ಟಿ20 ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು ದಾಟಿದ ಕ್ರಿಸ್ ಗೇಲ್
ಚೆಸ್ಟರ್ ಲಿ ಸ್ಟ್ರೀಟ್ (ಇಂಗ್ಲೆಂಡ್), ಸೆ. 18: ಇಂಗ್ಲೆಂಡ್ ವಿರುದ್ಧದ ಏಕೈಕ ಟಿ20 ಪಂದ್ಯವನ್ನು ವೆಸ್ಟ್ ಇಂಡೀಸ್ ಗೆದ್ದುಕೊಂಡಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರಬಹುದು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ರಿಸ್ ಗೇಲ್ ಹಾಗೂ ಇವಿನ್ ಲೆವಿಸ್ ಅವರು ಸಿಕ್ಸರ್ ಸಿಡಿಸುವುದರಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ಸಿಕ್ಸ್ ಹೊಡೆದಿರುವ ಮೊದಲ ಆಟಗಾರ ಎಂಬ ದಾಖಲೆಯನ್ನು ಕ್ರಿಸ್ ಗೇಲ್ ಸಾಧಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟಿ-20 ಪಂದ್ಯದಲ್ಲಿ 40 ರನ್ ಗಳಿಸಿದ ಗೇಲ್ ಅವರು ನಾಲ್ಕು ಸಿಕ್ಸ್ ಸಿಡಿಸುವ ಮೂಲಕ ಈ ಮೈಲಿಗಲ್ಲು ದಾಟಿದರು.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟಾಪ್ ಸಿಕ್ಸ್ ಗಳಿಕೆ:
1. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) : 103
2. ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) : 91
3. ಶೇನ್ ವಾಟ್ಸನ್ (ಆಸ್ಟ್ರೇಲಿಯಾ) : 83
4. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 74
5. ಶಹೀದ್ ಅಫ್ರಿದಿ (ಪಾಕಿಸ್ತಾನ) : 73
ಟ್ರಿನಿಡಾಡ್ ನ ಎಡಗೈ ಬ್ಯಾಟ್ಸ್ ಮನ್ ಇವಿನ್ ಲೆವಿಸ್ ಅವರು ಇವಿನ್ ಲೆವಿಸ್ ಅವರು ಈ ಪಂದ್ಯದಲ್ಲಿ 3 ಸಿಕ್ಸರ್ ಗಳಿಸುವ ಮೂಲಕ ತಮ್ಮ ಟಿ20 ವೃತ್ತಿ ಬದುಕಿನಲ್ಲಿ 150 ಸಿಕ್ಸ್ ಸಿಡಿಸಿದ ದಾಖಲೆ ಬರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications