CWG 2022: ಬಾರ್ಬಡೋಸ್ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ

ಜೆಮಿಮಾ ರಾಡ್ರಿಗಸ್ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮತ್ತು ರೇಣುಕಾ ಸಿಂಗ್ ಅವರ ಬಿಗಿ ಬೌಲಿಂಗ್ ಸ್ಪೆಲ್‌ನಿಂದ ಭಾರತವು ಬುಧವಾರ ಬಾರ್ಬಡೋಸ್ ವಿರುದ್ಧ 100 ರನ್‌ಗಳ ಜಯದೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಟಿ20 ಕ್ರಿಕೆಟ್‌ನ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಭಾರತ ಮಹಿಳಾ ತಂಡ ಜೆಮಿಮಾ ರಾಡ್ರಿಗಸ್ (46 ಎಸೆತಗಳಲ್ಲಿ ಔಟಾಗದೆ 56) ಮತ್ತು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರ 26 ಎಸೆತಗಳಲ್ಲಿ 43 ರನ್ ಗಳಿಸಿದ ಹಿನ್ನಲೆಯಲ್ಲಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 162 ರನ್ ಗಳಿಸಿತು.
ನಂತರ ಬ್ಯಾಟಿಂಗ್ ಮಾಡಿದ ಬಾರ್ಬಡೋಸ್ ತಂಡವನ್ನು ಭಾರತೀಯ ಮಹಿಳಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 62 ರನ್‌ಗಳಿಗೆ ಮಾತ್ರ ಸೀಮಿತಗೊಳಿಸಿದರು. ರೇಣುಕಾ ಸಿಂಗ್ ಆಕರ್ಷಕ ಸ್ಪೆಲ್‌ನೊಂದಿಗೆ ಬಾರ್ಬಡೋಸ್ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗಟ್ಟಿದರು.

ಏಳು ಬ್ಯಾಟರ್‌ಗಳು ಎರಡಂಕಿಯ ರನ್‌ಗಳನ್ನು ತಲುಪಲು ವಿಫಲ
ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ನೇಹ ರಾಣಾ, ಮೇಘನಾ ಸಿಂಗ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು. ಬಾರ್ಬಡೋಸ್ ಪರ ಕಿಶೋನಾ ನೈಟ್ 16 ರನ್ ಗಳಿಸಿ ಟಾಪ್ ಸ್ಕೋರರ್ ಆಗಿದ್ದರೆ, ಶಕೇರಾ ಸೆಲ್ಮನ್ 12 ರನ್ ಗಳಿಸಿದರು. ಬಾರ್ಬಡೋಸ್‌ನ ಏಳು ಬ್ಯಾಟರ್‌ಗಳು ಎರಡಂಕಿಯ ರನ್‌ಗಳನ್ನು ತಲುಪಲು ವಿಫಲರಾದರು.
ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂಬತ್ತು ವಿಕೆಟ್‌ಗಳ ಸೋಲಿನಲ್ಲಿಯೂ ಬಾರ್ಬಡೋಸ್ ತಂಡ 64 ರನ್‌ಗಳಿಗೆ ಔಟಾಗಿತ್ತು. ಇನ್ನು ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡ ಎರಡು ಗೆಲುವಿನಿಂದ ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿ ಆಸ್ಟ್ರೇಲಿಯಾ (3 ಪಂದ್ಯಗಳಿಂದ 6 ಅಂಕಗಳು) ನಂತರ ಎರಡನೇ ಸ್ಥಾನ ಗಳಿಸಿತು. ಅವರು ತಮ್ಮ ಹಿಂದಿನ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಸೋಲಿಸಿದರು ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತಿದ್ದರು.

ಮತ್ತೆ ನಾಲ್ಕು ವಿಕೆಟ್ ಪಡೆದು ಮಿಂಚಿದ ರೇಣುಕಾ ಸಿಂಗ್
ಶನಿವಾರ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ರೇಣುಕಾ ಸಿಂಗ್ ಅವರು ಬಾರ್ಬಡೋಸ್ ಬ್ಯಾಟಿಂಗ್ ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿ ಆರಂಭಿಕ ಆಟಗಾರ್ತಿ ಡಿಯಾಂಡ್ರಾ ಡಾಟಿನ್ ಅವರನ್ನು ಡಕ್‌ಗೆ ಔಟ್ ಮಾಡಿದರು. ನಂತರ ನಾಯಕಿ ಹೇಲಿ ಮ್ಯಾಥ್ಯೂಸ್ (9), ಕಿಸಿಯಾ ನೈಟ್ (3) ಮತ್ತು ಆಲಿಯಾ ಅಲೀನ್ (0) ಅವರನ್ನು ತ್ವರಿತವಾಗಿ ಔಟ್ ಮಾಡಿ ಬಾರ್ಬಡೋಸ್ ತಂಡವನ್ನು ಮೊದಲ ಒಂಬತ್ತು ಓವರ್‌ಗಳಲ್ಲಿ 4 ವಿಕೆಟ್‌ಗೆ 19 ರನ್‌ಗಳಿಗೆ ನಿಯಂತ್ರಿಸಿದರು.
ಇನ್ನು ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ಸಮಯದಲ್ಲಿ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನಲ್ಲಿ ಅರ್ಧ ಶತಕ ಬಾರಿಸಿದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (5) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಶಫಾಲಿ ವರ್ಮಾ ಮತ್ತು ಜೆಲಿಮಾ ರಾಡ್ರಿಗಸ್ ಎರಡನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವನ್ನು ಕಟ್ಟಿ ಭಾರತದ ಇನ್ನಿಂಗ್ಸ್‌ಗೆ ಆಸರೆ ನೀಡಿದರು.

ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ನಡುವಿನ 70 ರನ್‌ಗಳ ಜೊತೆಯಾಟ
ಆದಾಗ್ಯೂ, ಶಫಾಲಿ ವರ್ಮಾ ಔಟಾದ ನಂತರ ನಾಯಕಿ ಹರ್ಮನ್‌ಪ್ರೀತ್ ಕೌರ್ (0) ಕೇವಲ ಮೂರು ಎಸೆತಗಳಲ್ಲಿ ನಿರ್ಗಮಿಸಿದ ಕಾರಣ ಭಾರತವು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮುರಿಯದ ಐದನೇ ವಿಕೆಟ್‌ಗೆ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ (ಔಟಾಗದೆ 34) ನಡುವಿನ 70 ರನ್‌ಗಳ ಜೊತೆಯಾಟವು ಭಾರತವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ದಿತು. ಬಾರ್ಬಡೋಸ್ ಪರ ಬೌಲಿಂಗ್‌ನಲ್ಲಿ ಶಾನಿಕಾ ಬ್ರೂಸ್, ಹೇಲಿ ಮ್ಯಾಥ್ಯೂಸ್ ಮತ್ತು ಶಕೇರಾ ಸೆಲ್ಮನ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್‌ಗಳು:
ಭಾರತ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 162 (ಜೆಮಿಮಾ ರಾಡ್ರಿಗಸ್ ಔಟಾಗದೆ 56, ಶಫಾಲಿ ವರ್ಮಾ.43; ಶಾನಿಕಾ ಬ್ರೂಸ್ 1/17)
ಬಾರ್ಬಡೋಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 62 (ಕಿಶೋನಾ ನೈಟ್ 16; ರೇಣುಕಾ ಸಿಂಗ್ 4/10).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications