For Quick Alerts
ALLOW NOTIFICATIONS  
For Daily Alerts
 

Team India: ಕೋಚ್‌, ಸೂರ್ಯ ಜೋಡಿ ಸೂಪರ್ ಹಿಟ್: ರೋಹಿತ್, ಗೌತಮ್‌ ಫ್ಲಾಪ್‌

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೊದಲ ಟಿ20 ಕೋಲ್ಕತ್ತಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ ಈ ಜಯವನ್ನು ಸಾಧಿಸುತ್ತಿದ್ದಂತೆ ಒಂದು ಪ್ರಶ್ನೆ ಉದ್ಭವಿಸುತ್ತದೆ. ಟೀಮ್ ಇಂಡಿಯಾದಲ್ಲಿ ಈಗಂತೂ ಎಲ್ಲವೂ ಸರಿಯಿದೆ ಎಲ್ಲಾ. ಮತ್ತೇಕೆ ನಾವು ಸೋಲುತ್ತಿದೇವೆ ಎಂದು.

ಭಾರತ ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಗಳನ್ನು ಆಡುತ್ತಿದೆ. ಈ ವೇಳೆ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಸೂರ್ಯ ತಮ್ಮ ನಾಯಕತ್ವದ ಸ್ಕಿಲ್ ಮೂಲಕ ಎಲ್ಲರಲ್ಲೂ ಪ್ರಭಾವ ಬೀರಿದ್ದಾರೆ. ತಮಗೆ ಸಿಕ್ಕ ಅವಕಾಶದಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿದ್ದಾರೆ. ಅಂದರೆ ಸೂರ್ಯಕುಮಾರ್ ಯಾದವ್ ಹಾಗೂ ಗೌತಿ ಜೋಡಿ ಸೂಪರ್‌ ಹಿಟ್ ಎಂದು ಆಯಿತಲ್ಲಾ.

Coach Gambhir and Surya Jodi Shine Rohit-Gambhir Pair Struggles

ಸೂರ್ಯ, ಗೌತಿ ಜುಗಲಬಂಧಿ

ಟೀಮ್ ಇಂಡಿಯಾದ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ ಹಾಗೂ ಕೋಚ್ ಗೌತಮ್ ಗಂಭೀರ್ ಜೋಡಿ ಸೂಪರ್ ಹಿಟ್ ಆಗಿದೆ. ಆಡಿದ ಪ್ರತಿಯೊಂದು ಸರಣಿಯನ್ನು ಗೆಲ್ಲುತ್ತಿದೆ. ಗೌತಮ್‌ ಟೀಮ್ ಇಂಡಿಯಾದ ಕೋಚ್ ಆದ ಬಳಿಕ ಮೊದಲ ಅಸೈನ್‌ಮೆಂಟ್‌ ಶ್ರೀಲಂಕಾ ಪ್ರವಾಸ ಆಗಿತ್ತು. ಆಗ ನಡೆದ ಮೊದಲ ಟಿ20 ಸರಣಿಯನ್ನು ಟೀಮ್ ಇಂಡಿಯಾ ಗೆದ್ದು ಕೊಂಡಿತ್ತು. ಬಳಿಕ ಭಾರತದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ ತನ್ನ ವಶಕ್ಕೆ ಮಾಡಿಕೊಂಡಿದೆ. ಈಗ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಗೆದ್ದ ಅಬ್ಬರಿಸಿದೆ. ಹೀಗಾಗಿ ಕೋಚ್ ಹಾಗೂ ನಾಯಕನ ಜೋಡಿ ಸೂಪರ್‌ ಹಿಟ್ ಆಗಿದೆ.

ರೋಹಿತ್‌, ಗೌತಮ್ ಫ್ಲಾಪ್‌

ಹೌದು.. ರೋಹಿತ್‌ ಶರ್ಮಾ ಹಾಗೂ ಕೋಚ್‌ ಗೌತಮ್‌ ಗಂಭೀರ್‌ ಜೋಡಿ ಫ್ಲಾಪ್‌ ಆಗಿದೆ. ಈ ಜೋಡಿ ಒಂದಾಗಿನಿಂದಲೂ ಒಂದೇ ಒಂದೂ ದೊಡ್ಡ ಸಾಧನೆ ಮಾಡಿಲ್ಲ. (ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಹೊರತು ಪಡಿಸಿ) ಈ ಜೋಡಿ ಮುಟ್ಟಿದಲ್ಲಾ ಮಣ್ಣು ಆಗುತ್ತಿದೆ. ಈ ಜೋಡಿ ಶ್ರೀಲಂಕಾ ಪ್ರವಾಸದಲ್ಲಿ ಏಕದಿ ಸರಣಿಯನ್ನು ಕೈ ಚೆಲ್ಲಿತು. ಬಳಿಕ ಬಾಂಗ್ಲಾ ವಿರುದ್ಧ ಟೆಸ್ಟ್‌ ಸರಣಿ ಗೆದ್ದಿದ್ದೇ ದೊಡ್ಡ ಸಾಧನೆ ಆಗಿತು. ನಂತರ ನ್ಯೂಜಿಲೆಂಡ್‌ ವಿರುದ್ಧ ತವರಿನಲ್ಲಿ ಹೀನಾಯ ಸೋಲು ಕಂಡಿತು. ಆಸ್ಟ್ರೇಲಿಯಾ ಪ್ರವಾಸದಲ್ಲೂ ಕಳೆದ ಹತ್ತು ವರ್ಷದಲ್ಲಿ ಕಾಣದ ಹೀನಾಯ ಸ್ಥಿತಿಗೆ ಬಂದು ನಿಂತಿತು. ಹತ್ತು ವರ್ಷದಲ್ಲಿ ಮೊದಲ ಬಾರಿಗೆ ಭಾರತ ಬಾರ್ಡರ್ ಗವಾಸ್ಕರ್ ಸರಣಿಯನ್ನು ಕೈ ಚೆಲ್ಲಿದೆ. ಹೀಗಾಗಿ ಈ ಜೋಡಿ ಫ್ಲಾಪ್‌ ಎಂದು ಹೇಳಲಾಗುತ್ತಿದೆ.

Coach Gambhir and Surya Jodi Shine Rohit-Gambhir Pair Struggles

ಎಲ್ಲರೂ ಗೌತಮ್‌ ಗಂಭೀರ್‌ ಕೋಚ್‌ ಆಗಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ ಎಂದೇ ಹೇಳುತ್ತಿದ್ದಾರೆ. ಒಂದು ವೇಳೆ ಇವರಲ್ಲಿ ಕೋಚಿಂಗ್ ಸ್ಕಿಲ್ ಇಲ್ಲವೇ ಇಲ್ಲ ಎಂದು ಆಗಿದಲ್ಲಿ ಯಾವುದೇ ಸರಣಿಯನ್ನು ಗೆಲ್ಲಲೇ ಬಾರದಿತ್ತಲ್ಲ. ಇವರು ಎಡುವುತ್ತಿರುವುದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

Story first published: Thursday, January 23, 2025, 10:10 [IST]
Other articles published on Jan 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+