ಯುವರಾಜ್ ಸಿಂಗ್ ಟಿ20 ವಿಶ್ವದಾಖಲೆ ಸಮಕ್ಕೆ ನಿಂತ ಗೇಲ್
ಮೆಲ್ಬೋರ್ನ್, ಜ. 18: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಇತ್ತೀಚಿನ ವಿವಾದಗಳಿಂದ ಮೈಕೊಡವಿಕೊಂಡು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಯುವರಾಜ್ ಸಿಂಗ್ ಅವರ ಟ್ವೆಂಟಿ20 ವಿಶ್ವದಾಖಲೆಯನ್ನು ಕ್ರಿಸ್ ಗೇಲ್ ಸಮಗಟ್ಟಿದ್ದಾರೆ.
ಸೋಮವಾರ(ಜನವರಿ 18) ನಡೆದ ಬಿಗ್ ಬಾಷ್ ಲೀಗ್ (ಬಿಬಿಎಲ್) ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. 36 ವರ್ಷ ವಯಸ್ಸಿನ ಗೇಲ್ ಅವರು ಟೀಂ ಇಂಡಿಯಾ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಟಿ20 ವಿಶ್ವ ದಾಖಲೆಯನ್ನು ಸಮಗಟ್ಟಿದ್ದಾರೆ. [ಗೇಲ್ ಧೂಳಿಪಟ ಮಾಡಿದ ವಿಶ್ವ ದಾಖಲೆಗಳ ಪಟ್ಟಿ]

ಮೆಲ್ಬೋರ್ನ್ ರೆನೆಗೇಡೆಸ್ ಅವರ ಪರ ಆಡುವ ಗೇಲ್ ಅವರು ಯುವರಾಜ್ ಅವರ ದಾಖಲೆಯನ್ನು ಸಿಕ್ಸ್ ಮೂಲಕ ಸಮಗಟ್ಟಿದ್ದಾರೆ. ಸ್ಪಿನ್ನರ್ ಟ್ರಾವಿಸ್ ಹೆಡ್ (ಅಡಿಲೇಡ್ ಸ್ಟ್ರೈಕರ್ಸ್) ಅವರ ಎಸೆತದಿಂದ ಬಂತು. ಡಾಕ್ ಲ್ಯಾಂಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರೇಕ್ಷಕರನ್ನು ಗೇಲ್ ರಂಜಿಸಿದರು. ಎಡಗೈ ಬ್ಯಾಟ್ಸ್ ಮನ್ ಅವರು 7 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ಒಟ್ಟಾರೆ 17 ಎಸೆತಗಳಲ್ಲಿ 56ರನ್ ಚೆಚ್ಚಿದರು. [ಗೇಲ್ ಈಗ 600 ಟಿ20 ಬೌಂಡರಿ, ಸಿಕ್ಸರ್ ಗಳ ಕಿಂಗ್!]
2007ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ನಡೆದ ಐಸಿಸಿ ವಿಶ್ವ ಟಿ20 ಚಾಂಪಿಯನ್ ಶಿಪ್ ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ 36ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದ ಯುವರಾಜ್ ಅವರು ತ್ವರಿತವಾಗಿ ಅರ್ಧಶತಕ ಬಾರಿಸಿದ್ದರು.[ದಾಖಲೆ ಸಮಕ್ಕೆ ನಿಂತ ಗೇಲ್ ಬಗ್ಗೆ ಯುವಿಗೆ ಬೇಸರವೇಕೆ?]
12 ಎಸೆತಗಳಲ್ಲಿ 50 ರನ್ ಇಬ್ಬರ ಆಟದ ಹೋಲಿಕೆ
* ಕ್ರಿಸ್ ಗೇಲ್-2 0 6 6 6 6 2 6 6 4 1 6 (17 ಎಸೆತಗಳಲ್ಲಿ 56 ರನ್)
* ಯುವರಾಜ್ ಸಿಂಗ್ -0 4 1 4 4 1 6 6 6 6 6 6 (16 ಎಸೆತಗಳಲ್ಲಿ 58 ರನ್)
ಟಿ20ರಲ್ಲಿ ಟಾಪ್ 3 ತ್ವರಿತ ಗತಿ 50 ರನ್
* 12 ಎಸೆತಗಳು- ಕ್ರಿಸ್ ಗೇಲ್ (ಮೆಲ್ಬೋರ್ನ್ ರೆನೆಗೇಡೆಸ್), ಯುವರಾಜ್ ಸಿಂಗ್ (ಭಾರತ)
* 13-ಮಾರ್ಕಸ್ ಟ್ರೆಸ್ಕೋಥಿಕ್ (ಸಮರ್ ಸೆಟ್, ಇಂಗ್ಲೆಂಡ್)
* 14- ಇಮ್ರಾನ್ ನಜೀರ್ (ಸಿಯೋಲ್ ಕೋಟ್ ಸ್ಟಾಲಿಯಾನ್ಸ್, ಪಾಕಿಸ್ತಾನ), ಕಿರಾನ್ ಪೊಲ್ಲಾರ್ಡ್ (ಟ್ರಿನಿಡಾರ್ ಅಂಡ್ ಟೊಬಾಗೋ, ವೆಸ್ಟ್ ಇಂಡೀಸ್), ಕೊಲಿನ್ ಮುನ್ರೋ (ನ್ಯೂಜಿಲೆಂಡ್), ಜೆರಾರ್ಡ್ ಬ್ರೊಫಿ (ಯಾರ್ಕ್ ಶೈರ್, ಇಂಗ್ಲೆಂಡ್), ಕಿರಾನ್ ನೊಯಿಮಾ-ಬರ್ನೆಟ್ (ಸೆಂಟ್ರಲ್ ಡಿಸ್ಟ್ರಿಕ್ಸ್, ನ್ಯೂಜಿಲೆಂಡ್)
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications