Chetan Sharma Sting Operation: ಟೀಂ ಇಂಡಿಯಾದ ಹಲವು ರಹಸ್ಯ ಬಹಿರಂಗಪಡಿಸಿದ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ

ಭಾರತ ಕ್ರಿಕೆಟ್ ತಂಡದಲ್ಲಿ ನಕಲಿ ಫಿಟ್‌ನೆಸ್ ಇಂಜೆಕ್ಷನ್ ಬಳಕೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಣದ ವಿಚಾರ, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವಿದ್ದ ಭಿನ್ನಾಭಿಪ್ರಾಯಕ್ಕೆ ನಿಜವಾದ ಕಾರಣದಂತಹ ರಹಸ್ಯ ವಿಷಯಗಳನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಟಿವಿ ಸ್ಟಿಂಗ್ ಆಪರೇಶನ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರು ಝೀ ಟಿವಿ ಚಾನೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ರಹಸ್ಯ ವಿಷಯಗಳನ್ನು ಬಹಿರಂಗಪಡಿಸಿದ ನಂತರ ಮಂಗಳವಾರ ವಿವಾದಕ್ಕೆ ಸಿಲುಕಿದ್ದಾರೆ.
ಝೀ ನ್ಯೂಸ್ ನಡೆಸಿದ ಸ್ಟಿಂಗ್ ಆಪರೇಶನ್‌ನಲ್ಲಿ ಹಲವು ಆತಂಕಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದು, ಬಿಸಿಸಿಐ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮೇಲೆ ದೊಡ್ಡ ಪ್ರಭಾವ ಬೀರುವ ಸಾಧ್ಯತೆ ಇದೆ.
"ನಾಯಕತ್ವ ಬಿಡಬೇಡಿ ಎಂದು ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದೆವು. ಆದರೆ, ಅಹಂನಿಂದಾಗಿ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದರು. ಇದಕ್ಕೆ ಸೌರವ್ ಗಂಗೂಲಿಯೇ ಎಂದು ನಂಬಿದ್ದಾರೆ. ವಿರಾಟ್ ಕೊಹ್ಲಿ ಓರ್ವ ಸುಳ್ಳುಗಾರ," ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಭಾರತೀಯ ಆಟಗಾರರು ನಕಲಿ ಫಿಟ್‌ನೆಸ್ ಚುಚ್ಚುಮದ್ದನ್ನು ಬಳಸುತ್ತಿದ್ದಾರೆ ಮತ್ತು ಬಿಸಿಸಿಐ ಉದ್ದೇಶಪೂರ್ವಕವಾಗಿ ಪ್ರಮುಖ ಆಟಗಾರರ ಫಿಟ್‌ನೆಸ್ ಅನ್ನು ಕಡೆಗಣಿಸುತ್ತಿದೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಶೇ.80ರಿಂದ 85ರಷ್ಟು ಫಿಟ್ ಆಗಿದ್ದರೂ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಬಹಳಷ್ಟು ಆಟಗಾರರು ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ ಎಂದು ಚೇತನ್ ಶರ್ಮಾ ಹೇಳಿಕೆ ದೊಡ್ಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರಂತಹ ಪ್ರಭಾವಿ ಆಟಗಾರರು ಮುಖ್ಯ ಆಯ್ಕೆಗಾರರನ್ನು ಹೇಗೆ ಒಲಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಸಿದ್ದು, ಪ್ರಮುಖ ಆಟಗಾರರನ್ನು ತಂಡದಿಂದ ಹೊರಹಾಕಲು ವಿಶ್ರಾಂತಿಯ ನೆಪ ಒಡ್ಡುವುದು ಸೇರಿದಂತೆ ಹಲವು ವಿಚಾರಗಳನ್ನು ಚೇತನ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಝೀ ನ್ಯೂಸ್‌ನ ಸ್ಪೈ ಕ್ಯಾಮೆರಾದಲ್ಲಿ, ಟೀಂ ಇಂಡಿಯಾದಲ್ಲಿ ನಕಲಿ ಫಿಟ್‌ನೆಸ್ ಚುಚ್ಚುಮದ್ದಿನ ಬಳಕೆಯ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರ ಮಾತನಾಡಿದ್ದಾರೆ. ನಕಲಿ ಫಿಟ್‌ನೆಸ್ ಚುಚ್ಚುಮದ್ದಿನ ಬಳಕೆಯ ಬಗ್ಗೆ ತಿಳಿದಿದ್ದರೂ ಮುಖ್ಯ ಆಯ್ಕೆದಾರರಿಗೆ ತಡೆಯಲು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ಪ್ರಭಾವ ಮತ್ತು ಒತ್ತಡಗಳು ಬಿಸಿಸಿಐನಲ್ಲಿ ಕೆಲಸ ಮಾಡುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನದ ನಂತರ ವಜಾಗೊಂಡ ನಂತರ, ಇತ್ತೀಚೆಗೆ ಮತ್ತೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಚೇತನ್ ಶರ್ಮಾ, ಕುಟುಕು ಕಾರ್ಯಾಚರಣೆಯಲ್ಲಿ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರ ಮೇಲೆ ನಿರ್ಲಕ್ಷಿಸುತ್ತಿರುವುದರ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗಿನ ಆಂತರಿಕ ಚರ್ಚೆಗಳನ್ನು ಕೂಡ ಚೇತನ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ 20 ಐ ಸರಣಿಗೆ ಒತ್ತಡದ ಮುರಿತದಿಂದ ಬುಮ್ರಾ ಹಿಂದಿರುಗಿದ ಬಗ್ಗೆ ಅವರ ಮತ್ತು ತಂಡದ ಮ್ಯಾನೇಜ್‌ಮೆಂಟ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಭಾರತದ ಮಾಜಿ ವೇಗದ ಬೌಲರ್ ಆರೋಪಿಸಿದ್ದಾರೆ.
ಬುಮ್ರಾ ಇನ್ನೂ ಆಟದಿಂದ ಹೊರಗುಳಿದಿದ್ದಾರೆ ಮತ್ತು ಅದರ ನಂತರ ಸಂಪೂರ್ಣ ನಾಲ್ಕು ಟೆಸ್ಟ್ ಬಾರ್ಡರ್-ಗವಾಸ್ಕರ್ ಸರಣಿ ಮತ್ತು ಮೂರು ಪಂದ್ಯಗಳ ODI ಸರಣಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಜಗಳವಿತ್ತು ಎಂದು ಚೇತನ್ ಶರ್ಮಾ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications