ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯೂನಿವರ್ಸ್ ಬಾಸ್!

ಪೋರ್ಟ್ ಆಫ್ ಸ್ಪೇನ್, ಆಗಸ್ಟ್ 14: ಕ್ರಿಸ್ಟೋಫರ್ ಹೆನ್ರಿ ಗೇಲ್... ಹೌದು ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರ ಪೂರ್ಣ ಹೆಸರಿದು. ಅಂದಹಾಗೆ ಇನ್ಮುಂದೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಈ ಹೆಸರು ಕಾಣಸಿಗುವುದಿಲ್ಲ.
ಜಮೈಕಾ ಮೂಲದ 39 ವರ್ಷದ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಗೇಲ್, ಬುಧವಾರ ಇಲ್ಲಿನ ಕ್ವೀನ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ 41 ಎಸೆತಗಳಲ್ಲಿ 8 ಫೋರ್ ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡ 72 ರನ್‌ಗಳ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕು ಅಂತ್ಯಗೊಳಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ಗೇಲ್ ಆಡಿದ 301ನೇ ಪಂದ್ಯವಿದು. ಕಳೆದ ಪಂದ್ಯದಲ್ಲಿ 300ನೇ ಪಂದ್ಯವನ್ನಾಡುವ ಮೂಲಕ ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಆಟಗಾರನೆನಿಸುವ ಮೂಲಕ ಮಾಜಿ ನಾಯಕ ಬ್ರಿಯಾನ್ ಲಾರಾ (299) ಅವರ ದಾಖಲೆ ಮುರಿದಿದ್ದರು. ತಮ್ಮ ಅಂತಿಮ ಪಂದ್ಯದಲ್ಲಿ 301ನೇ ಸಂಖ್ಯ ಹೊಂದಿದ್ದ ವಿಶೇಷ ಜರ್ಸಿ ತೊಟ್ಟ ಬ್ಯಾಟಿಂಗ್ ನಡೆಸಿದರು.
ಇನ್ನು ಕಳೆದ ತಿಂಗಳು ಅಂತ್ಯಗೊಂಡ ವಿಶ್ವಕಪ್ ಟೂರ್ನಿಯಲ್ಲೇ ಗೇಲ್ ನಿವೃತ್ತಿ ಹೊಂದಬೇಕಿತ್ತು. ಆದರೆ, ಟೀಮ್ ಇಂಡಿಯಾ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗಳ ಬಳಿಕ ತಮ್ಮ ಬ್ಯಾಟ್‌ಗೆ ವಿಶ್ರಾಂತಿ ನೀಡುವುದಾಗಿ ಗೇಲ್ ಹೇಳಿದ್ದರು.
ಆದರೆ, ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಲಾದ ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್‌ಗೆ ವಿಂಡೀಸ್ ಕ್ರಿಕೆಟ್ ಮಂಡಳಿ ಸ್ಥಾನ ನೀಡಲಿಲ್ಲ. ಕೇವಲ ಏಕದಿನ ಸರಣಿಗಷ್ಟೇ ಗೇಲ್ ಆಯ್ಕೆಯಾಗಿದ್ದರು. ಟಿ20 ಸರಣಿಯಿಂದ ಖುದ್ದಾಗಿ ಹಿಂದೆ ಸರಿದಿದ್ದರು.
ಈ ನಿಟ್ಟಿನಲ್ಲಿ ಬುಧವಾರ ಭಾರತ ತಂಡದ ಎದುರು ಆಡಿದ ಪಂದ್ಯ ಕ್ರಿಸ್ ಗೇಲ್ ವೃತ್ತಿ ಬದುಕಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಇನ್ನು 2009ರ ಬಳಿಕ ಇದೇ ಮೊದಲ ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಎದುರು ಕ್ರಿಸ್ ಗೇಲ್ ಅರ್ಧಶತಕ ದಾಖಲಿಸಿದರು ಎಂಬುದು ವಿಶೇಷ.
ಈ ಪಂದ್ಯದಲ್ಲಿ ಒಟ್ಟು 5 ಸಿಕ್ಸರ್‌ಗಳನ್ನು ಸಿಡಿಸಿದ ಕ್ರಿಸ್, ಇನ್ನೆರಡು ಸಿಕ್ಸರ್‌ಗಳನ್ನು ಬಾರಿಸಿದ್ದರೆ ವರ್ಷ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿ'ವಿಲಿಯರ್ಸ್ (58, 2015ರಲ್ಲಿ) ಅವರ ವಿಶ್ವ ದಾಖಲೆಯನ್ನು ಸರಿಗಟ್ಟುತ್ತಿದ್ದರು. ಗೇಲ್ ಈ ವರ್ಷ ಬರೋಬ್ಬರಿ 56 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ವಿವಿಧ ಮಾದರಿಯ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ಸಾಧನೆ

ಟೆಸ್ಟ್ ಕ್ರಿಕೆಟ್ ಸಾಧನೆ
103 ಪಂದ್ಯ
7214 ರನ್
333 ಗರಿಷ್ಠ
42.18 ಸರಾಸರಿ
60.26 ಸ್ಟ್ರೈಕ್‌ರೇಟ್
15 ಶತಕ
37 ಅರ್ಧಶತಕ
1046 ಫೋರ್‌ಗಳು
98 ಸಿಕ್ಸರ್ಸ್

ಏಕದಿನ ಕ್ರಿಕೆಟ್ ಸಾಧನೆ
301 ಪಂದ್ಯ
10480 ರನ್
215 ಗರಿಷ್ಠ
37.71 ಸರಾಸರಿ
86.89 ಸ್ಟ್ರೈಕ್‌ರೇಟ್
25 ಶತಕ
54 ಅರ್ಧಶತಕ
1120 ಫೋರ್‌ಗಳು
326 ಸಿಕ್ಸರ್ಸ್

ಅಂತಾರಾಷ್ಟ್ರೀಯ ಟಿ20
58 ಪಂದ್ಯ
1627 ರನ್
117 ಗರಿಷ್ಠ
32.54 ಸರಾಸರಿ
142.84 ಸ್ಟ್ರೈಕ್‌ರೇಟ್
02 ಶತಕ
13 ಅರ್ಧಶತಕ
138 ಫೋರ್‌ಗಳು
105 ಸಿಕ್ಸರ್ಸ್

ಎಲ್ಲಾ ಮಾದರಿಯ 20 ಓವರ್ ಕ್ರಿಕೆಟ್
384 ಪಂದ್ಯ
12808 ರನ್
175* ಗರಿಷ್ಠ
39.04 ಸರಾಸರಿ
147.33 ಸ್ಟ್ರೈಕ್‌ರೇಟ್
21 ಶತಕ
80 ಅರ್ಧಶತಕ
987 ಫೋರ್‌ಗಳು
941 ಸಿಕ್ಸರ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications