For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಡೆಲ್ಲಿ ಟ್ರೋಫಿ ಕನಸು ಭಗ್ನ, ಚೆನ್ನೈ ಸೂಪರ್‌ ಕಿಂಗ್ಸ್ ಫೈನಲ್‌ಗೆ ಲಗ್ಗೆ

Chennai vs Delhi, Qualifier 2 - Live Cricket Score

ವಿಶಾಖಪಟ್ಟಣ, ಮೇ 10: ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ಶುಕ್ರವಾರ (ಮೇ 10) ನಡೆದ ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಚೆನ್ನೈ ಸೂಪರ್‌ ಕಿಂಗ್ಸ್ ಪ್ರಶಸ್ತಿ ಸುತ್ತಿಗೇರಿದೆ. ಇದರೊಂದಿಗೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಡೆಲ್ಲಿ ಕನಸು ಭಗ್ನವಾದಂತಾಗಿದೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ವೈಫಲ್ಯ ತೋರಿಕೊಂಡಿತು. ರಿಷಬ್ ಪಂತ್ 38, ಶಿಖರ್ ಧವನ್ 18, ಕಾಲಿನ್ ಮುನ್ರೋ 27, ನಾಯಕ ಶ್ರೇಯಸ್ ಐಯ್ಯರ್ 13, ಶೆರ್ಫೇನ್ ರುದರ್ಫೋರ್ಡ್ 10, ಇಶಾಂತ್ ಶರ್ಮಾ 10 ರನ್ ನೆರವಿನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 147 ರನ್ ಒಟ್ಟುಗೂಡಿಸಲಷ್ಟೇ ಡಿಸಿ ಶಕ್ತವಾಯ್ತು.

ಪಂದ್ಯದ Scorecard ಕೆಳಗಿದೆ

1
45948

ಡೆಲ್ಲಿ ಇನ್ನಿಂಗ್ಸ್ ವೇಳೆ ಚೆನ್ನೈಯ ದೀಪಕ್ ಚಾಹರ್, ಹರ್ಭಜನ್ ಸಿಂಗ್, ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೋ ತಲಾ 2 ವಿಕೆಟ್ ಪಡೆದು ಎದುರಾಳಿ ತಂಡ ದೊಡ್ಡ ಮೊತ್ತ ಸಂಪಾದಿಸದಂತೆ ತಡೆದರು.

ಡೆಲ್ಲಿ ನೀಡಿದ ಸುಲಭ ರನ್ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಫಾ ಡು ಪ್ಲೆಸಿಸ್ ಅರ್ಧಶತಕ (50 ರನ್, 39 ಎಸೆತ), ಶೇನ್ ವ್ಯಾಟ್ಸನ್ 50 (32 ಎಸೆತ), ಅಂಬಾಟಿ ರಾಯುಡು ಅಜೇಯ 20, ಸುರೇಶ್ ರೈನಾ 11 ರನ್‌ ಸೇರಿಸಿದರು. ಸಿಎಸ್‌ಕೆ 19 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತು.

ಇದು 8ನೇ ಬಾರಿಗೆ ಐಪಿಎಲ್ ಫೈನಲ್‌ಗೆ ಪ್ರವೇಶಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲಿದೆ. ಮೇ 12ರ ಭಾನುವಾರ ಹೈದರಾಬಾದ್‌ನ ರಾಜೀವ್ ಗಾಂಧೀ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ 12ನೇ ಆವೃತ್ತಿಯ ಅಂತಿಮ ಪಂದ್ಯ ನಡೆಯಲಿದೆ.

ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಫಾ ಡು ಪ್ಲೆಸಿಸ್ ಪಡೆದುಕೊಂಡರು. ಅಂತೂ ಐಪಿಎಲ್ ಫೈನಲ್‌ಗೆ ಪ್ರವೇಶಿಸದ ಏಕಮಾತ್ರ ತಂಡವಾಗಿ ಡೆಲ್ಲಿ ಉಳಿದುಕೊಂಡಿದೆ. ಈ ಸಾರಿ ಫೈನಲ್‌ ಪ್ರವೇಶಿಸಿರುವ ಮುಂಬೈ ಮತ್ತು ಚೆನ್ನೈ ಎರಡೂ ತಂಡಗಳು ಈವರೆಗೆ ತಲಾ 3 ಸಾರಿ ಐಪಿಎಲ್ ಟ್ರೋಫಿ ಎತ್ತಿವೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ಸಿ), ರಿಷಬ್ ಪಂತ್ (ವಾ), ಕಾಲಿನ್ ಮುನ್ರೋ, ಅಕ್ಸರ್ ಪಟೇಲ್, ಶೇರ್ಫೇನ್ ರುದರ್ಫೋರ್ಡ್, ಕೀಮೊ ಪಾಲ್, ಅಮಿತ್ ಮಿಶ್ರಾ, ಟ್ರೆಂಟ್ ಬೌಲ್ಟ್, ಇಶಾಂತ್ ಶರ್ಮಾ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಫಾ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ವಿಕೆ), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್.

Story first published: Friday, May 10, 2019, 23:30 [IST]
Other articles published on May 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+