Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ಆಟದಿಂದ ಕ್ರಿಸ್ ಗೇಲ್ ಗೆ ಬಲವಂತದ ರಜೆ

ಜಮೈಕಾ, ಜು.25: ಜಮೈಕಾದ ದೈತ್ಯ ಕ್ರಿಸ್ ಗೇಲ್ ಆಟ ನೋಡಲು ಕಾತುರರಾಗಿರುವ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಗೇಲ್ ಮುಂದಿನ ನಾಲ್ಕೈದು ತಿಂಗಳುಗಳ ಕಾಲ ಕ್ರಿಕೆಟ್ ಫೀಲ್ಡಿನಿಂದ ದೂರು ಉಳಿಯುತ್ತಿದ್ದಾರೆ.

ಬಹುಕಾಲದಿಂದ ಬೆನ್ನುನೋವಿನಿಂದ ಬಳಲುತ್ತಿರುವ ಗೇಲ್ ಅವರು ಈಗ ಬಿಡುವು ಮಾಡಿಕೊಂಡು ನ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಿದ್ಧರಾಗುತ್ತಿದ್ದಾರೆ. ಹೀಗಾಗಿ ಕನಿಷ್ಠ ಪಕ್ಷ ಎರಡರಿಂದ ಮೂರು ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿದೆ.

ಆಗಸ್ಟ್ 2 ರಂದು ಚಾರಿಟಿ ಪಂದ್ಯವನ್ನು ಆಡುತ್ತೇನೆ. ಬೆನ್ನಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಎರಡರಿಂದ ಮೂರು ತಿಂಗಳು ಕ್ರಿಕೆಟ್‌ನಿಂದ ದೂರವುಳಿಯುವೆ. ನನಗೆ ಚೇತರಿಸಿಕೊಳ್ಳಲು ಕೆಲವು ಸಮಯ ಬೇಕಾಗಬಹುದು. ಅಭಿಮಾನಿಗಳ ಹಾರೈಕೆಯ ಬೆಂಬಲದಿಂದ ಬೇಗನೆ ಚೇತರಿಸಿಕೊಂಡು ಕ್ರಿಕೆಟ್ ಅಂಗಳಕ್ಕೆ ಮರಳುವೆ ಎಂದು ಗೇಲ್ ಹೇಳಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್‌ನ ವೇಳೆಯಲ್ಲಿ ಎಡಗೈ ಬ್ಯಾಟ್ಸ್ ಮನ್ ಕ್ರಿಸ್ ಗೇಲ್‌ಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ನೋವಿನ ಕಾರಣದಿಂದಾಗಿ ಯುಎಇ ವಿರುದ್ಧದ ಗ್ರೂಪ್ ಪಂದ್ಯವನ್ನು ಆಡಿರಲಿಲ್ಲ.

ಐಸಿಸಿ ಏಕದಿನ ವಿಶ್ವಕಪ್‌ನ ವೇಳೆ

ಐಸಿಸಿ ಏಕದಿನ ವಿಶ್ವಕಪ್‌ನ ವೇಳೆ

ನೋವು ನಿವಾರಕ ಇಂಜೆಕ್ಷನ್ ಪಡೆದು ನ್ಯೂಜಿಲೆಂಡ್ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗೇಲ್ ಆಡಿದ್ದರು. ಸತತವಾಗಿ ಕ್ರಿಕೆಟ್ ಆಡುತ್ತಿರುವ ಗೇಲ್ ಅವರು ವಿಶ್ವಕಪ್ ನಂತರ ಐಪಿಎಲ್ ನಂತರ ಕೆರಿಬಿಯನ್ ಕ್ರಿಕೆಟ್ ಲೀಗ್ ನಲ್ಲೂ ಬ್ಯಾಟ್ ಬೀಸಿದ್ದರು.

2015ರಲ್ಲಿ ಗೇಲ್ ಆರ್ಭಟ

2015ರಲ್ಲಿ ಗೇಲ್ ಆರ್ಭಟ

2015ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿ 14 ಪಂದ್ಯಗಳಿಂದ 491 ರನ್ ಗಳಿಸಿದ್ದರು. ನಾಟ್ ವೆಸ್ಟ್ ಟಿ 20 ಪಂದ್ಯಗಳಲ್ಲಿ 328 ರನ್ ಕಲೆ ಹಾಕಿದರು. ಕೆರಿಬಿಯನ್ ಲೀಗ್ ಟೂರ್ನಿಯಲ್ಲೂ 61.42 ರನ್ ಸರಾಸರಿಯಂತೆ 430 ರನ್ ಗಳಿಸಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು.

ಗಾಯದಿಂದ ಕೆಲ ಟೂರ್ನಿಗಳು ಮಿಸ್

ಗಾಯದಿಂದ ಕೆಲ ಟೂರ್ನಿಗಳು ಮಿಸ್

ಪಾಕಿಸ್ತಾನ ಹಾಗೂ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ನಡುವಿನ ತ್ರಿಕೋನ ಸರಣಿಗೆ ಗೇಲ್ ಅಲಭ್ಯರಾಗುತ್ತಾರೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ಸರಣಿ ನಡೆಯಲಿದೆ. ಆಸ್ಟ್ರೇಲಿಯಾದ ಬಿಗ್ ಬಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ಪರ ಆಡಲು ಗೇಲ್ ಸಹಿ ಹಾಕಿದ್ದಾರೆ. ಈ ಟೂರ್ನಿಯ ಮೊದಲ ಕೆಲ ಪಂದ್ಯಗಳು ಮಿಸ್ ಆಗುವ ಸಾಧ್ಯತೆಯಿದೆ.

rn

ಗೇಲ್ ಅವರು ಗಾಯದ ಬಗ್ಗೆ ಹೇಳಿಕೊಂಡರು

ಕ್ರಿಸ್ ಗೇಲ್ ಅವರು ಗಾಯದ ಬಗ್ಗೆ ಹೇಳಿಕೊಂಡಿದ್ದು ಹೀಗೆ

ಆಗಸ್ಟ್ 2 ರಂದು ಟಿ 20 ನೋಡಿ

ಆಗಸ್ಟ್ 2 ರಂದು ಟಿ 20 ನೋಡಲು ಮರೆಯಬೇಡಿ ಎಂದು ಅಭಿಮಾನಿಗಳಿಗೆ ಕೇಳಿಕೊಂಡ ಗೇಲ್.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+