Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2021ರ ಐಪಿಎಲ್‌ಗೆ ಇಂಗ್ಲಿಷ್ ಕಾಮೆಂಟೇಟರ್ಸ್ ಪಟ್ಟಿ ಪ್ರಕಟ

Commentators of English Language for the IPL 2021

ನವದೆಹಲಿ: ಏಪ್ರಿಲ್ 9ರಿಂದ ನಗದು ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆರಂಭಗೊಳ್ಳಲಿದೆ. ಕಣಕ್ಕಿಳಿಯಲಿರುವ ಎಂಟು ತಂಡಗಳು ಈಗಾಗಲೇ ಅಭ್ಯಾಸ ನಡೆಸುತ್ತಿವೆ. 2021ರ ಐಪಿಎಲ್‌ಗೆ ಸಂಬಂಧಿಸಿ ಇಂಗ್ಲಿಷ್ ಕಾಮೆಂಟರಿ ನೀಡಲಿರುವ ಕಾಮೆಂಟೇಟರ್‌ಗಳ ಪಟ್ಟಿ ಪ್ರಕಟಗೊಂಡಿದೆ.

ಏಪ್ರಿಲ್ 9ರಂದು ಆರಂಭಗೊಳ್ಳುವ ಐಪಿಎಲ್ ಮೇ 30ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ನವದೆಹಲಿ, ಕೋಲ್ಕತ್ತಾ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಅಹ್ಮದಾಬಾದ್ ತಾಣಗಳಲ್ಲಿ ಈ ಬಾರಿಯ ಐಪಿಎಲ್‌ನ ಪಂದ್ಯಗಳು ನಡೆಯಲಿವೆ.

ಐಪಿಎಲ್‌ನ ಅಧಿಕೃತ ಪ್ರಸಾರಕ ಸ್ಟಾರ್‌ಸ್ಪೋರ್ಟ್ ನೆಟ್ವರ್ಕ್ಸ್ ಆಂಗ್ಲ ಕಾಮೆಂಟೇಟರ್‌ಗಳನ್ನು ಹೆಸರಿಸಿದ್ದು, ಇದರಲ್ಲಿ ಭಾರತದ ಮಾಜಿ ಬ್ಯಾಟ್ಸ್‌ಮನ್‌, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಹೆಸರು ಕಾಣಿಸಿಕೊಂಡಿಲ್ಲ. 2019ರ ಐಪಿಎಲ್‌ ಸೀಸನ್‌ ಬಳಿಕ ಮಂಜ್ರೇಕರ್ ವಿವಾದಾತ್ಮಕವಾಗಿ ಕಾಮೆಂಟರಿ ಪ್ಯಾನೆಲ್‌ನಿಂದ ಹೊರ ಬಿದ್ದಿದ್ದರು. ಈಗ ಮಂಜ್ರೇಕರ್ ವಿಶ್ಲೇಷಣೆಯಂತಹ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಆದರೆ ಈ ಬಾರಿಯೂ ಮಂಜ್ರೇಕರ್‌ ಐಪಿಎಲ್ ಕಾಮೆಂಟರಿ ನೀಡುತ್ತಿಲ್ಲ.

ಐಪಿಎಲ್ 2021ಕ್ಕೆ ಆಂಗ್ಲ ಕಾಮೆಂಟೇಟರ್‌ಗಳ ಪಟ್ಟಿ
ಹರ್ಷ ಭೋಗ್ಲೆ (ಭಾರತ), ಡೀಪ್ ದಾಸ್‌ಗುಪ್ತಾ (ಭಾರತ), ಸುನಿಲ್ ಗವಾಸ್ಕರ್ (ಭಾರತ), ಎಲ್ ಶಿವರಾಮಕೃಷ್ಣನ್ (ಭಾರತ), ಮುರಳಿ ಕಾರ್ತಿಕ್ (ಭಾರತ), ಇಯಾನ್ ಬಿಷಪ್ (ವೆಸ್ಟ್‌ ಇಂಡೀಸ್), ಸೈಮನ್ ಡೌಲ್ (ನ್ಯೂಜಿಲೆಂಡ್), ಲಿಸಾ ಸ್ಟಾಲೇಕರ್ (ಆಸ್ಟ್ರೇಲಿಯಾ), ಡ್ಯಾನಿ ಮಾರಿಸನ್ (ನ್ಯೂಜಿಲೆಂಡ್), ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ), ಮಾರ್ಕ್ ನಿಕೋಲಸ್ (ಇಂಗ್ಲೆಂಡ್), ಮೆಲ್ ಜೋನ್ಸ್ (ಆಸ್ಟ್ರೇಲಿಯಾ), ಅಲನ್ ವಿಲ್ಕಿನ್ಸ್ (ಇಂಗ್ಲೆಂಡ್), ಮಾರ್ಕ್ ಸ್ಲೇಟರ್ (ಆಸ್ಟ್ರೇಲಿಯಾ), ಕೆವಿನ್ ಪೀಟರ್ಸನ್ (ಇಂಗ್ಲೆಂಡ್), ಪೊಮ್ಮಿ ಎಂಬಂಗ್ವಾ (ಜಿಂಬಾಬ್ವೆ).

Story first published: Monday, March 29, 2021, 17:29 [IST]
Other articles published on Mar 29, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+