ಕ್ರಿಸ್ ಗೇಲ್ ಈಗ 600 ಟಿ20 ಬೌಂಡರಿ, ಸಿಕ್ಸರ್ ಗಳ ಕಿಂಗ್!
ಮೆಲ್ಬೋರ್ನ್, ಡಿ. 20: ವೆಸ್ಟ್‌ಇಂಡೀಸ್‌ನ ಎಡಗೈ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಆಸ್ಟ್ರೇಲಿಯದ ದೇಶಿಯ ಟ್ವೆಂಟಿ-20 ಟೂರ್ನಿ ಬಿಗ್‌ಬಾಷ್ ಲೀಗ್‌ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದ್ದಾರೆ. ಇತ್ತೀಚಿನ ಪಂದ್ಯದಲ್ಲಿ ಸಿಕ್ಸರ್, ಬೌಂಡರಿ ಸುರಿಮಳೆಗೈದ ಗೇಲ್ ಈಗ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 600 ಸಿಕ್ಸರ್ ಹಾಗೂ 600 ಬೌಂಡರಿ ಸಿಡಿಸಿದ ಮೊದಲ ಆಟಗಾರ ಎಂಬ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಬಿಗ್‌ಬಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೆಡ್ಸ್ ತಂಡದ ಪರ ಆಡುವ ಗೇಲ್ ಅವರು ಶನಿವಾರ ನಡೆದ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ವಿರುದ್ಧದ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ಈ ಅಪೂರ್ವ ಮೈಲಿಗಲ್ಲು ದಾಟಿದರು.
ಕ್ರಿಸ್ ಗೇಲ್ ಅವರು ಇಲ್ಲಿಯವರೆಗೂ ಬಾರಿಸಿರುವ ಬೌಂಡರಿಗಳ ಸಂಖ್ಯೆಯನ್ನು 653ಕ್ಕೇರಿದೆ. ಆದರೆ, ಆಸ್ಟ್ರೇಲಿಯಾದ ಟ್ವೆಂಟಿ-20 ಸ್ಟಾರ್ ಬ್ರಾಡ್ ಹಾಗ್ ಒಟ್ಟು 664 ಬೌಂಡರಿಯೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ (605 ಬೌಂಡರಿ) ಮೂರನೇ ಸ್ಥಾನದಲ್ಲಿದ್ದಾರೆ.
ಗರಿಷ್ಠ ಸಿಕ್ಸರ್ ಬಾರಿಸಿರುವವರ ಪಟ್ಟಿಯಲ್ಲಿ ಗೇಲ್ ಮೊದಲ ಸ್ಥಾನದಲ್ಲಿದ್ದರೆ. ವಿಂಡೀಸ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಒಟ್ಟು 388 ಸಿಕ್ಸರ್‌ಗಳನ್ನು ಸಿಡಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೆಕಲಮ್ ಅವರು 290 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.
36ರ ವರ್ಷ ವಯಸ್ಸಿನ ಗೇಲ್ ಅವರು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಹಲವು ದಾಖಲೆ ನಿರ್ಮಿಸಿದ್ದು ಅವುಗಳಲ್ಲಿ ಪ್ರಮುಖವಾದದ್ದು ಎಂಬುದನ್ನು ಮುಂದೆ ನೋಡಿ...

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೇಗದ ಶತಕ
ಗೇಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದ್ದಾರೆ. 2013ರಲ್ಲಿ ಐಪಿಎಲ್‌ನಲ್ಲಿ ಸಹಾರ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಪರ ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಗೇಲ್ ಔಟಾಗದೆ 175 ರನ್
ಸಹಾರಾ ಪುಣೆ ವಿರುದ್ಧದ ಪಂದ್ಯದಲ್ಲಿ ಗೇಲ್ ಔಟಾಗದೆ 175 ರನ್ ಗಳಿಸಿದ್ದರು. ಇದು ಟ್ವೆಂಟಿ-20ಯಲ್ಲಿ ದಾಖಲಾಗಿರುವ ಗರಿಷ್ಠ ವೈಯಕ್ತಿಕ ಸ್ಕೋರ್.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ 44.24ರ ಸರಾಸರಿ
ಗೇಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 44.24ರ ಸರಾಸರಿಯಲ್ಲಿ ಗರಿಷ್ಠ ಸ್ಕೋರ್ (8,363) ಗಳಿಸಿದ್ದಾರೆ. ಆಸ್ಟ್ರೇಲಿಯದ ಹಾಡ್ಜ್ (6,717ರನ್) ಎರಡನೆ ಸ್ಥಾನದಲ್ಲಿದ್ದಾರೆ.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ
ಜಮೈಕಾದ ಗೇಲ್ ಹೆಸರಿನಲ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ(16) ಹಾಗೂ ಗರಿಷ್ಠ ಅರ್ಧಶತಕ(53) ಸಿಡಿಸಿದ ದಾಖಲೆಯಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications