ಬೌಂಡರಿ, ಸಿಕ್ಸರ್‌ನಿಂದಲೇ 10,000 ಟಿ20 ರನ್ ಪೂರೈಸಿದ ಯೂನಿವರ್ಸಲ್ ಬಾಸ್

ಐಪಿಎಲ್ 13ನೇ ಆವೃತ್ತಿಯಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್‌ಗೇಲ್ ಆಡಿದ ಮೊದಲ ಪಂದ್ಯದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಶಾರ್ಜಾ ಕ್ರಿಕೆಟ್ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದೆ.
ಆರ್‌ಸಿಬಿ ನೀಡಿದ 172ರನ್ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಟೀಮ್, ಓಪನರ್‌ಗಳಾದ ಮಯಾಂಕ್ ಹಾಗೂ ಕೆ.ಎಲ್ ರಾಹುಲ್ ಭರ್ಜರಿ ಆಟದ ಜೊತೆಗೆ ಕ್ರಿಸ್‌ಗೇಲ್ ಅರ್ಧಶತಕದ ನೆರವಿನಿಂದ ಗೆಲುವಿನ ಗೆರೆ ಮುಟ್ಟಿತು.
ಪ್ರಸಕ್ತ ಸೀಸನ್‌ನಲ್ಲಿ ಮೊದಲ ಪಂದ್ಯವನ್ನಾಡಿದ ಕ್ರಿಸ್‌ಗೇಲ್ 29ನೇ ಐಪಿಎಲ್ ಅರ್ಧಶತಕ ಪೂರೈಸಿದರು. ಟಿ20 ಕ್ರಿಕೆಟ್‌ನಲ್ಲಿ ಬೆಟ್ಟದಂತೆ ರನ್‌ಗಳನ್ನು ಕಲೆಹಾಕಿರುವ ಗೇಲ್ ಮತ್ತೊಂದು ಟಿ20 ದಾಖಲೆಯನ್ನು ತಮ್ಮ ಹೆಸರಿಗೆ ದಾಖಲಿಸಿಕೊಂಡ್ರು.
ಕ್ರಿಸ್‌ಗೇಲ್ ಟಿ20 ಕ್ರಿಕೆಟ್‌ನಲ್ಲಿ ಕೇವಲ ಬೌಂಡರಿಯಿಂದಲೇ (4 ಮತ್ತು 6) 10,000 ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎಂಬ ಭಾರೀ ಸಾಧನೆ ಮಾಡಿದ್ದಾರೆ. ಈ ಹತ್ತು ಸಾವಿರ ಬೌಂಡರಿ ರನ್‌ಗಳಲ್ಲಿ 1027 ಬೌಂಡರಿ ಮತ್ತು 982 ಸಿಕ್ಸರ್‌ಗಳು ಸೇರಿವೆ.
ವಿಶೇಷ ಅಂದರೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ವಿಂಡೀಸ್‌ನ ಕಿರಾನ್ ಪೊಲಾರ್ಡ್ ಮತ್ತು ಪಾಕಿಸ್ತಾನದ ಶೊಯೆಬ್ ಮಲ್ಲಿಕ್ ಮಾತ್ರ ಇದುವರೆಗೂ ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿರುವುದು. ಅಂತದ್ರಲ್ಲಿ ಕ್ರಿಸ್‌ಗೇಲ್ ಬೌಂಡರಿಯಿಂದಲೇ 10,000 ರನ್‌ಗಳ ಸರದಾರನಾಗಿ ಮೆರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications