For Quick Alerts
ALLOW NOTIFICATIONS  
For Daily Alerts
 

IPL 2024: ಚೆನ್ನೈ ತಂಡಕ್ಕೆ ಬಹುವಾಗಿ ಕಾಡುತ್ತಿದೆ ಆಟಗಾರರ ಗಾಯ

ಸಿಎಸ್‌ಕೆಗೆ ಆರಂಭವಾಗಿದೆ ಒಂದು ದೊಡ್ಡ ಚಿಂತೆ. ಈ ಚಿಂತೆ ನಿಜಕ್ಕೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡುವಂತೆ ಮಾಡಿದೆ. ನಿಜಕ್ಕೂ ಈ ಸುದ್ದಿಯನ್ನು ಕೇಳಿದರೆ ಸಿಎಸ್‌ಕೆ ತಂಡದ ಅಭಿಮಾನಿಗಳು ಸಹ ಚಿಂತೆಗೆ ಈಡಾಗೋದು ಗ್ಯಾರಂಟಿ..

ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಆರ್‌ಸಿಬಿ ನಡುವೆ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಯಾವ ಸಂಯೋಜನೆಯೊಂದಿಗೆ ಕಣಕ್ಕೆ ಇಳಿಯಬೇಕು ಎಂಬ ಚಿಂತೆ ಬಹುವಾಗಿ ಕಾಡುತ್ತಿದೆ. ಏಕೆಂದರೆ ಚೆನ್ನೈ ತಂಡಕ್ಕೆ ಆಟಗಾರರ ಗಾಯ ಕಾಡುತ್ತಿದೆ.

Chennai team is suffering from player injuries

ಡೆವೊನ್ ಕಾನ್ವೇ

ನ್ಯೂಜಿಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ ಅವರನ್ನು ಸಿಎಸ್‌ಕೆ 1 ಕೋಟಿ ರೂ.ಗೆ ಖರೀದಿಸಿದೆ. ಅವರು 2022 ರಿಂದ ತಂಡದಲ್ಲಿದ್ದಾರೆ. ಕಾನ್ವೇ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅವರು 16 ಪಂದ್ಯಗಳಲ್ಲಿ 672 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರು 6 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಈ ಋತುವಿನಲ್ಲಿ ಡೆವೊನ್ ಕಾನ್ವೇ ಆಡುವುದು ಕಷ್ಟ ಎನ್ನಲಾಗುತ್ತಿದೆ. ಕಾನ್ವೇಯ ಎಡಗೈ ಹೆಬ್ಬೆರಳಿಗೆ ಗಾಯವಾಗಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು.

ಮತಿಶ ಪತಿರಾನ

ವೇಗದ ಬೌಲರ್ ಮತಿಶ ಪತಿರಾನ ಅವರನ್ನು 2022 ರಲ್ಲಿ CSK ಖರೀದಿಸಿತ್ತು. 2023 ಐಪಿಎಲ್‌ ಸಹ ಇವರು ಚೆನ್ನೈ ಪರವೇ ಆಡಲಿದ್ದಾರೆ. ಇವರನ್ನು ಚೆನ್ನೈ ಹರಾಜಿಗೆ ಬಿಟ್ಟಿರಲಿಲ್ಲ. ಪತಿರಾನ ಕಳೆದ ಋತುವಿನಲ್ಲಿ 12 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದರು.

Chennai team is suffering from player injuries

ಪತಿರಾನ 2022ರಲ್ಲಿ ಕೇವಲ 2 ಪಂದ್ಯಗಳನ್ನು ಆಡಿದ್ದರು. ಈ ಅವಧಿಯಲ್ಲಿ 2 ವಿಕೆಟ್ ಪಡೆದಿದ್ದರು. ಆದರೆ ಈ ಋತುವಿನಲ್ಲಿ ಆಡುವುದು ಅವರಿಗೆ ಕಷ್ಟ. ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ವೇಳೆ ಪತಿರಾನಾ ಗಾಯಗೊಂಡಿದ್ದಾರೆ.

ಮುಸ್ತಾಫಿಜುರ್ ರೆಹಮಾನ್

ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಉತ್ತಮ ಬೌಲರ್‌. ಸಿಎಸ್ ಕೆ ಸ್ಟಾರ್ ಕಟರ್‌ ಬೌಲರ್‌ನನ್ನು 2 ಕೋಟಿ ರೂ.ಗೆ ಖರೀದಿಸಿತ್ತು. ಅವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಐಪಿಎಲ್ 2024 ರ ಆರಂಭಿಕ ಪಂದ್ಯಗಳಲ್ಲಿ ಮುಸ್ತಾಫಿಜುರ್ ಆಡುವುದು ಕಷ್ಟ.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ 2024 ರ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದರು. ಮುಸ್ತಫಿಜುರ್ ಗಂಭೀರವಾಗಿ ಗಾಯಗೊಂಡಿದ್ದು, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು.

ಈ ಆಟಗಾರರನ್ನು ಬಿಟ್ಟು ಹೇಗೆ ಸಿಎಸ್‌ಕೆ ತಂಡವನ್ನು ಕಟ್ಟುತ್ತದೆ ಎಂಬುದೇ ದೊಡ್ಡ ಚಿಂತೆಯಾಗಿದೆ. ಧೋನಿ ಮೊದಲ ಪಂದ್ಯದಲ್ಲಿ ಯಾವೆಲ್ಲಾ ಆಟಗಾರರನ್ನು ಕಣಕ್ಕೆ ಇಳಿಸುತ್ತಾರೆ ಎಂಬುದು ಕುತೂಹಲ ಹೆಚ್ಚಿಸಿದೆ. ಧೋನಿ ಪಡೆಯಲ್ಲಿ ಸ್ಟಾರ್ ಯುವ ಆಟಗಾರರು ಇದ್ದು, ಅನುಭವಿಗಳ ಸ್ಥಾನವನ್ನು ತುಂಬಲು ರೆಡಿಯಾಗಿದ್ದಾರೆ.

Story first published: Monday, March 18, 2024, 16:31 [IST]
Other articles published on Mar 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+