ಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲ


ಆಂಟಿಗುವಾ, ಅಕ್ಟೋಬರ್ 08: ವೆಸ್ಟ್ ಇಂಡೀಸ್ ನ ಹಿರಿಯ ಆಟಗಾರ ಕ್ರಿಸ್ ಗೇಲ್ ಅವರನ್ನು ಭಾರತ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಟ್ವೆಂಟಿ 20 ಸರಣಿಗೆ ಆಯ್ಕೆ ಮಾಡಲಾಗುತ್ತಿಲ್ಲ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.
39 ವರ್ಷ ವಯಸ್ಸಿನ ಗೇಲ್ ಅವರು ತಮ್ಮ ಕಟ್ಟಕಡೆಯ ಲಿಸ್ಟ್ 'ಎ' ಪಂದ್ಯದಲ್ಲಿ ಶತಕ ಬಾರಿಸಿ ಲಯದಲ್ಲಿದ್ದಾರೆ. ಆದರೆ, ಭಾರತ ವಿರುದ್ಧದ 5 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳ ಸರಣಿಗೆ ಲಭ್ಯರಿರುವುದಿಲ್ಲ.
ಆದರೆ, ಗೇಲ್ ಅಭಿಮಾನಿಗಳು ನಿರಾಶೆ ಪಡಬೇಕಾಗಿಲ್ಲ, ಗೇಲ್ ಅವರನ್ನು ಮುಂಬರುವ ಕ್ರಿಕೆಟ್ ವಿಶ್ವಕಪ್ ಗೆ ಪರಿಗಣಿಸಲಾಗುವುದು ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.
ಉಳಿದಂತೆ, ಆಂಡ್ರೆ ರಸೆಲ್ ಅವರು ಗಾಯಾಳುವಾಗಿದ್ದು, ತಂಡಕ್ಕೆ ಆಯ್ಕೆಯಾಗುತ್ತಿಲ್ಲ. ಯುವ ಆಟಗಾರ ಅಲ್ಜರಿ ಜೋಸೆಫ್ ಅವರು ಫಿಟ್ನೆಸ್ ಟೆಸ್ಟ್ ಪಾಸ್ ಆದರೆ ಮಾತ್ರ ಭಾರತಕ್ಕೆ ಬರಲಿದ್ದಾರೆ.
ಆರಂಭಿಕ ಆಟಗಾರ ಹೇಮರಾಜ್ ಚಂದ್ರಪಾಲ್, ಆಲ್ ರೌಂಡರ್ ಫಾಬಿಯಾನ್ ಅಲೆನ್ ಹಾಗೂ ವೇಗಿ ಓಶಾನೆ ಥಾಮಸ್ ಅವರಿಗೆ ಇದು ಚೊಚ್ಚಲ ಸರಣಿಯಾಗಲಿದೆ. ಸುನೀಲ್ ಆಂಬ್ರೀಸ್ ಕೂಡಾ ತಂಡದಲ್ಲಿದ್ದಾರೆ ಎಂದು ವಿಂಡೀಸ್ ಆಯ್ಕೆ ಸಮಿತಿ ಮುಖ್ಯಸ್ಥ ಕೋರ್ಟ್ನಿ ಬ್ರೌನ್ ಹೇಳಿದ್ದಾರೆ.
ಟಿ20 ತಂಡಕ್ಕೆ ಡರೇನ್ ಬ್ರಾವೋ ಹಾಗೂ ಕಿರಾನ್ ಪೊಲ್ಲಾರ್ಡ್ ಅವರು ಮರಳಿದ್ದಾರೆ. ಅಕ್ಟೋಬರ್ 21ರಂದು ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ.
ವೆಸ್ಟ್ ಇಂಡೀಸ್ ಏಕದಿನ ತಂಡ : ಜಾಸನ್ ಹೋಲ್ಡರ್ (ನಾಯಕ), ಫಾಬಿಯಾನ್ ಅಲೆನ್, ಸುನಿಲ್ ಆಂಬ್ರಿಸ್, ದೇವೇಂದ್ರ ಬಿಶೂ, ಚಂದ್ರಪಾಲ್ ಹೇಮರಾಜ್, ಶಿಮ್ರೊನ್ ಹೆತ್ಮೇರ್, ಶಾಯಿ ಹೋಪ್, ಅಲ್ಜರಿ ಜೋಸೆಫ್, ಇವಿನ್ ಲೆವಿಸ್, ಆಶ್ಲೆ ನರ್ಸ್, ಕಿಮೋ ಪಾಲ್, ರೊವ್ಮಾನ್ ಪೊವೆಲ್, ಕೆಮಾರ್ ರೋಚ್, ಮರ್ಲಾನ್ ಸ್ಯಾಮುಯಲ್, ಓಶಾನೆ ಥಾಮಸ್.
ವೆಸ್ಟ್ ಇಂಡೀಸ್ ಟಿ20 ತಂಡ: ಕಾರ್ಲೊಸ್ ಬ್ರಥ್ ವೈಟ್ (ನಾಯಕ), ಫಾಬಿಯಾನ್ ಅಲೆನ್, ಡರೇನ್ ಬ್ರಾವೋ, ಶಿಮ್ರೋನ್ ಹೆತ್ಮೇರ್, ಎವಿನ್ ಲೆವಿಸ್, ಒಬೆಡ್ ಮೆಕ್ ಕೇ, ಆಶ್ಲೆ ನರ್ಸ್, ಕಿಮೋ ಪಾಲ್, ಖಾರಿ ಪೆರಿ, ಕಿರಾನ್ ಪೊಲ್ಲಾರ್ಡ್, ರೊವ್ಮಾನ್ ಪೊವೆಲ್, ದಿನೇಶ್ ರಾಮದೀನ್, ಆಂಡ್ರೆ ರಸೆಲ್, ಶೆರ್ಫಾನೆ ರುಥರ್ ಫರ್ಡ್, ಒಶಾನೆ ಥಾಮಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications