ಐಪಿಎಲ್: ಕಿಂಗ್ಸ್ XI ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯಭೇರಿ

ಚೆನ್ನೈ, ಏಪ್ರಿಲ್ 6: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 22 ರನ್ ಜಯ ಗಳಿಸಿದೆ. ಪಂಜಾಬ್ ಪರ ಕೆಎಲ್ ರಾಹುಲ್, ಸರ್ಫರಾಜ್ ಖಾನ್ ಬಾರಿಸಿದ ಅರ್ಧಶತಕ ಬಾರಿಸಿದರಾದರೂ ಅದು ತಂಡಕ್ಕೆ ಗೆಲುವು ತರಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ 26 ರನ್, ಫಾ ಡು ಪ್ಲೆಸಿಸ್ ಅರ್ಧ ಶತಕ (54 ರನ್, 38 ಎಸೆತ), ಸುರೇಶ್ ರೈನಾ 17, ಎಂಎಸ್ ಧೋನಿ 37, ಅಂಬಾಟಿ ರಾಯುಡು 21 ರನ್ ನೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 160 ರನ್ ಗಳಿಸಿತು.
ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
161 ರನ್ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭದಲ್ಲಢ ವಿಕೆಟ್ ಗಳನ್ನು ಕಳೆದುಕೊಂಡಿತು. ಕ್ರಿಸ್‌ಗೇಲ್ 5, ಮಯಾಂಕ್ ಅಗರ್ವಾಲ್ 0, ಡೇವಿಡ್ ಮಿಲ್ಲರ್ 6 ರನ್‌ಗೆ ನಿರ್ಗಮಿಸಿದ್ದರು ತಂಡಕ್ಕೆ ದುಬಾರಿಯೆನಿಸಿತು.
ಆರಂಭಿಕ ಆಟಗಾರ ಕೆಎಲ್ ರಾಹುಲ್ 55, ಸರ್ಫರಾಜ್ ಖಾನ್ 67 ರನ್‌ನೊಂದಿಗೆ ತಂಡವನ್ನು ಗೆಲುವಿನೆಡೆಗೆ ಎಳೆಯುವ ಪ್ರಯತ್ನ ಮಾಡಿದರು. ಆದರೆ ಪಂಜಾಬ್ 20 ಓವರ್‌ಗೆ 5 ವಿಕೆಟ್ ಕಳೆದು 138 ರನ್ ಗಳಿಸಿ ಶರಣಾಯಿತು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ: ಲೋಕೇಶ್ ರಾಹುಲ್ (ವಿಕೆ), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್, ಸಿ.ಆರ್., ಆಂಡ್ರ್ಯೂ ಟೈ, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ.
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವ್ಯಾಟ್ಸನ್, ಫಾ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂಎಸ್ ಧೋನಿ (ಸಿ), ರವೀಂದ್ರ ಜಡೇಜಾ, ದೀಪಕ್ ಚಹರ್, ಸ್ಕಾಟ್ ಕುಗ್ಲೆಲೀಜನ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications