Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ರಾಜಸ್ಥಾನ್‌ಗೆ 8 ರನ್ ಸೋಲು, ಚೆನ್ನೈ ಸತತ 3ನೇ ಗೆಲುವು

Chennai vs Rajasthan, 12th Match - Live Cricket Score

ಚೆನ್ನೈ, ಮಾರ್ಚ್ 31: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 12ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 8 ರನ್ ಜಯ ಗಳಿಸಿದೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅರ್ಧಶತಕ ಮತ್ತು ಬೌಲರ್‌ಗಳ ಮಾರಕ ದಾಳಿಯ ನೆರವಿನಿಂದ ತಂಡ ಸತತ 3ನೇ ಗೆಲುವು ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೆ ಆರಂಭಿಕ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಭೀತಿಗೊಳಗಾಯಿತು. ಅಂಬಾಟಿ ರಾಯುಡು 1, ಶೇನ್ ವ್ಯಾಟ್ಸನ್ 13, ಕೇದಾರ್ ಜಾಧವ್ 8, ಸುರೇಶ್ ರೈನಾ 36, ಡ್ವೇನ್ ಬ್ರಾವೋ 27 ರನ್‌ಗೆ ವಿಕೆಟ್ ಒಪ್ಪಿಸಿದರು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45768

ಹೀಗಾಗಿ ಚೆನ್ನೈ ಒಟ್ಟಾರೆ ಸುಮಾರು 120 ರನ್ ಕಲೆ ಹಾಕಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ತಂಡದ ಬೆನ್ನಿಗೆ ನಿಂತ ಧೋನಿ 46 ಎಸೆತಗಳಿಗೆ ಅಜೇಯ 75 ರನ್ ಬಾರಿಸಿದರು. ಸಿಎಸ್‌ಕೆ 20 ಓವರ್‌ಗೆ 5 ವಿಕೆಟ್ ಕಳೆದು 175 ರನ್ ಪೇರಿಸಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ಅದಕ್ಕೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ಅಜಿಂಕ್ಯ ರಹಾನೆ 0, ಜಾಸ್ ಬಟ್ಲರ್ 6, ಸಂಜು ಸ್ಯಾಮ್ಸನ್ 8, ರಾಹುಲ್ ತ್ರಿಪಾಠಿ 39, ಸ್ಟೀವ್ ಸ್ಮಿತ್ 28, ಬೆನ್ ಸ್ಟೋಕ್ಸ್ 46, ಜೋಫ್ರಾ ಆರ್ಚರ್ ಅಜೇಯ 24 ರನ್‌ನೊಂದಿಗೆ ರಾಜಸ್ಥಾನ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದೊಂದಿಗೆ 167 ರನ್ ಗಳಿಸಿ ಶರಣಾಯಿತು.

ಇದು ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್‌ ಅನುಭವಿಸಿದ ಸತತ ಮೂರನೇ ಸೋಲು. ಚೆನ್ನೈ ಪರ ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹೀರ್ ಮತ್ತು ಡ್ವೇನ್ ಬ್ರಾವೋ ತಲಾ 2 ವಿಕೆಟ್ ಮುರಿದು ಪಾರಮ್ಯ ಮೆರೆದರು. 'ತಲೈವಾ' ಎಂಎಸ್‌ಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಸುರೇಶ್ ರೈನಾ, ಕೇದಾರ್ ಜಾಧವ್, ಎಂಎಸ್ ಧೋನಿ (ಸಿ & ವಿಕೆ), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹಾರ್, ಶಾರ್ಡುಲ್ ಠಾಕೂರ್, ಇಮ್ರಾನ್ ತಾಹಿರ್.

ರಾಜಸ್ಥಾನ್ ರಾಯಲ್ಸ್ ತಂಡ: ಅಜಿಂಕ್ಯ ರಹಾನೆ (ಸಿ), ಜಾಸ್ ಬಟ್ಲರ್ (ವಿಕೆ), ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ರಾಹುಲ್ ತ್ರಿಪಾಠಿ, ಕೃಷ್ಣಪ್ಪ ಗೌತಮ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕಾತ್, ಶ್ರೇಯಸ್ ಗೋಪಾಲ್, ಧವಳ್ ಕುಲಕರ್ಣಿ.

Story first published: Monday, April 1, 2019, 0:32 [IST]
Other articles published on Apr 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+