CWG 2022: 4ನೇ ದಿನ ಇಲ್ಲ ಚಿನ್ನ; ಪದಕ ಪಟ್ಟಿಯಲ್ಲಿ ಇಳಿಕೆ ಕಂಡ ಭಾರತ ಎಷ್ಟನೇ ಸ್ಥಾನದಲ್ಲಿದೆ?

ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದ 4 ದಿನಗಳು ನಿನ್ನೆಗೆ ( ಆಗಸ್ಟ್ 1 ) ಮುಕ್ತಾಯಗೊಂಡಿವೆ. ಮೂರನೇ ದಿನದ ಮುಕ್ತಾಯದ ಹಂತಕ್ಕೆ ಒಟ್ಟು 6 ಪದಕಗಳನ್ನು ಗೆದ್ದಿದ್ದ ಭಾರತ ನಾಲ್ಕನೇ ದಿನದಂದು 1 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.
ಭಾರತದ ವೇಟ್ ಲಿಫ್ಟರ್ ಹರ್ಜಿಂದರ್ ಸಿಂಗ್ ಮಹಿಳಾ 71 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು, ಜುಡೋ ಪಟು ಸುಶೀಲಾದೇವಿ 41 ಕೆಜಿ ವೇಟ್ ಲಿಫ್ಟಿಂಗ್ ಮಹಿಳಾ ವಿಭಾಗದ ಫೈನಲ್ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಕ್ರೀಡಾಪಟು ವಿರುದ್ಧ ಸೋತು ಬೆಳ್ಳಿ ಪದಕವನ್ನು ಗೆದ್ದರು ಹಾಗೂ ಭಾರತದ ವಿಜಯ್ ಕುಮಾರ್ ಯಾದವ್ ಪುರುಷರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು.
ಹೀಗೆ ನಾಲ್ಕನೇ ದಿನದಾಟದಂದು ಭಾರತ ಯಾವುದೇ ಚಿನ್ನದ ಪದಕವನ್ನು ಗೆಲ್ಲದೇ ಇದ್ದರೂ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಪದಕ ಸಂಖ್ಯೆಯನ್ನು 9ಕ್ಕೆ ಏರಿಸಿಕೊಂಡಿದೆ. ಹೀಗೆ ಪದಕ ಸಂಖ್ಯೆಯಲ್ಲಿ ಏರಿಕೆ ಕಂಡಿರುವ ಭಾರತ ನಾಲ್ಕನೇ ದಿನದ ಮುಕ್ತಾಯದ ಹಂತಕ್ಕೆ ಪದಕಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ ಹಾಗೂ ಉಳಿದ ಯಾವ ದೇಶಗಳು ಎಷ್ಟು ಪದಕಗಳನ್ನು ಗೆದ್ದು ಎಷ್ಟನೇ ಸ್ಥಾನಗಳನ್ನು ಪಡೆದುಕೊಂಡಿವೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಪದಕ ಪಟ್ಟಿ
ನಾಲ್ಕನೇ ದಿನದ ಮುಕ್ತಾಯದ ಹಂತಕ್ಕೆ ( ಆಗಸ್ಟ್ 1 ) ಪದಕ ಪಟ್ಟಿಯಲ್ಲಿ ಟಾಪ್ 10 ಸ್ಥಾನ ಪಡೆದುಕೊಂಡಿರುವ ದೇಶಗಳ ಪಟ್ಟಿ ಕೆಳಕಂಡಂತಿದೆ.
1. 31 ಚಿನ್ನದ ಪದಕಗಳು, 20 ಬೆಳ್ಳಿ ಪದಕಗಳು ಹಾಗೂ 20 ಕಂಚಿನ ಪದಕಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಒಟ್ಟು 71 ಪದಕಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
2. 21 ಚಿನ್ನದ ಪದಕಗಳು, 22 ಬೆಳ್ಳಿ ಪದಕಗಳು ಹಾಗೂ 11 ಕಂಚಿನ ಪದಕಗಳನ್ನು ಗೆದ್ದಿರುವ ಇಂಗ್ಲೆಂಡ್ ಒಟ್ಟು 54 ಪದಕಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
3. 13 ಚಿನ್ನದ ಪದಕಗಳು, 7 ಬೆಳ್ಳಿ ಪದಕಗಳು ಹಾಗೂ 4 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿರುವ ನ್ಯೂಜಿಲೆಂಡ್ ಈ ಪದಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ.
4. 6 ಚಿನ್ನದ ಪದಕಗಳು, 11 ಬೆಳ್ಳಿ ಪದಕಗಳು ಮತ್ತು 18 ಕಂಚಿನ ಪದಕಗಳನ್ನು ಗೆದ್ದಿರುವ ಕೆನಡಾ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
5. 5 ಚಿನ್ನದ ಪದಕಗಳು, 3 ಬೆಳ್ಳಿ ಪದಕಗಳು ಹಾಗೂ 4 ಕಂಚಿನ ಪದಕಗಳು ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
6. 3 ಚಿನ್ನದ ಪದಕಗಳು, 3 ಬೆಳ್ಳಿ ಪದಕಗಳು ಹಾಗೂ 3 ಕಂಚಿನ ಪದಕಗಳು ಸೇರಿದಂತೆ ಒಟ್ಟು 9 ಪದಕಗಳನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
7. 2 ಚಿನ್ನದ ಪದಕಗಳು, 8 ಬೆಳ್ಳಿ ಪದಕಗಳು ಹಾಗೂ 13 ಕಂಚಿನ ಪದಕಗಳು ಸೇರಿದಂತೆ ಒಟ್ಟು 23 ಪದಕಗಳನ್ನು ಗೆದ್ದಿರುವ ಸ್ಕಾಟ್ಲೆಂಡ್ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
8. 2 ಚಿನ್ನದ ಪದಕಗಳು, 2 ಬೆಳ್ಳಿ ಪದಕಗಳು ಹಾಗೂ 2 ಕಂಚಿನ ಪದಕಗಳನ್ನು ಗೆದ್ದು ಒಟ್ಟು 6 ಪದಕಗಳನ್ನು ತನ್ನದಾಗಿಸಿಕೊಂಡಿರುವ ಮಲೇಷಿಯಾ ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
9. 2 ಚಿನ್ನದ ಪದಕಗಳು ಹಾಗೂ 2 ಕಂಚಿನ ಪದಕಗಳು ಸೇರಿದಂತೆ ಒಟ್ಟು 4 ಪದಕಗಳನ್ನು ಗೆದ್ದಿರುವ ನೈಜೀರಿಯಾ ಪದಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
10. 1 ಚಿನ್ನದ ಪದಕ, 2 ಬೆಳ್ಳಿ ಪದಕಗಳು ಹಾಗೂ 7 ಕಂಚಿನ ಪದಕಗಳು ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದಿರುವ ವೇಲ್ಸ್ ಪದಕ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.

ಪದಕ ಗೆದ್ದಿರುವ ಭಾರತೀಯರು
ಆಗಸ್ಟ್ 2ರವರೆಗೆ ಪದಕ ಗೆದ್ದಿರುವ ಭಾರತೀಯರ ಪಟ್ಟಿ
• ಮೀರಾಬಾಯಿ ಚಾನು - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
• ಜೆರೆಮಿ ಲಾಲ್ರಿನುಂಗ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
• ಅಚಿಂತಾ ಶೆಯುಲಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
ಇತರೆ ಪದಕ ಗೆದ್ದವರು
• ಸಂಕೇತ್ ಮಹದೇವ್ ಸರ್ಗರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
• ಗುರುರಾಜ್ ಪೂಜಾರಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ
• ಬಿಂದ್ಯಾ ರಾಣಿ ದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
• ಸುಶೀಲಾದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
• ವಿಜಯ್ ಕುಮಾರ್ ಯಾದವ್ - ಪುರುಷರ ವಿಭಾಗದಲ್ಲಿ ಕಂಚಿನ ಪದಕ
• ಹರ್ ಜಿಂದರ್ ಕೌರ್ - ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ

ಐದನೇ ದಿನ ವೇಟ್ ಲಿಫ್ಟಿಂಗ್ ವಿಭಾಗದಲ್ಲಿಯೇ 3 ಪದಕ ಖಚಿತ
ಇನ್ನು ಐದನೇ ದಿನದಂದು ಭಾರತದ ಮೂವರು ವೇಟ್ ಲಿಫ್ಟರ್ ಕ್ರೀಡಾಪಟುಗಳು ಪದಕ ಗೆಲ್ಲುವುದು ಖಚಿತವಾಗಿದೆ. ಮಹಿಳಾ 76 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಪೂನಮ್ ಯಾದವ್ ಫೈನಲ್ ಆಡಲಿದ್ದರೆ, ಪುರುಷರ 96 ಕೆ ಜಿ ಫೈನಲ್ ಸುತ್ತಿನಲ್ಲಿ ವಿಕಾಸ್ ಠಾಕೂರ್ ಸೆಣಸಾಡಲಿದ್ದಾರೆ ಮಹಿಳೆಯರ 87 ಕೆಜಿ ವೇಟ್ ಲಿಫ್ಟಿಂಗ್ ಫೈನಲ್ ಪಂದ್ಯದಲ್ಲಿ ಉಷಾ ಬನ್ನೂರು ಕುಮಾರ ಕಣಕ್ಕಿಳಿಯಲಿದ್ದಾರೆ. ಹೀಗೆ ವೇಟ್ ಲಿಫ್ಟಿಂಗ್ ಪಟುಗಳು ಕಣಕ್ಕಿಳಿಯಲಿರುವ ಈ ಫೈನಲ್ ಪಂದ್ಯಗಳಲ್ಲಿ ಭಾರತಕ್ಕೆ ಪದಕ ಲಭಿಸುವುದು ಖಚಿತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications