Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಂಗಳೂರಿನಲ್ಲಿ ಸಿಎಲ್ ಟಿ20 ಫೈನಲ್ ನಿಗದಿ

ಮುಂಬೈ, ಜು.24: ಐಪಿಎಲ್ 7 ರ ನಂತರ ಮತ್ತೊಮ್ಮೆ ಟಿ20 ಹಂಗಾಮಕ್ಕೆ ಭಾರತ ಸಜ್ಜಾಗಲಿದೆ. 6ನೇ ಸಿಎಲ್ ಟಿ20 ಟೂರ್ನಿ ಸೆ.13ರಿಂದ ಅಕ್ಟೋಬರ್ 4 ರ ತನಕ ಭಾರತದಲ್ಲಿ ನಡೆಯಲಿದೆ. ಒಟ್ಟಾರೆ 29 ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುವ ನಿರೀಕ್ಷೆಯಿದೆ.

ಹೈದರಾಬಾದಿನಲ್ಲಿ ಎರಡು ಸೆಮಿ ಫೈನಲ್ ಗಳು ನಡೆಯಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯಾವಳಿ ಅಕ್ಟೋಬರ್ 4 ರಂದು ಜರುಗಲಿದೆ. ಗ್ರೂಪ್ ಹಂತದ ಪಂದ್ಯಾವಳಿಗಳು ಸೆ.17 ರಿಂದ ಆರಂಭಗೊಳ್ಳಲಿದ್ದು 10 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಈ ಬಾರಿ ಪಾಕಿಸ್ತಾನ ಲಾಹೋರ್ ಲಯನ್ಸ್ ತಂಡ ಭಾಗವಹಿಸುತ್ತಿರುವುದು ವಿಶೇಷ.

CLT20 in India from September 13, Bangalore to host Final

ಎ ಗುಂಪಿನಲ್ಲಿ ಐಪಿಎಲ್ ಚಾಂಪಿಯನ್ ಕೆಕೆಆರ್, ಸಿಎಸ್ ಕೆ, ಡಾಲ್ಫಿನ್ಸ್(ದಕ್ಷಿಣ ಆಫ್ರಿಕಾದ ಟಿ20 ವಿಜೇತರು), ಪರ್ತ್ ಸ್ಕಾರ್ಚರ್ಸ್ (ಬಿಗ್ ಬ್ಯಾಶ್ ಲೀಗ್ ವಿಜೇತರು), ಹಾಗೂ ಅರ್ಹತಾ ಸುತ್ತಿನ ಬಂದ ತಂಡ

ಬಿ ಗುಂಪಿನಲ್ಲಿ ಹೋಬರ್ಟ್ ಹರಿಕೇನ್ಸ್(ಬಿಗ್ ಬ್ಯಾಶ್ ಲೀಗ್ ರನ್ನರ್ ಅಪ್), ವೆಸ್ಟ್ ಇಂಡೀಸ್ ಟಿ20 ಟೂರ್ನಿ ವಿಜೇತರು, ಕಿಂಗ್ಸ್ XI ಪಂಜಾಬ್(ಐಪಿಎಲ್ 7 ರನ್ನರ್ ಅಪ್), ಕೇಪ್ ಕೋಬ್ರಾಸ್ (ದಕ್ಷಿಣ ಆಫ್ರಿಕಾದ ರನ್ನರ್ ಅಪ್), ಸಿಎಲ್ ಟಿ20 ಅರ್ಹತಾ ತಂಡ

ಎಲ್ಲೆಲ್ಲಿ ಪಂದ್ಯ ನಡೆಯುತ್ತದೆ?: ಗ್ರೂಪ್ ಹಂತದ ಪಂದ್ಯಗಳು ಮೊಹಾಲಿ, ಬೆಂಗಳೂರು, ಹೈದರಾಬಾದ್, ರಾಯ್ ಪುರದಲ್ಲಿ ನಡೆಯಲಿದೆ. ಅರ್ಹತಾ ಸುತ್ತಿನ ಪಂದ್ಯವೂ ರಾಯ್ಪುರದಲ್ಲಿ ನಡೆಯಲಿದೆ. ಒಟ್ಟಾರೆ ಪ್ರಶಸ್ತಿ ಮೊತ್ತ 6 ಮಿಲಿಯನ್ ಡಾಲರ್.

ಅರ್ಹತಾ ಸುತ್ತಿನ ಪಂದ್ಯಗಳು: ಸೆ.13 ರಿಂದ ಸೆ.16ರ ತನಕ ನಡೆಯಲಿದೆ. ಮುಂಬೈ ಇಂಡಿಯನ್ಸ್(ಐಪಿಎಲ್ 7 ರಲ್ಲಿ ನಾಲ್ಕನೇ ಸ್ಥಾನ), ನಾರ್ಥರನ್ ನೈಟ್ಸ್ (ನ್ಯೂಜಿಲೆಂಡ್ ಟಿ20 ಟೂರ್ನಿ ವಿಜೇತರು), ಸದರನ್ ಎಕ್ಸ್ ಪ್ರೆಸ್(ಶ್ರೀಲಂಕಾದ ವಿಜೇತರು), ಲಾಹೋರ್ ಲಯನ್ಸ್ (ಪಾಕಿಸ್ತಾನದ ತಂಡ)

ಈ ಹಿಂದಿನ ವಿಜೇತ ತಂಡಗಳು
* 2009 : ನ್ಯೂ ಸೌಥ್ ವೇಲ್ಸ್ ಬ್ಲೂಸ್ (ಆಸ್ಟ್ರೇಲಿಯಾ)
* 2010 : ಚೆನ್ನೈ ಸೂಪರ್ ಕಿಂಗ್ಸ್ (ಭಾರತ)
* 2011 : ಮುಂಬೈ ಇಂಡಿಯನ್ಸ್ (ಭಾರತ)
* 2012 : ಸಿಡ್ನಿ ಸಿಕ್ಸರ್ಸ್ (ಆಸ್ಟ್ರೇಲಿಯಾ)
* 2013 : ಮುಂಬೈ ಇಂಡಿಯನ್ಸ್ (ಭಾರತ)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+