For Quick Alerts
ALLOW NOTIFICATIONS  
For Daily Alerts
 

ಭಾರತದೆದುರು ಗೇಲ್ ಅರ್ಧಶತಕ ಬಾರಿಸಿದ್ದು ಎಷ್ಟು ವರ್ಷಗಳ ಬಳಿಕ ಗೊತ್ತಾ?!

Chris Gayle scores first fifty against Men in Blue in more than 10 years

ಪೋರ್ಟ್ ಆಫ್‌ ಸ್ಪೇನ್, ಆಗಸ್ಟ್ 15: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲೂ ಆತಿಥೇಯರಿಗೆ ವೈಟ್ ವಾಷ್ ಮುಖಭಂಗವನ್ನಿತ್ತಿದೆ. ಭಾರತ-ವಿಂಡೀಸ್ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ 6 ವಿಕೆಟ್ ಗೆಲುವಿನೊಂದಿಗೆ ಏಕದಿನ ಸರಣಿ 2-0ಯಿಂದ (ಒಂದು ಪಂದ್ಯ ರದ್ದಾಗಿತ್ತು) ಭಾರತದ ಪಾಲಾಗಿದೆ.

ಬುಧವಾರ (ಆಗಸ್ಟ್ 14) ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದಿದ್ದ ಅಂತಿಮ ಏಕದಿನ ಪಂದ್ಯದಲ್ಲಿ ವಿಂಡೀಸ್‌ ಗೆಲುವಿಗಾಗಿ ಕ್ರಿಸ್‌ ಗೇಲ್ ತೀವ್ರ ಹೋರಾಟ ನಡೆಸಿದ್ದರು. 41 ಎಸೆತಗಳಿಗೆ ಗೇಲ್ 72 ರನ್ ಚಚ್ಚಿದ್ದರು. ಇದು ಗೇಲ್ ಅವರಿಂದಾದ 54ನೇ ಏಕದಿನ ಅರ್ಧಶತಕ.

ಅಂದ್ಹಾಗೆ ಗೇಲ್ ಭಾರತದೆದುರು ಏಕದಿನ ಶತಕ ಬಾರಿಸಿದ್ದು ಎಷ್ಟು ವರ್ಷಗಳ ಬಳಿಕ ಗೊತ್ತಾ? ಬರೋಬ್ಬರಿ 10 ವರ್ಷಗಳ ಬಳಿಕ!. ಟ್ರಿನಿಡಾಡ್ ಪಂದ್ಯದ ಅರ್ಧ ಶತಕ, ಸುಮಾರು 10 ವರ್ಷಗಳ ನಂತರ ಗೇಲ್ ಭಾರತದ ವಿರುದ್ಧ ಬಾರಿಸಿದ ಮೊದಲ ಏಕದಿನ ಶತಕ ಎನಿಸಿದೆ.

ಟೀಮ್ ಇಂಡಿಯಾ ವಿರುದ್ಧ ಗೇಲ್ ಕೊನೆಯ ಏಕದಿನ ಅರ್ಧ ಶತಕ ಬಾರಿಸಿದ್ದು 2009ರ ಜೂನ್ 28ರಂದು. ಈ ಪಂದ್ಯ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದಿತ್ತು. ಆ ವೇಳೆ ತಂಡದ ನಾಯಕತ್ವ ವಹಿಸಿದ್ದ ಯೂನಿವರ್ಸ್ ಬಾಸ್, 46 ಎಸೆತಗಳಿಗೆ 64 ರನ್ ಸಿಡಿಸಿದ್ದರು. ಪಂದ್ಯವನ್ನು ವಿಂಡೀಸ್ 8 ವಿಕೆಟ್‌ನಿಂದ ಗೆದ್ದಿತ್ತು.

Story first published: Thursday, August 15, 2019, 18:12 [IST]
Other articles published on Aug 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+