For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ಸೋಲಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಸಿಎಸ್‌ಕೆ

Chennai vs Kolkata, 23rd Match - Live Cricket Score

ಚೆನ್ನೈ, ಏಪ್ರಿಲ್ 9: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 9) ನಡೆದ ಐಪಿಎಲ್ 23ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 7 ವಿಕೆಟ್ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45899

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್, ಸಿಎಸ್‌ಕೆ ಬೌಲರ್‌ಗಳ ದಾಳಿಗೆ ನಲುಗಿತು. ಕ್ರಿಸ್ ಲಿನ್ 0, ಸುನಿಲ್ ನರೇನ್ 6, ರಾಬಿನ್ ಉತ್ತಪ್ಪ 11, ನಿತೀಶ್ ರಾಣಾ 0, ದಿನೇಶ್ ಕಾರ್ತಿಕ್ 19, ಶುಭ್‌ಮಾನ್ ಗಿಲ್ 9 ರನ್‌ಗೆ ವಿಕೆಟ್ ಒಪ್ಪಿಸಿದರು.

ಚೆನ್ನೈ ಸೂಪರ್ ಕಿಂಗ್ಸ್‌ ಪರ ದೀಪಕ್ ಚಾಹರ್ 20 ರನ್‌ಗೆ 3, ಹರ್ಭಜನ್ ಸಿಂಗ್ 15 ರನ್‌ಗೆ 2, ಇಮ್ರಾನ್ ತಾಹಿರ್ 21 ರನ್‌ಗೆ 2 ವಿಕೆಟ್ ಕೆಡವಿ ಕಾಡಿದರು. ಕೋಲ್ಕತ್ತಾಗೆ ರಸೆಲ್ 44 ಎಸೆತಕ್ಕೆ ಭರ್ತಿ 50 ರನ್ ಸೇರಿಸಿ ಕೊಂಚ ಬೆಂಬಲಿಸಿದರು. ಕೆಕೆಆರ್ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 108 ರನ್ ಗಳಿಸಿತು.

109 ರನ್ ಸುಲಭ ಗುರಿ ಬೆನ್ನಟ್ಟಿದ ಚೆನ್ನೈ ಫಾ ಡು ಪ್ಲೆಸಿಸ್ ಅಜೇಯ 43 ರನ್ ನೆರವಿನೊಂದಿಗೆ 17.2 ಓವರ್‌ಗೆ 3 ವಿಕೆಟ್ ಕಳೆದು 111 ರನ್ ಗಳಿಸಿತು. ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ಚೆನ್ನೈಯ ದೀಪಕ್ ಚಾಹರ್ ಪಂದ್ಯಶ್ರೇಷ್ಠರೆನಿಸಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಕ್ರಿಸ್ ಲಿನ್, ಸುನಿಲ್ ನರೇನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ಸಿ & ವಿ.ಕೆ), ಶುಭ್‌ಮಾನ್ ಗಿಲ್, ಆ್ಯಂಡ್ರೆ ರಸೆಲ್, ಪಿಯೂಶ್ ಚಾವ್ಲಾ, ಕುಲ್ದೀಪ್ ಯಾದವ್, ಹ್ಯಾರಿ ಗರ್ನಿ, ಪ್ರಸಿದ್ಧ್ ಕೃಷ್ಣ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡ: ಶೇನ್ ವ್ಯಾಟ್ಸನ್, ಫಾ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ಸಿ & ವಿ.ಕೆ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಸ್ಕಾಟ್ ಕುಗ್ಲೆಲೀಜನ್, ದೀಪಕ್ ಚಾಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್.

Story first published: Tuesday, April 9, 2019, 23:48 [IST]
Other articles published on Apr 9, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+