Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶತಕದ ಮೇಲೆ ಶತಕ ಬಾರಿಸುತ್ತಿರುವ ಪೂಜಾರ: ಇಂಗ್ಲೆಂಡ್‌ನಲ್ಲಿ ತನ್ನ ಮತ್ತೊಂದು ಮುಖ ತೋರಿಸಿದ ಭಾರತೀಯ!

Cheteshwar Pujara another Hundred in Royal London One-Day Cup smashes 174 off 131 balls

ಟೀಮ್ ಇಂಡಿಯಾದ ಅನುಭವಿ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ ಟೆಸ್ಟ್ ಮಾದರಿಗೆ ಮಾತ್ರವೇ ಫಿಟ್ ಅನ್ನೋದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಭಾವನೆ. ವೈಟ್‌ಬಾಲ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೂಜಾರ ಹೆಚ್ಚು ಅವಕಾಶ ಕೂಡ ಪಡೆದಿಲ್ಲ ಎಂಬುದು ಮತ್ತೊಂದು ಅಂಶ. ಆದರೆ ತಾನು ಸೀಮಿತ ಓವರ್‌ನಲ್ಲಿಯೂ ಎಂಥಾ ಅದ್ಭುತ ಆಟಗಾರ ಎಂಬುದನ್ನು ಚೇತೇಶ್ವರ್ ಪೂಜಾರ ಕ್ರಿಕೆಟ್‌ನ ತವರು ಇಂಗ್ಲೆಂಡ್‌ನಲ್ಲಿಯೇ ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ. ರಾಯಲ್ ಲಂಡನ್ ಏಕದಿನ ಟೂರ್ನಿಯಲ್ಲಿ ಸತತ ಎರಡನೇ ಸ್ಪೋಟಕ ಶತಕ ಬಾರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳು ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ ರಾಯಲ್ ಲಂಡನ್ ಕಪ್‌ನಲ್ಲಿ ಪೂಜಾರ ಸಸ್ಸೆಕ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಈ ಟೂರ್ನಿಯ ಎರಡನೇ ಪಂದ್ಯ ಆಗಸ್ಟ್ 14ರಂದು ನಡೆದಿದ್ದು ಈ ಪಂದ್ಯದಲ್ಲಿಯೂ ಪೂಜಾರ ಅಮೋಘ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಸತತ ಎರಡನೇ ಪಂದ್ಯದಲ್ಲಿಯೂ ಶತಕದ ಸಾಧನೆ ಮಾಡಿದ್ದಾರೆ ಪೂಜಾರ.

ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾರ

ಭಾನುವಾರ ನಡೆದ ಪಂದ್ಯದಲ್ಲಿ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ತಮ್ಮ ಶತಕವನ್ನು ಎಸೆತಕ್ಕೊಂದರಂತೆ ರನ್ ಬಾರಿಸಿ ಪೂರೈಸುತ್ತಾರೆ. ಆದರೆ ಅದಾದ ಬಳಿಕ ಮತ್ತೆ ಸ್ಪೋಟಕ ಬ್ಯಾಟಿಂಗ್‌ನ ಮೊರೆ ಹೋಗುತ್ತಾರೆ. ಎದುರಾಳಿ ತಂಡದ ಬೌಲರ್‌ಗಳನ್ನು ಅಕ್ಷರಶಃ ಚೆಂಡಾಡಿದ ಚೇರ್ತೇಶ್ವರ್ ಪೂಜಾರ ಮುಂದಿನ 31 ಎಸೆತಗಳಲ್ಲಿ ಭರ್ಜರಿ 74 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ಪೂಜಾರ 131 ಎಸೆತಗಳಲ್ಲಿ 174 ರನ್‌ಗಳನ್ನು ಗಳಿಸಿದರು.

205 ರನ್‌ಗಳ ಜೊತೆಯಾಟ

ಈ ಪಂದ್ಯದಲ್ಲಿ ಸಸ್ಸೆಕ್ಸ್ ತಂಡದ ಪರವಾಗಿ ಚೇತೇಶ್ವರ್ ಪೂಜಾರ ಹಾಗೂ ಮತ್ತೋರ್ವ ಆಟಗಾರ ಟಾಮ್ ಕ್ಲಾರ್ಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಟಾಮ್ ಕ್ಲಾರ್ಕ್ ಕೂಡ ಅದ್ಭುತ ಶತಕವನ್ನು ಗಳಿಸಿ ತಮಡಕ್ಕೆ ನೆರವಾದರು. ಈ ಜೋಡಿ ಸಸ್ಸೆಕ್ಸ್ ತಂಡದ ಪರವಾಗಿ ಭರ್ಜರಿ 205 ರನ್‌ಗಳ ಜೊತೆಯಾಟವನ್ನು ನೀಡಿದೆ. ಇದಕ್ಕೂ ಮುನ್ನ ತಂಡ ಕೇವಲ 9 ರನ್‌ಗಳಿಸಿದ್ದಾಗ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇನ್ನು ಪೂಜಾರ ಅವರ ಈ ಇನ್ನಿಂಗ್ಸ್‌ 20 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡಿತ್ತು.

ಐಪಿಎಲ್‌ನಲ್ಲಿ ಎಷ್ಟು ರನ್ ಬಾರಿಸಿದರೆ ಬಿಸಿಸಿಐ ಆಯ್ಕೆ ಮಾಡುತ್ತೆ ಎಂಬುದು ಈಗ ಅರ್ಥವಾಗಿದೆ ಎಂದ ರಾಣಾ!

ಹಿಂದಿನ ಪಂದ್ಯದಲ್ಲಿಯೂ ಪೂಜಾರ ಶತಕ

ಇನ್ನು ಇದಕ್ಕೂ ಹಿಂದಿನ ಪಂದ್ಯದಲ್ಲಿಯೂ ಸಸ್ಸೆಕ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದ ಚೇತೇಶ್ವರ್ ಪೂಜಾರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಸಂಚಲನ ಮೂಡಿಸಿದ್ದರು. ಆ ಪಂದ್ಯದಲ್ಲಿ ಪೂಜಾರ 79 ಎಸೆತಗಳ್ನನು ಎದುರಿಸಿ 107 ರನ್‌ಗಳ ಕೊಡುಗೆಯನ್ನು ನೀಡಿದ್ದರು. ಭಾರತೀಯ ಅನುಭವಿ ಆಟಗಾರನ ಈ ಅದ್ಭುತ ಆಟದ ಹೊರತಾಗಿಯೂ ಸಸ್ಸೆಕ್ಸ್ ತಂಡ ಆ ಪಂದ್ಯದಲ್ಲಿ ಸೋಲು ಅನುಭವಿಸಿತ್ತು.

ಪಾದಕ್ಕೆ ಗಾಯ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದ ಪಿ.ವಿ ಸಿಂಧು

ಕೌಂಟಿಯಲ್ಲಿಯೂ ಮಿಂಚಿ ಭಾರತಕ್ಕೆ ಕಮ್‌ಬ್ಯಾಕ್ ಮಾಡಿದ್ದ ಪೂಜಾರ

ಕೌಂಟಿಯಲ್ಲಿಯೂ ಮಿಂಚಿ ಭಾರತಕ್ಕೆ ಕಮ್‌ಬ್ಯಾಕ್ ಮಾಡಿದ್ದ ಪೂಜಾರ

ಇನ್ನು ಇದಕ್ಕೂ ಮುನ್ನ ಚೇತೇಶ್ವರ್ ಪೂಜಾರ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿಯೂ ಆಡಿದ್ದರು. ಅಲ್ಲಿಯೂ ಶತಕದ ಮೇಲೆ ಶತಕವನ್ನು ಬಾರಿಸಿದ್ದ ಪೂಜಾರ ಟೆಸ್ಟ್ ತಂಡದಿಂದ ಹೊರಗಿಟ್ಟ ಆಯ್ಕೆ ಸಮಿತಿಗೆ ಇಂಗ್ಲೆಂಡ್‌ನಿಂದಲೇ ಸ್ಪಷ್ಟ ಸಂದೇಶವನ್ನು ನೀಡಿದ್ದರು. ಹೀಗಾಗಿ ಇತ್ತೀಚಿನ ಕೆಲ ಸಮಯಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಟೆಸ್ಟ್ ತಂಡದಿಂದ ಹೊರಬಿದ್ದಿದ್ದ ಪೂಜಾರ ಇಂಗ್ಲೆಂಡ್ ಪ್ರವಾಸದ ಪೂಲಕ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಯಶಸ್ವಿಯಾಗಿದ್ದರು.

Story first published: Sunday, August 14, 2022, 23:28 [IST]
Other articles published on Aug 14, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+