Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್‌ ಸೇರ್ಪಡೆಯಾಗಲಿ ಎಂದ ಕ್ರಿಸ್‌ ಗೇಲ್

Chris Gayle feels crickets T10 format can be included in Olympics

ಅಬುಧಾಬಿ: ಕ್ರಿಕೆಟ್‌ನ ತೀರಾ ಇತ್ತೀಚಿನ ಮಾದರಿಯಾದ ಟಿ10 ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಬೇಕು ಎಂದು ವೆಸ್ಟ್ ಇಂಡೀಸ್‌ನ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹೇಳಿದ್ದಾರೆ. ಮುಂಬರಲಿರುವ ಅಬುಧಾಬಿ ಟಿ10 ಕ್ರಿಕೆಟ್ ಟೂರ್ನಿಯಲ್ಲಿ ಗೇಲ್‌ ಭಾಗವಹಿಸುತ್ತಿದ್ದಾರೆ.

ಅಬುಧಾಬಿ ಟಿ10 ಲೀಗ್‌ನಲ್ಲಿ ಕ್ರಿಸ್ ಗೇಲ್ ಅವರು ಅಬುಧಾಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ವಿಶ್ವದ ದೊಡ್ಡ ಕ್ರೀಡಾಕೂಟ ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಮಾದರಿ ಸೇರ್ಪಡೆಗೊಂಡರೆ ಉತ್ತಮ. ಕ್ರಿಕೆಟ್‌ನ ಈ ಚುಟುಕು ಮಾದರಿ ಇನ್ನಷ್ಟು ಜನಪ್ರಿಯಗೊಳ್ಳುತ್ತದೆ ಎಂದು ಗೇಲ್ ಅಭಿಪ್ರಾಯಪಟ್ಟಿದ್ದಾರೆ.

'ಸದ್ಯ ನಾನು ಮನೆಯಲ್ಲಿದ್ದು ಒಳ್ಳೆಯ ವಿಶ್ರಾಂತಿ ಪಡೆಯುತ್ತಿದ್ದೇನೆ. ಆದರೆ ಅಬುಧಾಬಿ ಟಿ10 ಲೀಗ್‌ ಗಮನದಲ್ಲಿಟ್ಟುಕೊಂಡು ಶೀಘ್ರ ಅಭ್ಯಾಸ ಆರಂಭಿಸಲಿದ್ದೇನೆ. ಬೇಗನ ಕ್ರಿಕೆಟ್ ವ್ಯವಹಾರಕ್ಕಿಳಿಯಲಿದ್ದೇನೆ,' ಎಂದು ಸದ್ಯ ಜಮೈಕಾದ ತನ್ನ ನಿವಾಸದಲ್ಲಿರುವ ಗೇಲ್ ಹೇಳಿದ್ದಾರೆ.

'ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಮಾದರಿಯನ್ನು ನೋಡಲು ನಾನು ಖಂಡಿತಾ ಬಯಸುತ್ತೇನೆ. ಸಾಮಾನ್ಯ ಅಂಶದ ಪರವಾಗಿ ನೋಡೋದಾದ್ರೆ ಇದರಿಂದ ಕ್ರೀಡೆಗೆ ತುಂಬಾ ಅನುಕೂಲವಾಗಲಿದೆ,' ಎಂದು ಗೇಲ್ ತಿಳಿಸಿದ್ದಾರೆ. ಅಬುಧಾಬಿ ಟಿ10 ಲೀಗ್‌ 4ನೇ ಆವೃತ್ತಿ ಜನವರಿ 28ರಿಂದ ಆರಂಭವಾಗಿ ಫೆಬ್ರವರಿ 6ಕ್ಕೆ ಕೊನೆಗೊಳ್ಳಲಿದೆ.

Story first published: Friday, January 8, 2021, 19:48 [IST]
Other articles published on Jan 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+