Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್ಎಲ್ ಫ್ರಾಂಚೈಸಿ ಖರೀದಿಗೆ ಕ್ರಿಸ್ ಗೇಲ್ ಚಿಂತನೆ

ನವದೆಹಲಿ, ಜುಲೈ 14: ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್, ಭಾರತದ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾದ ಇಂಡಿಯನ್ ಸೂಪರ್ ಲೀಗ್ ನಲ್ಲಿ (ಐಎಸ್ಎಲ್) ಫ್ರಾಂಚೈಸಿಯೊಂದನ್ನು ಪಡೆಯಲು ಚಿಂತನೆ ನಡೆಸಿದ್ದಾರೆ.

ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿರುವ ಗೇಲ್, ಇಂಡಿಯನ್ ಸೂಪರ್ ಲೀಗ್ ಬಗ್ಗೆ ತಾವು ಆಸಕ್ತಿ ತಳೆದಿದ್ದು, ಈ ಟೂರ್ನಿಯಲ್ಲಿ ಒಂದು ತಂಡವನ್ನು ಹೊಂದುವ ಬಗ್ಗೆ ಆಲೋಚಿಸಿತ್ತಿರುವುದಾಗಿ ಹೇಳಿದ್ದಾರೆ.

Chris Gayle keen on owning Indian Super League team

ಐಎಸ್ಎಲ್ ನಲ್ಲಿ ಹಣ ಹೂಡುವ ಸಾಧಕ ಬಾಧಕಗಳನ್ನು ತಿಳಿಯಲು ಈಗಾಗಲೇ ಐಎಸ್ಎಲ್ ಪಂದ್ಯಾವಳಿಯ ಕೆಲ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿರುವುದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದ್ದು ಯಾವ ನಿರ್ಧಾರವನ್ನೂ ಕೈಗೊಳ್ಳಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ, ಭಾರತದಲ್ಲಿ ಅವರು ಫ್ರಾಂಚೈಸಿಯನ್ನು ಖರೀದಿಸಿದರೂ, ಅದನ್ನು ಅವರ ಅನುಪಸ್ಥಿತಿಯಲ್ಲಿ ಸಮರ್ಥವಾಗಿ ನಿಭಾಯಿಸಬಲ್ಲ ವ್ಯಕ್ತಿಯೊಬ್ಬರ ಅವಶ್ಯಕತೆ ಅವರಿಗೆ ಇದೆಯಂತೆ. ಆಗ ಮಾತ್ರ, ತಾವು ಕ್ರಿಕೆಟ್ ನಲ್ಲಿ ನಿಶ್ಚಿಂತೆಯಿಂದ ಆಡಲು ಸಾಧ್ಯವೆಂದು ಹೇಳಿದ್ದಾರೆ.

ಕ್ರಿಕೆಟ್ ಆಗಲೀ, ಬೇರೆ ಕ್ರೀಡಾ ಮಾದರಿಯ ಟೂರ್ನಿಗಳಾಗಲಿ ಎಲ್ಲವೂ ಬ್ಯುಸಿನೆಸ್ ಎಂದು ಹೇಳಿರುವ, ನಾವು ಫ್ರಾಂಚೈಸಿಯನ್ನು ಕೊಳ್ಳುವುದೇ ಹಣ ಮಾಡಲು. ಹಾಗಾಗಿ, ಎಲ್ಲವನ್ನೂ ಯೋಚಿಸಿಯೇ ತೀರ್ಮಾನಿಸಬೇಕು ಎಂದು ಅವರು ತಿಳಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+