ನೀರಜ್ ಚೋಪ್ರ ಸ್ಪೂರ್ತಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸ್ಮೃತಿ ಮಂಧಾನ

ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆಯಾಗಿದ್ದು ಟಿ20 ಮಾದರಿಯಲ್ಲಿ ತಂಡಗಳು ಸೆಣೆಸಾಡಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡ ಕುಡ ಈಗಾಗಲೇ ಬರ್ಮಿಂಗ್‌ಹ್ಯಾಮ್‌ಗೆ ತಲುಪಿದ್ದು ಟೂರ್ನಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಹಿನ್ನಲೆಯಲ್ಲಿ ಭಾರತದ ಪ್ರಮುಖ ಆಟಗಾರ್ತಿ ಸ್ಮೃತಿ ಮಂಧಾನ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು ಚಿನ್ನದ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಬಲಿಷ್ಠ ತಂಡ ಎನಿಸಿಕೊಂಡಿರುವ ಆಸ್ಟ್ರೇಲಿಯಾ ಬಗ್ಗೆ ತಾನು ಹೆಚ್ಚು ಚಿಂತೆ ಹೊಂದಿಲ್ಲ ಎಂದಿರುವ ಸ್ಮೃತಿ ಮಂಧಾನ ಆಸ್ಟ್ರೇಲಿಯಾ ದೊಡ್ಡ ತಂಡವೇನಲ್ಲ ಎಂದು ಹೇಳಿಕೆ ನೀಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕಳೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರ ತಮಗೆ ಸ್ಪೂರ್ತಿ ಎಂದಿದ್ದಾರೆ.

ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ನಾಯಕಿ
ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚೊಚ್ಚಲ ಬಾರಿಗೆ ಮಹಿಳಾ ಟಿ20 ಕ್ರಿಕೆಟ್ ಆಡಿಸಲಾಗುತ್ತಿದ್ದು ಇದರಲ್ಲಿ ಭಾರತ ತಂಡದ ನಾಯಕತ್ವವನ್ನು ಹರ್ಮನ್‌ಪ್ರೀತ್ ಕೌರ್ ವಹಿಸಿಕೊಂಡಿದ್ದಾರೆ. ಜುಲೈ 29ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಸ್ಪೃತಿ ಮಂಧಾನ ಮಾತನಾಡಿದ್ದು ಪ್ರತಿಯೊಂದು ತಂಡಕ್ಕೂ ಭಿನ್ನವಾದ ಯೋಜನೆಗಳನ್ನು ತಾವು ಹಾಕಿಕೊಂಡಿರುವುದಾಗಿ ಹೇಳಿದ್ದಾರೆ.

ಆಸಿಸ್ ವಿರುದ್ಧದ ಪಂದ್ಯದ ಬಗ್ಗೆ ಮಂಧಾನ ಮಾತು
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಗ್ಗೆ ಸ್ಮೃತಿ ಮಂಧಾನ ಮಾತನಾಡಿದ್ದು "ನಾವು ಆಸ್ಟ್ರೇಲಿಯಾ ತಂಡವನ್ನು ಸಾಕಷ್ಟು ಟೂರ್ನಿಗಳ ಆರಂಭಿಕ ಪಂದ್ಯದಲ್ಲಿ ಎದುರಿಸಿದ್ದೇವೆ. ಟಿ20 ಮಾದರಿಯಲ್ಲಿ ಯಾವ ತಂಡ ಯಾವ ತಂಡವನ್ನಾಡದರೂ ಮಣಿಸಬಹುದು. ನಾನು ಆಸ್ಟ್ರೇಲಿಯಾ ತಂಡವನ್ನು ದೊಡ್ಡ ತಂಡ ಎಂದು ಪರಿಗಣಿಸಿ ಅವರನ್ನು ಸಂತೋಷಗೊಳಿಸಲಾರೆ" ಎಂದಿದ್ದಾರೆ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ. ನಮಗೆ ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಬಾರ್ಬಡೋಸ್ ವಿರುದ್ಧದ ಪಂದ್ಯಗಳು ಕಂಡಿತವಾಗಿಯೂ ಮುಖ್ಯವಾಗಿದೆ. ಈ ಎಲ್ಲಾ ಪಂದ್ಯಗಳನ್ನು ನಾವು ಗೆಲ್ಲಲು ನೋಡುತ್ತೇವೆ ಎಂದಿದ್ದಾರೆ.

ತಂಡದ ಸಿದ್ಧತೆಯ ಬಗ್ಗೆ ಮಂಧಾನ ತೃಪ್ತಿ
ಇನ್ನು ಕಾಮನ್‌ವಲ್ತ್ ಗೇಮ್ಸ್‌ಗೆ ಮುನ್ನ ಭಾರತ ತಂಡದ ಸಿದ್ಧತೆಯ ಬಗ್ಗೆ ಮಂಧಾನ ಹರ್ಷ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಬಾರತ ಶ್ರೀಲಂಕಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯನ್ನು ಭರ್ಜರಿಯಾಗಿ ಗೆದ್ದಿದ್ದು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. "ನಮ್ಮ ಸಿದ್ಧತೆ ತುಂಬಾ ಚೆನ್ನಾಗಿದೆ. ಅದುವೇ ನಮ್ಮನ್ನು ಪದಕದತ್ತ ತೆಗೆದುಕೊಂಡು ಹೋಗಲಿದೆ ಎಂದು ಭಾವಿಸುತ್ತೇನೆ. ನಾವು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದೇವೆ" ಎಂದಿದ್ದಾರೆ ಮಂಧಾನ.

ನೀರಜ್ ಚೋಪ್ರ ಚಿನ್ನ ಗೆದ್ದ ಕ್ಷಣವನ್ನು ನೆನಪಿಸಿದ ಸ್ಮೃತಿ
ಇನ್ನು ಈ ಸಂದರ್ಭದಲ್ಲಿ ಸ್ಮೃತಿ ಮಂಧಾನ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರ ಕಳೆದ ವರ್ಷದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ನೀರಜ್ ಚೋಪ್ರ ಚಿನ್ನ ಗೆದ್ದ ಆ ಕ್ಷಣ ರೋಮಾಂಚನವನ್ನುಂಟು ಮಾಡಿತ್ತು ಎಂದಿರುವ ಮಂಧಾನ ಈ ಬಾರಿ ಕ್ರಿಕೆಟ್‌ನಲ್ಲಿ ಪದಕ ಗೆಲ್ಲು ಅವರು ಸ್ಪೂರ್ತಿಯಾಗಿದ್ದಾರೆ ಎಂದಿದ್ದಾರೆ.
ಟೀಮ್ ಇಂಡಿಯಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಎಸ್. ಮೇಘನಾ, ತನಿಯಾ ಸಪ್ನಾ ಭಾಟಿಯಾ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಠಾಕೂರ್, ಜೆಮಿಮಾ ರಾಡ್ರಿಗಸ್, ರಾಧಾ ಯಾದವ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications