ಟೀಂ ಇಂಡಿಯಾ ವಿರುದ್ಧದ ಟಿ20 ಪಂದ್ಯಕ್ಕೆ ಗೇಲ್ ಆಯ್ಕೆǃ
ಆಂಟಿಗುವಾ(ವೆಸ್ಟ್ ಇಂಡೀಸ್), ಜುಲೈ 05: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ವಿರುದ್ಧ ಆಡಲು ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಸಜ್ಜಾಗುತ್ತಿದ್ದಾರೆ.
ಭಾರತ ವಿರುದ್ಧದ ಏಕೈಕ ಟ್ವೆಂಟಿ20 ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಕ್ರಿಸ್ ಗೇಲ್ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಐದು ಏಕದಿನ ಪಂದ್ಯಗಳ ಸರಣಿ ನಂತರ ಜಮೈಕಾದಲ್ಲಿ ಜುಲೈ 9(ಭಾನುವಾರ)ರಂದು ಏಕೈಕ ಟಿ20ಐ ಪಂದ್ಯ ನಡೆಯಲಿದೆ. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿಥೇಯ ತಂಡ ವಿಂಡೀಸ್ 1-2ರಲ್ಲಿ ಹಿನ್ನಡೆ ಅನುಭವಿಸಿದೆ. ಕೊನೆಯ ಏಕದಿನ ಪಂದ್ಯ ಜುಲೈ 6ರಂದು ನಡೆಯಲಿದೆ.
ಗೇಲ್ ಸಾಧನೆ: ವೆಸ್ಟ್ ಇಂಡೀಸ್ ಪರ ಅತ್ಯಂತ ಯಶಸ್ವಿ ಟಿ20 ಬ್ಯಾಟ್ಸ್ ಮನ್ ಆಗಿರುವ ಕ್ರಿಸ್ ಗೇಲ್ ಅವರು ಟಿ20 ಮಾದರಿಯಲ್ಲಿ 1519ರನ್ ಗಳಿಸಿದ್ದು 35.32 ರನ್ ಸರಾಸರಿ ಹೊಂದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡದ ಲೆಂಡ್ಲ್ ಸಿಮನ್ಸ್ ಬದಲಿಗೆ ಗೇಲ್ ಎಂಟ್ರಿ ಕೊಡುತ್ತಿದ್ದಾರೆ.
ತವರು ನೆಲ ಸಬೀನಾ ಪಾರ್ಕಿನಲ್ಲಿ ಕ್ರಿಸ್ ಗೇಲ್ ಅವರಿಗೆ ಇದು ಚೊಚ್ಚಲ ಟಿ20ಐ ಪಂದ್ಯವಾಗಿದೆ. 2016ರಲ್ಲಿ ವಿಶ್ವ ಟಿ20ಯಲ್ಲಿ ಇಂಗ್ಲೆಂಡ್ ವಿರುದ್ಧ ಈಡೆನ್ ಗಾರ್ಡನ್ಸ್ ನಲ್ಲಿ ಕೊನೆಯ ಬಾರಿ ಗೇಲ್ ಅವರು ಬ್ಯಾಟ್ ಬೀಸಿದರು.
ಹೋಲ್ಡರ್ ಗೆ ವಿಶ್ರಾಂತಿ: ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ ಜಾಸನ್ ಹೋಲ್ಡರ್ ಅವರಿಗೆ ವಿಶ್ರಾಂತಿ ನೀಡಿದ್ದು, ಕಾರ್ಲೊಸ್ ಬ್ರಥ್ ವೈಟ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ವೆಸ್ಟ್ ಇಂಡೀಸ್ ಟಿ20ಐ : ಕಾರ್ಲೊಸ್ ಬ್ರಥ್ ವೈಟ್ (ನಾಯಕ), ಸ್ಯಾಮುಯಲ್ ಬದ್ರಿ, ರಾನ್ಸ್ ಫರ್ಡ್ ಬೀಟೊನ್, ಕ್ರಿಸ್ ಗೇಲ್, ಇವಿನ್ ಲೂಯಿಸ್, ಜಾಸನ್ ಮೊಹಮ್ಮದ್, ಸುನಿಲ್ ನಾರಾಯಣ್, ಕಿರಾನ್ ಪೊಲ್ಲಾರ್ಡ್, ರೊವ್ಮಾನ್ ಪೊವೆಲ್ (ವಿಕೆಟ್ ಕೀಪರ್), ಮರ್ಲನ್ ಸ್ಯಾಮುಯಲ್ಸ್, ಜೆರೊಮೆ ಟೇಲರ್, ಚಾಡ್ವಿಕ್ ವಾಲ್ಟನ್ ಹಾಗೂ ಕೆಸ್ರಿಕ್ ವಿಲಿಯಮ್ಸ್ (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications