ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಎಷ್ಟು ರನ್ ಬಾರಿಸಿದರೆ ಬಿಸಿಸಿಐ ಆಯ್ಕೆ ಮಾಡುತ್ತೆ ಎಂಬುದು ಈಗ ಅರ್ಥವಾಗಿದೆ ಎಂದ ರಾಣಾ!

Ill score 500 runs in next IPL then BCCI selectors cant neglect me says Nitish Rana

ಇದೇ ತಿಂಗಳ ಅಂತಿಮ ವಾರದಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಬಿಸಿಸಿಐ ಇತ್ತೀಚಿಗಷ್ಟೆ ಹದಿನೈದು ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಿದೆ. ಇನ್ನು ಪ್ರಕಟಗೊಂಡ ಈ ತಂಡದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ ಕೆಲ ಆಟಗಾರರಿಗೆ ಸ್ಥಾನ ಲಭಿಸಿರುವುದು ಗಮನಾರ್ಹ ಅಂಶವಾಗಿದೆ.

ಫೋರ್, ಸಿಕ್ಸರ್‌ಗಳಿಂದ ಅತಿಹೆಚ್ಚು ಟಿ20 ರನ್ ಬಾರಿಸಿದ ಡೇಂಜರಸ್ ಬ್ಯಾಟ್ಸ್‌ಮನ್‌ಗಳಿವರುಫೋರ್, ಸಿಕ್ಸರ್‌ಗಳಿಂದ ಅತಿಹೆಚ್ಚು ಟಿ20 ರನ್ ಬಾರಿಸಿದ ಡೇಂಜರಸ್ ಬ್ಯಾಟ್ಸ್‌ಮನ್‌ಗಳಿವರು

ಕೆಲ ಯುವ ಆಟಗಾರರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ವೇದಿಕೆಯನ್ನಾಗಿ ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಿ ಅಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರೆ, ಕಳಪೆ ಫಾರ್ಮ್ ಹಾಗೂ ಗಾಯದ ಸಮಸ್ಯೆಯಿಂದ ಸ್ಥಾನ ಕಳೆದುಕೊಂಡು ಅಂತಾರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ರೀತಿಯ ಅನುಭವಿ ಆಟಗಾರರು ತಂಡಕ್ಕೆ ಇದೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂಲಕ ಕಮ್ ಬ್ಯಾಕ್ ಮಾಡಿ ಇದೀಗ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿರುವ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್‌ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್‌ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!

ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡದಲ್ಲಿ ಇಶಾನ್ ಕಿಶನ್ ರೀತಿಯ ಹಲವಾರು ಪ್ರತಿಭಾವಂತ ಆಟಗಾರರಿಗೆ ಸ್ಥಾನ ಸಿಗದೇ ಇರುವುದರ ಕುರಿತು ಸ್ವತಃ ಕ್ರಿಕೆಟ್ ಪ್ರೇಕ್ಷಕರಲ್ಲಿ ಅಸಮಾಧಾನವಿದ್ದರೆ, ಕೆಲ ಯುವ ಕ್ರಿಕೆಟಿಗರು ತಮಗೆ ಸ್ಥಾನ ಸಿಗದೇ ಇರುವುದರ ಕುರಿತು ಬೇಸರಗೊಂಡಿದ್ದಾರೆ. ಈ ಸಾಲಿಗೆ ಇದೀಗ ಯುವ ಆಟಗಾರ ನಿತೀಶ್ ರಾಣಾ ಸೇರ್ಪಡೆಗೊಂಡಿದ್ದು ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಸಿಗದೇ ಇರುವುದರ ಕುರಿತು ಈ ಕೆಳಕಂಡಂತೆ ಪ್ರತಿಕ್ರಿಯಿಸಿ ಬೇಸರ ಹೊರಹಾಕಿದ್ದಾರೆ.

ಮುಂದಿನ ಐಪಿಎಲ್ ಟೂರ್ನಿಯಲ್ಲಿ ಉತ್ತಮ ರನ್ ಗಳಿಸಲಿದ್ದೇನೆ

ಮುಂದಿನ ಐಪಿಎಲ್ ಟೂರ್ನಿಯಲ್ಲಿ ಉತ್ತಮ ರನ್ ಗಳಿಸಲಿದ್ದೇನೆ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂಬುದನ್ನು ಸ್ವತಃ ಒಪ್ಪಿಕೊಂಡಿರುವ ನಿತೀಶ್ ರಾಣಾ ಮುಂಬರುವ ಐಪಿಎಲ್ ಆವೃತ್ತಿಯಿಂದ 500ಕ್ಕೂ ಹೆಚ್ಚು ರನ್ ಗಳಿಸಲು ಬಯಸುತ್ತೇನೆ, ಆಗಲಾದರೂ ಬಿಸಿಸಿಐ ತನ್ನೆಡೆಗೆ ಗಮನ ನೀಡಬಹುದು ಎಂದು ಹೇಳಿಕೆ ನೀಡಿದ್ದಾರೆ. ಉತ್ತಮ ರನ್ ಬಾರಿಸುವುದು ಮತ್ತು ಪ್ರದರ್ಶನ ನೀಡುವುದು ತನ್ನ ಕೈನಲ್ಲಿರುವ ಅಂಶಗಳಾಗಿದ್ದು, ಮುಂದಿನ ಋತುವಿನಿಂದ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಲಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

400 ರನ್ ಗಳಿಸಿದರೂ ಆಯ್ಕೆ ಮಾಡಲಿಲ್ಲ

400 ರನ್ ಗಳಿಸಿದರೂ ಆಯ್ಕೆ ಮಾಡಲಿಲ್ಲ

'ಆಯ್ಕೆದಾರರು ನಾನು 400 ರನ್ ಕಲೆಹಾಕಿದರೂ ಸಹ ಆಯ್ಕೆ ಮಾಡುತ್ತಿಲ್ಲ ಎಂದಮೇಲೆ ನಾನು 600ಕ್ಕಿಂತ ಹೆಚ್ಚು ರನ್ ಗಳಿಸಬೇಕಾದ ಅಗತ್ಯವಿದೆ ಎಂಬುದು ನನಗೆ ಈಗ ಅರ್ಥವಾಗಿದೆ. ನನ್ನ ಭವಿಷ್ಯ ನನ್ನ ಕೈನಲ್ಲಿದ್ದು ಅದನ್ನು ನಾನು ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳಲಿದ್ದೇನೆ' ಎಂದು ನಿತೀಶ್ ರಾಣಾ ಹೇಳಿಕೆ ನೀಡಿದ್ದಾರೆ.

ಈ ಬಾರಿ ನಿತೀಶ್ ರಾಣಾ ಗಳಿಸಿದ ಐಪಿಎಲ್ ರನ್ ಎಷ್ಟು?

ಈ ಬಾರಿ ನಿತೀಶ್ ರಾಣಾ ಗಳಿಸಿದ ಐಪಿಎಲ್ ರನ್ ಎಷ್ಟು?

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದ ನಿತೀಶ್ ರಾಣಾ 14 ಪಂದ್ಯಗಳನ್ನಾಡಿ 361 ರನ್ ಕಲೆಹಾಕಿದ್ದಾರೆ. ಇನ್ನು 2016ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ನಿತೀಶ್ ರಾಣಾ ಯಾವುದೇ ಆವೃತ್ತಿಯಲ್ಲಿಯೂ ಕೂಡ 400 ರನ್ ಗಡಿ ದಾಟುವಲ್ಲಿ ಯಶಸ್ವಿಯಾಗಿಲ್ಲ. ಒಟ್ಟಾರೆ 85 ಐಪಿಎಲ್ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ನಿತೀಶ್ ರಾಣಾ 2181 ರನ್ ಕಲೆಹಾಕಿದ್ದು, ಗರಿಷ್ಠ 87 ರನ್ ಬಾರಿಸಿದ್ದಾರೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ( ವಿಕೆಟ್ ಕೀಪರ್ ), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್. ಹೆಚ್ಚುವರಿ ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.

Story first published: Saturday, August 13, 2022, 18:56 [IST]
Other articles published on Aug 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X