CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?

ಸದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ಮುಕ್ತಾಯದ ಸನಿಹಕ್ಕೆ ಬಂದು ತಲುಪಿದೆ. ಕಳೆದ ತಿಂಗಳ 28ರಂದು ಶುರುವಾಗಿದ್ದ ಈ ಬೃಹತ್ ಕ್ರೀಡಾಕೂಟ ಇದೇ ತಿಂಗಳ 8ರಂದು ಮುಕ್ತಾಯಗೊಳ್ಳಲಿದೆ. ಇನ್ನು ಈ ಬಾರಿ ಕ್ರಿಕೆಟ್ ವಿಭಾಗವೂ ಸಹ ಸೇರ್ಪಡೆಗೊಂಡಿರುವ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಬಹಳ ವಿಶೇಷ ಹಾಗೂ ವಿಭಿನ್ನವೆನಿಸಿದೆ. ಹೌದು, ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟವನ್ನು ಸೇರ್ಪಡೆಗೊಳಿಸಲಾಗಿದ್ದು, ಮಹಿಳಾ ತಂಡಗಳ ನಡುವೆ ಚಿನ್ನದ ಪದಕಕ್ಕಾಗಿ ಪೈಪೋಟಿ ಏರ್ಪಟ್ಟಿತ್ತು.
ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದ ಒಟ್ಟು ಎಂಟು ತಂಡಗಳನ್ನು ನಾಲ್ಕು ತಂಡಗಳ ಎರಡು ಗುಂಪುಗಳನ್ನಾಗಿ ವಿಭಜಿಸಲಾಗಿತ್ತು. ಗ್ರೂಪ್ 'ಎ'ನಲ್ಲಿ ಆಸ್ಟ್ರೇಲಿಯಾ, ಭಾರತ, ಬಾರ್ಬಡೋಸ್ ಮತ್ತು ಪಾಕಿಸ್ತಾನ ವನಿತೆಯರ ತಂಡಗಳು ಹಾಗೂ ಗ್ರೂಪ್ 'ಬಿ'ಯಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ವನಿತೆಯರ ತಂಡಗಳಿದ್ದವು. ಎಲ್ಲಾ ತಂಡಗಳಿಗೂ ಸಹ ತಮ್ಮ ಗುಂಪಿನ ಇತರೆ ತಂಡಗಳ ಜತೆ ತಲಾ ಒಂದೊಂದು ಪಂದ್ಯದಂತೆ ಗ್ರೂಪ್ ಹಂತದಲ್ಲಿ ಒಟ್ಟು ಮೂರು ಪಂದ್ಯಗಳು ಆಯೋಜನೆಯಾಗಿದ್ದವು. ಈ ಪೈಕಿ ಪ್ರತೀ ಗುಂಪಿನಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದು ಟಾಪ್ ಎರಡು ಸ್ಥಾನಗಳನ್ನು ಪಡೆದುಕೊಳ್ಳುತ್ತವೆಯೋ ಆ ತಂಡಗಳು ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವ ನಿಯಮವಿತ್ತು.
ಅದರಂತೆ ಇದೀಗ ಎ ಗುಂಪಿನಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದ ಆಸ್ಟ್ರೇಲಿಯಾ ವನಿತೆಯರ ತಂಡ ಹಾಗೂ ದ್ವಿತೀಯ ಸ್ಥಾನ ಪಡೆದ ಭಾರತ ವನಿತೆಯರ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿವೆ. ಅತ್ತ ಬಿ ಗುಂಪಿನಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ವನಿತೆಯರ ತಂಡ ಹಾಗೂ ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್ ವನಿತೆಯರ ತಂಡಗಳು ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ. ಹೀಗೆ ಸೆಮಿಫೈನಲ್ ಪ್ರವೇಶಿಸಿರುವ ತಂಡಗಳ ಪೈಕಿ ಯಾವ ಯಾವ ತಂಡಗಳು ಸೆಮೀಸ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ ಹಾಗೂ ಪಂದ್ಯಗಳ ವೇಳಾಪಟ್ಟಿ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಬಲಿಷ್ಟ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ ಭಾರತ
ಮೊದಲಿಗೆ ಕ್ರಿಕೆಟ್ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಸೆಣಸಾಟ ನಡೆಸಿ ಸೋಲನ್ನು ಅನುಭವಿಸಿ ನೀರಸ ಆರಂಭ ಪಡೆದಿದ್ದ ಭಾರತೀಯ ವನಿತೆಯರು ತಮ್ಮ ದ್ವಿತೀಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಹಾಗೂ ತೃತೀಯ ಪಂದ್ಯದಲ್ಲಿ ಬಾರ್ಬಡೋಸ್ ವನಿತೆಯರ ವಿರುದ್ಧ ಭರ್ಜರಿ ಜಯವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದೆ. ಭಾರತ ವನಿತೆಯರು ಬಿ ಗುಂಪಿನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್ ವನಿತೆಯರ ವಿರುದ್ಧ ಸೆಣಸಾಟ ನಡೆಸಲಿದೆ. ಉಭಯ ತಂಡಗಳ ನಡುವಿನ ಈ ಸೆಮಿಫೈನಲ್ ಪಂದ್ಯ ಆಗಸ್ಟ್ 6ರ ಶನಿವಾರ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.

ಸೆಮಿಫೈನಲ್ ಪಂದ್ಯಗಳು ಮತ್ತು ಸಮಯ
ಒಂದನೇ ಸೆಮಿಫೈನಲ್: ಭಾರತ ವನಿತೆಯರು vs ಇಂಗ್ಲೆಂಡ್ ವನಿತೆಯರು - ಆಗಸ್ಟ್ 6 - ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ
ಎರಡನೇ ಸೆಮಿಫೈನಲ್: ಆಸ್ಟ್ರೇಲಿಯಾ ವನಿತೆಯರು vs ನ್ಯೂಜಿಲೆಂಡ್ ವನಿತೆಯರು - ಆಗಸ್ಟ್ 6 - ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10.30ಕ್ಕೆ

ಭಾರತ ತಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತ ತಂಡ
ಹರ್ಮನ್ಪ್ರೀತ್ ಕೌರ್ (ಸಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ತನಿಯಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್, ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಹರ್ಲೀನ್ ಡಿಯೋಲ್, ಸ್ನೇಹ್ ರಾಣಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications