Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಡೆಲ್ಲಿ ಕಾಡಿದ ಧೋನಿ-ತಾಹಿರ್-ಜಡೇಜಾ, ಚೆನ್ನೈಗೆ ಸುಲಭ ಜಯ

Chennai vs Delhi, 50th Match - Live Cricket Score

ಚೆನ್ನೈ, ಮೇ 1: ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ದ್ವಿತೀಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವಣ 50ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಚೆನ್ನೈ 80 ರನ್ ಸುಲಭ ಜಯ ಗಳಿಸಿದೆ. ಎಂಎಸ್ ಧೋನಿಯ ಮಿಂಚಿನ ವೇಗದ ಸ್ಟಂಪಿಂಗ್, ಇಮ್ರಾನ್ ತಾಹಿರ್-ರವೀಂದ್ರ ಜಡೇಜಾ ಮಾರಕ ಬೌಲಿಂಗ್ ಡಿಸಿಗೆ ಸೋಲಿನ ಬೆಲೆ ತೆರುವಂತೆ ಮಾಡಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈಗೆ ಫಾ ಡು ಪ್ಲೆಸಿಸ್ 39, ಸುರೇಶ್ ರೈನಾ 59, ಎಂಎಸ್ ಧೋನಿ 44, ರವೀಂದ್ರ ಜಡೇಜಾ 25 ರನ್‌ ಕೊಡುಗೆಯಿತ್ತರು. 20 ಓವರ್‌ಗೆ ಸಿಎಸ್‌ಕೆ 4 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತು.

ಪಂದ್ಯ Live ಸ್ಕೋರ್‌ಕಾರ್ಡ್ ಕೆಳಗಿದೆ

1
45926

ಗುರಿ ಬೆನ್ನತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ನಿರ್ಲಕ್ಷ್ಯದಾಟವಾಡಿತು. ಪೃಥ್ವಿ ಶಾ 4, ಶಿಖರ್ ಧವನ್ 19, ರಿಷಬ್ ಪಂತ್ 5 ರನ್‌ಗೆ ವಿಕೆಟ್ ನೀಡಿದ್ದು ತಂಡಕ್ಕೆ ದುಬಾರಿಯೆನಿಸಿತು. ಡೆಲ್ಲಿ ಪರ ಕೊಸರಾಡಿದ್ದು ನಾಯಕ ಶ್ರೇಯಸ್ ಐಯ್ಯರ್ ಮಾತ್ರ. ಅಯ್ಯರ್ 44 ರನ್ ಸೇರಿಸಿದರು.

ಡೆಲ್ಲಿ 16.2 ಓವರ್‌ಗೆ ಸರ್ವ ಪತನ ಕಂಡು 99 ರನ್ ಬಾರಿಸಿ ಶರಣಾಯ್ತು. ಡೆಲ್ಲಿ ಸೋಲಿಗೆ ಮುಖ್ಯ ಕಾರಣ ಚೆನ್ನೈ ನಾಯಕ ಎಂಎಸ್ ಧೋನಿ ಸ್ಟಂಪಿಂಗ್ ಕೈಚಳಕ (2 ಸ್ಟಂಪ್ಡ್), ಇಮ್ರಾನ್ ತಾಹಿರ್ (12ಕ್ಕೆ 4 ವಿಕೆಟ್) ಮತ್ತು ರವೀಂದ್ರ ಜಡೇಜಾ (9ಕ್ಕೆ 3 ವಿಕೆಟ್) ಮಾರಕ ಬೌಲಿಂಗ್ ದಾಳಿ.

ಚೆನ್ನೈ ಸೂಪರ್‌ ಕಿಂಗ್ಸ್ ತಂಡ: ಶೇನ್ ವ್ಯಾಟ್ಸನ್, ಫಾ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ಸಿ & ವಿಕೆ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ದೀಪಕ್ ಚಹಾರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಐಯರ್ (ಸಿ), ರಿಷಬ್ ಪಂತ್ (W), ಕಾಲಿನ್ ಇಂಗ್ರಾಮ್, ಶೆರ್ಫೇನ್ ರುದರ್ಫೋರ್ಡ್, ಆಕ್ಸರ್ ಪಟೇಲ್, ಜಗದೀಶ ಸುಚಿತ್, ಸಂದೀಪ್ ಲಮಿಚಾನೆ, ಅಮಿತ್ ಮಿಶ್ರಾ, ಟ್ರೆಂಟ್ ಬೌಲ್ಟ್.

Story first published: Wednesday, May 1, 2019, 23:37 [IST]
Other articles published on May 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+