ಇಂಗ್ಲೆಂಡ್‌ನಲ್ಲಿ ಮುಂದುವರಿದ ಚೇತೇಶ್ವರ್ ಪೂಜಾರ ಆರ್ಭಟ: ಕೌಂಟಿಯಲ್ಲಿ 3ನೇ ಶತಕ ಸಿಡಿಸಿ ಅಬ್ಬರ
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಗ್ನವಾಗಿದ್ದು ರೋಚಕ ಕದನಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ ಇಂಗ್ಲೆಂಡ್ ನೆಲದಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದು ಅಬ್ಬರಿಸುತ್ತಿದ್ದಾರೆ. ಕೌಂಟಿಯಲ್ಲಿ ಸಸೆಕ್ಸ್ ಪರವಾಗಿ ಆಡುತ್ತಿರುವ ಪೂಜಾರ ಮೂರನೇ ಶತಕ ಸಿಡಿಸಿ ಮಿಂಚಿದ್ದಾರೆ.
ವರ್ಸೆಸ್ಟರ್‌ಶೈರ್ ವಿರುದ್ಧ ನಡೆದ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಮತ್ತೊಮ್ಮೆ ನಾಯಕನ ಆಟವನ್ನು ಪ್ರದರ್ಶಿಸಿದ್ದಾರೆ. ಎದುರಾಳಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 264 ರನ್‌ಗಳನ್ನು ಗಳಿಸಿದ ಬಳಿಕ ಬ್ಯಾಟಿಂಗ್ ಮಾಡಿದ ಸಸೆಕ್ಸ್ ಪರವಾಗಿ ಮುಂದೆ ನಿಂತು ಮುನ್ನಡೆಸಿದ್ದಾರೆ ಚೇತೇಶ್ವರ್ ಪೂಜಾರ. 189 ಎಸೆತಗಳನ್ನು ಎದುರಿಸಿದ ಅವರು 136 ರನ್‌ಗಳನ್ನು ಗಳಿಸಿದರು. ಅಗ್ರಕ್ರಮಾಂಕದ ಆಟಗಾರರ ಪೈಫಲ್ಯದ ಬಳಿಕ ಪೂಜಾರ ಸ್ಟೀವ್ ಸ್ಮಿತ್ ಜೊತೆಗೆ ಅದ್ಭುತ ಜೊತೆಯಾಟದಲ್ಲಿ ಭಾಗಿಯಾದರು.

ಇನ್ನು ಈ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಅವರ ಅದ್ಭುತ ಶತಕದ ನೆರವಿನಿಂದಾಗಿ ಸಸೆಕ್ಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 373 ರನ್‌ಗಳಿಸಿತು. ಈ ಮೂಲಕ ಚೇತೇಶ್ವರ್ ಪೂಜಾರ ನೇತೃತ್ವದ ತಂಡ ಕೊನೆಯ ಎರಡು ದಿನಗಳ ಆಟ ಬಾಕಿಯಿರುವಂತೆಯೇ ಮಹತ್ವದ ಮುನ್ನಡೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಜೊತೆಯಾಗಿ ಆಡುತ್ತಿದ್ದಾರೆ ಪೂಜಾರ, ಸ್ಟೀವ್ ಸ್ಮಿತ್
ಇನ್ನು ಪ್ರಸ್ತುತ ನಡೆಯುತ್ತಿರುವ ಕೌಂಟಿ ಟೂರ್ನಮೆಂಟ್‌ನಲ್ಲಿ ಭಾರತದ ಸ್ಟಾರ್ ಆಟಗಾರ ಚೇತೇಶ್ವರ್ ಪೂಜಾರ ಹಾಗೂ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಸಸೆಕ್ಸ್ ತಂಡದ ಪರವಾಗಿ ಜೊತೆಯಾಗಿ ಆಡುತ್ತಿದ್ದಾರೆ. ಇಬ್ಬರು ಆಟಗಾರರು ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಪೂಜಾರ ಹರಾಜಾಗದೆ ಉಳಿದುಕೊಂಡಿದ್ದರೆ ಸ್ಟೀವ್ ಸ್ಮಿತ್ ಈ ಬಾರಿ ಹರಾಜಿನಿಂದ ಹೊರಗುಳಿದಿದ್ದರು. ಹೀಗಾಗಿ ಈ ಇಬ್ಬರು ಕ್ರಿಕೆಟಿಗರು ಕೂಡ ಜೂನ್ ಮೊದಲ ವಾರದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುವ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿಯೇ ಇದ್ದುಕೊಂಡು ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಮೂಲಕ ತಾಲೀಮು ನಡೆಸುತ್ತಿದ್ದಾರೆ.
ಕೌಂಟಿ ಮೂಲಕ ಫಾರ್ಮ್ ಕಂಡುಕೊಂಡಿದ್ದ ಪೂಜಾರ
ಕಳೆದ ವರ್ಷ ಚೇತೇಶ್ವರ್ ಪೂಜಾರ ಕಳಪೆ ಫಾರ್ಮ್‌ನ ಕಾರಣದಿಂದಾಗಿ ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಹೊರಬಿದ್ದ ಬಳಿಕ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ನಿರ್ಧಾರ ಮಾಡಿದ್ದರು ಪೂಜಾರ. ಕೌಂಡಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕಾರಣ ಮತ್ತೆ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದೀಗ ಈ ಬಾರಿಯೂ ಕೌಂಟಿಯಲ್ಲಿ ಪೂಜಾರ ಆರ್ಭಟ ಮುಂದುವರಿದಿದೆ.
ಇನ್ನು ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಕೂಡ ಉತ್ತಮ ಪ್ರದರ್ಶನ ನೀಡಿದ್ದು ಪೂಜಾರ ಜೊತೆಗೆ ನಾಲ್ಕನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಸ್ಟೀವ್ ಸ್ಮಿತ್ ಈ ಕೌಂಟಿ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನು ಆಡಲು ಸಸೆಕ್ಸ್ ಪರವಾಗಿ ಸಹಿ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ನಲ್ಲಿ ಮೊದಲಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿದ್ದು ಅದಾದ ಬಳಿಕ ಇಂಗ್ಲೆಂಡ್ ವಿರುದ್ಧ ಆಶಸ್ ಸರಣಿಯಲ್ಲಿ ಭಾಗುಯಾಗಲಿದೆ. ಈ ಹಿನ್ನೆಲೆಯಲ್ಲಿ ಸ್ಮಿತ್ ಸಿದ್ಧತೆ ನಡೆಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications