Commonwealth 2022: 3ನೇ ದಿನ 3 ದೇಶಗಳನ್ನು ಹಿಂದಿಕ್ಕಿದ ಭಾರತ; ಪದಕ ಪಟ್ಟಿಯಲ್ಲಿ ಎಷ್ಟನೇ ಸ್ಥಾನ?

ಸದ್ಯ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ 3 ದಿನಗಳು ಜುಲೈ 31ರ ಭಾನುವಾರಕ್ಕೆ ಮುಕ್ತಾಯಗೊಂಡಿವೆ. ಮೊದಲ ದಿನ ಯಾವುದೇ ಪದಕವಿಲ್ಲದೇ ಸಾಮಾನ್ಯ ಆರಂಭವನ್ನು ಪಡೆದುಕೊಂಡಿದ್ದ ಭಾರತ ಎರಡನೇ ದಿನದಂದು 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಒಟ್ಟು 4 ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಹೀಗೆ ದ್ವಿತೀಯ ದಿನದಂದು ಉತ್ತಮ ಪ್ರದರ್ಶನ ನೀಡಿದ ಭಾರತೀಯ ಕ್ರೀಡಾ ಪಟುಗಳು ತಮ್ಮ ಪದಕ ಬೇಟೆಯನ್ನು ಮೂರನೇ ದಿನವೂ ಸಹ ಮುಂದುವರಿಸಿದರು.
ಮೂರನೇ ದಿನದಂದು ಮೊದಲಿಗೆ 67 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಜೆರೆಮಿ ಲಾಲ್ರಿನುಂಗ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಭಾರತದ ಪದಕ ಸಂಖ್ಯೆಯನ್ನು ಐದಕ್ಕೆ ಏರಿಸಿದರು. ಹಾಗೂ ನಂತರ ನಡೆದ 73 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಅಚಿಂತಾ ಶೆಯುಲಿ ಚಿನ್ನದ ಪದಕವನ್ನು ಗೆದ್ದರು. ಈ ಮೂಲಕ ಭಾರತ ಮೂರನೇ ದಿನದಂದು ಒಟ್ಟು 2 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಭಾರತದ ಪದಕ ಸಂಖ್ಯೆ 6ಕ್ಕೆ ಏರಿಕೆ ಕಂಡಿದೆ.
ಮೂರನೇ ದಿನದಂದು ಈ ಇಬ್ಬರು ಕ್ರೀಡಾಪಟುಗಳು ಪದಕ ಗೆದ್ದಿದ್ದು ಬಿಟ್ಟರೆ ಭಾರತದ ಉಳಿದ ಯಾವುದೇ ಕ್ರೀಡಾಪಟುಗಳು ಕೂಡ ಪದಕ ಸಾಧನೆ ಮಾಡಿಲ್ಲ. ಸದ್ಯ ಮೂರನೇ ದಿನದ ಮುಕ್ತಾಯದ ಹಂತಕ್ಕೆ ಯಾವ ದೇಶಗಳು ಎಷ್ಟು ಪದಕಗಳನ್ನು ಗೆದ್ದು ಯಾವ ಸ್ಥಾನಗಳಲ್ಲಿವೆ ಹಾಗೂ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ಕುರಿತಾದ ಪಟ್ಟಿ ಕೆಳಕಂಡಂತಿವೆ.

ಪದಕ ಪಟ್ಟಿಯ ಟಾಪ್ 10 ತಂಡಗಳು
ಕ್ರೀಡಾಕೂಟದ ಮೂರನೇ ದಿನದ ಮುಕ್ತಾಯದ ಹಂತಕ್ಕೆ ಪದಕ ಪಟ್ಟಿಯಲ್ಲಿ ಈ ಕೆಳಕಂಡ ತಂಡಗಳು ಟಾಪ್ 10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.
1. 22 ಚಿನ್ನದ ಪದಕ, 13 ಬೆಳ್ಳಿ ಪದಕಗಳು ಹಾಗೂ 17 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿರುವ ಆಸ್ಟ್ರೇಲಿಯಾ ಒಟ್ಟು 52 ಪದಕಗಳನ್ನು ಗೆದ್ದಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
2. 11 ಚಿನ್ನದ ಪದಕಗಳು, 16 ಬೆಳ್ಳಿ ಪದಕಗಳು ಹಾಗೂ 7 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿರುವ ಇಂಗ್ಲೆಂಡ್ ಒಟ್ಟು 34 ಪದಕಗಳನ್ನು ಗೆಲ್ಲುವುದರ ಮೂಲಕ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
3. 10 ಚಿನ್ನದ ಪದಕಗಳು, 5 ಬೆಳ್ಳಿ ಪದಕಗಳು ಹಾಗೂ 4 ಕಂಚಿನ ಪದಕಗಳನ್ನು ಗೆಲ್ಲುವುದರ ಮೂಲಕ ಒಟ್ಟು 19 ಪದಕ ಬೇಟೆಯಾಡಿರುವ ನ್ಯೂಜಿಲೆಂಡ್ ಪದಕ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ.
4. 3 ಚಿನ್ನದ ಪದಕಗಳು, 6 ಬೆಳ್ಳಿ ಪದಕಗಳು ಹಾಗೂ 9 ಕಂಚಿನ ಪದಕಗಳನ್ನು ಗೆದ್ದಿರುವ ಕೆನಡಾ ಒಟ್ಟು 18 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
5. 3 ಚಿನ್ನದ ಪದಕಗಳು, 2 ಬೆಳ್ಳಿ ಪದಕಗಳು ಹಾಗೂ 1 ಕಂಚಿನ ಪದಕವನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಎರಡನೇ ದಿನದ ಮುಕ್ತಾಯದ ಹಂತಕ್ಕೆ ಎಂಟನೇ ಸ್ಥಾನದಲ್ಲಿದ್ದ ಭಾರತ ಮೂರನೇ ದಿನದಂದು ಮಲೇಷ್ಯಾ, ಸ್ಕಾಟ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ.
6. 3 ಚಿನ್ನದ ಪದಕ 1 ಬೆಳ್ಳಿ ಪದಕ ಹಾಗೂ 1 ಕಂಚಿನ ಪದಕವನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಒಟ್ಟು 5 ಪದಕಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
7. 2 ಚಿನ್ನದ ಪದಕಗಳು, 7 ಬೆಳ್ಳಿ ಪದಕಗಳು ಹಾಗೂ 8 ಕಂಚಿನ ಪದಕಗಳನ್ನು ಗೆದ್ದಿರುವ ಸ್ಕಾಟ್ಲೆಂಡ್ ಒಟ್ಟು 17 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
8. 2 ಚಿನ್ನದ ಪದಕಗಳು, 1 ಬೆಳ್ಳಿ ಪದಕ ಹಾಗೂ 1 ಕಂಚಿನ ಪದಕವನ್ನು ಗೆದ್ದಿರುವ ಮಲೇಷ್ಯಾ ಒಟ್ಟು 4 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
9. 2 ಚಿನ್ನದ ಪದಕಗಳು ಹಾಗೂ ಏಕೈಕ ಕಂಚಿನ ಪದಕವನ್ನು ಗೆದ್ದಿರುವ ನೈಜೀರಿಯಾ ಒಟ್ಟು 3 ಪದಕಗಳನ್ನು ತನ್ನದಾಗಿಸಿಕೊಂಡು ಪದಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
10. 1 ಚಿನ್ನದ ಪದಕ, 2 ಬೆಳ್ಳಿ ಪದಕಗಳು ಹಾಗೂ 6 ಕಂಚಿನ ಪದಕಗಳನ್ನು ಗೆದ್ದಿರುವ ವೇಲ್ಸ್ ಪದಕ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.

ಪದಕ ಗೆದ್ದ ಭಾರತೀಯರ ಪಟ್ಟಿ
ಮೂರನೇ ದಿನದ ಮುಕ್ತಾಯದ ಸಮಯಕ್ಕೆ ಭಾರತದ ಪರ ಪದಕ ಗೆದ್ದ ಕ್ರೀಡಾಪಟುಗಳ ಪಟ್ಟಿ ಕೆಳಗಿನಂತಿದೆ.
1. ಸಂಕೇತ್ ಮಹದೇವ್ ಸರ್ಗರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
2. ಗುರುರಾಜ್ ಪೂಜಾರಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ
3. ಮೀರಾಬಾಯಿ ಚಾನು - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
4. ಬಿಂದ್ಯಾ ರಾಣಿ ದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
5. ಜೆರೆಮಿ ಲಾಲ್ರಿನುಂಗ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
6. ಅಚಿಂತಾ ಶೆಯುಲಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ

4ನೇ ದಿನ ಪದಕಗಳತ್ತ ಈ ಭಾರತೀಯರ ಚಿತ್ತ
ಇನ್ನು ನಾಲ್ಕನೇ ದಿನದಂದು ಪದಕ ಗೆಲ್ಲಬಹುದಾದ ಭಾರತೀಯರ ಪಟ್ಟಿ ಕೆಳಗಿನಂತಿದೆ
• ಪುರುಷರ 81 ಕೆಜಿ ವೇಟ್ ಲಿಫ್ಟಿಂಗ್ - ಫೈನಲ್‌ನಲ್ಲಿ ಅಜಯ್ ಸಿಂಗ್ ಪದಕ ಗೆಲ್ಲುವ ನಿರೀಕ್ಷೆ ( ಮಧ್ಯಾಹ್ನ 2 ಗಂಟೆಗೆ )
• ಜಿಮ್ನಾಸ್ಟಿಕ್ - ಮಹಿಳೆಯರ ವಾಲ್ಟ್ ಫೈನಲ್‌ನಲ್ಲಿ ಪ್ರಣತಿ ನಾಯಕ್ ಪದಕ ಗೆಲ್ಲುವ ನಿರೀಕ್ಷೆ ( ಸಂಜೆ 6 ಗಂಟೆಗೆ )
• ಮಹಿಳೆಯರ ವೇಟ್ ಲಿಫ್ಟಿಂಗ್ 71 ಕೆಜಿ - ಫೈನಲ್‌ನಲ್ಲಿ ಹಜಿಂದರ್ ಸಿಂಗ್ ಪದಕ ಗೆಲ್ಲುವ ನಿರೀಕ್ಷೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications