರುದ್ಧ ಸೋಲು ಕಂಡಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 8ನೇ ಸ್ಥಾನದಲ್ಲಿದೆ.

ರಿಯಾನ್ ಪರಾಗ್ ನೇತೃತ್ವದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ಇಂದು ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ರಾಜಸ್ಥಾನ ಮೊದಲ ಗೆಲುವು ಕಾಣುವ ನಿರೀಕ್ಷೆಯಲ್ಲಿದೆ. ಶುಕ್ರವಾರ ಆರ್‍‌ಸಿಬಿ ಎದುರು ಹೀನಾಯ ಸೋಲು ಕಂಡಿರುವ ಚೆನ್ನೈ ಗೆಲುವಿನ ಟ್ರ್ಯಾಕ್‌ಗೆ ಮರಳಲು ಸಜ್ಜಾಗಿದೆ.

Chennai Super Kings vs Rajasthan Royals IPL 11th Match Preview

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2025 ರ ಸೀಸನ್ ಅನ್ನು ಅದ್ಭುತವಾಗಿ ಆರಂಭಿಸಿತು. ಆದಾಗ್ಯೂ, ಆರ್‌ಸಿಬಿ ವಿರುದ್ಧದ ಎರಡನೇ ಪಂದ್ಯದಲ್ಲಿ ಸಿಎಸ್‌ಕೆ 50 ರನ್‌ಗಳಿಂದ ಸೋಲು ಅನುಭವಿಸಿತು. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ವೇಗಿ ಖಲೀಲ್ ಅಹ್ಮದ್ 29 ರನ್‌ಗಳಿಗೆ 3 ಪಡೆದರೆ, ಸ್ಪಿನ್ನರ್ ನೂರ್ ಅಹ್ಮದ್ 18 ರನ್‌ಗಳಿಗೆ 4 ವಿಕೆಟ್ ಉರುಳಿಸಿದರು. ರಚಿನ್ ರವೀಂದ್ರ ಮತ್ತು ರುತುರಾಜ್ ಗಾಯಕ್ವಾಡ್ ಅರ್ಧಶತಕ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆದರೆ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಆಟ ನಡೆಯಲಿಲ್ಲ.

ಐಪಿಎಲ್ 2025 ರ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಸಲಿ ಆಟ ಹೊರ ಬಂದಿಲ್ಲ. ಸನ್‌ರೈಸರ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಚೇಸಿಂಗ್ ಸಮಯದಲ್ಲಿ ಅರ್ಧಶತಕಗಳನ್ನು ಗಳಿಸಿದರೂ, ಇಶಾನ್ ಕಿಶನ್ ಅವರ ಭರ್ಜರಿ ಶತಕದಿಂದ ಗೆಲುವು ಸಿಗಲಿಲ್ಲ. ಬಳಿಕ ಕೆಕೆಆರ್ ವಿರುದ್ಧದ ತವರಿನ ಪಂದ್ಯದಲ್ಲೂ ಈ ದುಃಸ್ಥಿತಿ ಮುಂದುವರೆಯಿತು.

ಹೆಡ್‌ ಟು ಹೆಡ್

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ 29 ರೋಚಕ ಪಂದ್ಯಗಳು ನಡೆದಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 16 ರಲ್ಲಿ ಗೆಲುವು ಸಾಧಿಸಿದರೆ, ರಾಜಸ್ಥಾನ ರಾಯಲ್ಸ್ 13 ರಲ್ಲಿ ಜಯ ಕಂಡಿದೆ. ಕಳೆದ ಐದು ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ನಾಲ್ಕರಲ್ಲಿ ರಾಜಸ್ಥಾನ ಸೋಲಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮೊದಲ ಬಾರಿಗೆ ಬರ್ಸಪರ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ರಾಜಸ್ಥಾನ ನಾಲ್ಕು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ಒಮ್ಮೆ ಮಾತ್ರ ಗೆದ್ದಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಎರಡು ಬಾರಿ ಮತ್ತು ಕೆಕೆಆರ್ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲು ಕಂಡಿದೆ. ಹೀಗಾಗಿ ಇಂದು ಚೆನ್ನೈ ಎದುರು ರಾಜಸ್ಥಾನ ಗೆಲುವಿನ ನಿರೀಕ್ಷೆಯಲ್ಲಿದೆ.

ಸಂಭಾವ್ಯ ಪ್ಲೇಯಿಂಗ್ 11

ರಾಜಸ್ಥಾನ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಿಯಾನ್ ಪರಾಗ್(ನಾಯಕ), ಧ್ರುವ ಜುರೆಲ್(ವಿಕೆಟ್‌ಕೀಪರ್), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.

ಚೆನ್ನೈ ಸೂಪರ್ ಕಿಂಗ್ಸ್ : ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ರುತುರಾಜ್ ಗಾಯಕ್ವಾಡ್(ನಾಯಕ), ದೀಪಕ್ ಹೂಡಾ, ಸ್ಯಾಮ್ ಕುರ್ರಾನ್, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿಕೆಟ್‌ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮತೀಶ ಪತಿರಾನ, ಖಲೀಲ್ ಅಹ್ಮದ್.

Story first published: Sunday, March 30, 2025, 8:09 [IST]
Other articles published on Mar 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+