For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ-ಪಾಕಿಸ್ತಾನ ಟೆಸ್ಟ್- ಆಸಿಸ್ ವೇಗಿಯಿಂದ ವಿಶಿಷ್ಠ ಸಾಧನೆ

commins becames first bowler to take 50 test wickets in 2019

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಮಧ್ಯೆ ನಡೆಯುತ್ತಿರುವ ಪಂದ್ಯ ಡೇವಿಡ್ ವಾರ್ನರ್ ಅವರ ಅಬ್ಬರದ ಶತಕದಿಂದ ಸುದ್ದಿಯಾಗಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮಿನ್ಸ್‌ ಮಹತ್ವದ ಮೈಲುಗಲ್ಲೊಂದನ್ನು ದಾಟಿದ್ದಾರೆ. ಅಡಿಲೇಡ್ ಓವಲ್‌ನಲ್ಲಿ ಪಾಕಿಸ್ತಾನದದ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಕಮಿನ್ಸ್‌ ಈ ಸಾಧನೆ ಮಾಡಿದ್ದಾರೆ.

ಉತ್ತಮ ಬೌಲಿಂಗ್ ದಾಖಲೆಯನ್ನು ಹೊಂದಿರುವ ಪ್ಯಾಟ್ ಕಮಿನ್ಸ್ ಈ ವರ್ಷದಲ್ಲಿ 50 ವಿಕೆಟ್ ಕಿತ್ತ ಸಾಧನೆಯನ್ನು ಮಾಡಿದ್ದಾರೆ. ಈ ಕ್ಯಾಲೆಂಡರ್ ವರ್ಷದಲ್ಲಿ ಈ ಸಾಧನೆಯನ್ನು ಮಾಡಿರುವ ಏಕೈಕ ಬೌಲರ್ ಪ್ಯಾಟ್‌ ಕಮಿನ್ಸ್ ಆಗಿದ್ದಾರೆ. ಪಾಕಿಸ್ತಾನದ ಇನ್ನಿಂಗ್ಸ್‌ನ 92ನೆ ಓವರ್‌ನಲ್ಲಿ ಪಾಕಿಸ್ತಾನದ ಮೊಹಮ್ಮದ್ ಅಬ್ಬಾಸ್ ಅವರ ವಿಕೆಟ್‌ ಪಡೆಯುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.

ಪ್ಯಾಟ್ ಕಮಿನ್ಸ್‌ ಹಿಂದೆ ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್‌ ಬ್ರಾಡ್‌ ಇದ್ದಾರೆ. ಈ ಕ್ಯಾಲೆಂಡರ್ ವರ್ಷದಲ್ಲಿ ಇಲ್ಲಿಯವರೆಗೆ ಬ್ರಾಡ್ ಪಡೆದಿರುವ ವಿಕೆಟ್‌ಗಳ ಸಂಖ್ಯೆ 38. ಆ ಬಳಿಕ ಭಾರತದ ವೇಗಿ ಮೊಹಮದ್ ಶಮಿ ಇದ್ದು 16 ಇನ್ನಿಂಗ್ಸ್‌ಗಳಿಂದ 33 ವಿಕೆಟ್‌ ಪಡೆದಿದ್ದಾರೆ.

ಇನ್ನು ಈ ವರ್ಷದ ಟಾಪ್ ಹತ್ತು ಬೌಲರ್‌ಗಳ ಪೈಕಿ 4 ಆಸ್ಟ್ರೇಲಿಯಾದ ಬೌಲರ್‌ಗಳೇ ಇದ್ದಾರೆ. ಮಿಷೆಲ್ ಸ್ಟಾರ್ಕ್, ನಥನ್ ಲೈನ್ ಮತ್ಉ ಜೋಷ್ ಹ್ಯಾಸೆಲ್‌ವುಡ್ ಟಾಪ್ ಹತ್ತರೊಳಗೆ ಸ್ಥಾನ ಪಡೆದಿರುವ ಉಳಿದ ಆಸಿಸ್ ಬೌಲರ್‌ಗಳಾಗಿದ್ದಾರೆ.

ಆಸ್ಟ್ರೇಲಿಯಾದ ಲೆಜೆಂಡರಿ ಬೌಲರ್ ಶೇನ್ ವಾರ್ನ್ ಒಂದು ಕ್ಯಾಲೆಂಡರ್ ವರ್ಷದಲ್ಲಿ 96 ವಿಕೆಟ್ ಪಡೆದಿರೋದು ಇಲ್ಲಿವರೆಗೆ ಇರುವ ದಾಖಲೆಯಾಗಿದೆ. 2005ರಲ್ಲಿ 15 ಪಂದ್ಯಗಳಲ್ಲಿ ಈ ದಾಖಲೆಯನ್ನು ಶೇನ್ ವಾರ್ನ್ ಮಾಡಿದ್ದಾರೆ.

Story first published: Sunday, December 1, 2019, 16:22 [IST]
Other articles published on Dec 1, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+