Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy 2025: ಕೆಟ್ಟ ಮೇಲೂ ಬುದ್ದಿ ಕಲಿಯದ ಪಾಕ್: ಈ ಕೆಲಸ ಮಾಡೋದು ಯಾವಾಗ?

ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಚಾಂಪಿಯನ್ಪಿ ಟೋಯ ಮೇಲೆ ವಿಶ್ವಾದ ಕಣ್ಣು ನೆಟ್ಟಿದೆ. ಈ ಮೆಗಾ ಟೂರ್ನಿಯ ಸಿದ್ಧತೆ ಆಮೆ ಗತಿಯಲ್ಲಿ ಸಾಗುತ್ತಿದೆ. ನಿಜಕ್ಕೂ ಈ ಸಂಗತಿ ಐಸಿಸಿಯ ಕಣ್ಣ ಕೆಂಪಾಗುವ ಹಾಗೆ ಮಾಡಿದೆ. ಬಹು ವರ್ಷಗಳಿಂದ ಪಾಕಿಸ್ತಾನ ಐಸಿಸಿ ಟ್ರೋಫಿ ಎನ್ನು ಆಯೋಜಿಸುವ ಕನಸು ಕಂಡಿತ್ತು. ಆದರೆ ಈಗ ಆ ಕನಸು ಬೇರೆ ಬೇರೆ ದೇಶಕ್ಕೆ ಶಿಫ್ಟ್ ಆಗುತ್ತಾ ಎಂಬ ಆತಂಕ ಮನೆ ಮಾಡಿದೆ. ಇದಕ್ಕೆ ಕಾರಣ ಅಲ್ಲಿಯ ಮೈದಾನ. ಹಾಗಿದ್ದರೆ ಪಾಕಿಸ್ತಾನದಲ್ಲಿ ಗ್ರೌಂಡ್ ಗಳು ಹೇಗಿವೆ ಎಂಬ ಬಗ್ಗೆ ವರದಿ.

ಪಾಕಿಸ್ತಾನ ಆಯೋಜಿಸುತ್ತಿರುವ ಚಾಂಪಿಯನ್ ಟ್ರೋಪಿಗೆ ಭಾರತ ಆ ದೇಶಕ್ಕೆ ಪ್ರವಾಸ ಬೆಳೆಸುತ್ತಿಲ್ಲ. ಹೀಗಾಗಿ ಭಾರತದ ಪಂದ್ಯಗಳನ್ನು ಪಾಕ್ ಬದಲಿಗೆ ದುಬೈನಲ್ಲಿ ಆಡಲು ನಿರ್ಧರಿಸಲಾಗಿದೆ. ಈ ನಿರ್ಧಾರ ನಿಜಕ್ಕೂ ಪಾಕಿಸ್ತಾನಕ್ಕೆ ಬೇಸರ ತರಿಸಿದೆ. ಅಂದಹಾಗೆ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸಲು ಐಸಿಸಿ ಕೆಲವು ನಿಯಮಗಳನ್ನು ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ಕಾರ್ಯಪ್ರವೃತ್ತವಾಗಿದೆ. ಆದರೆ ಅಲ್ಲಿ ನಡೆದಿರುವ ಕೆಲಸ ನಿಜಕ್ಕೂ ಸ್ಥಳೀಯ ಅಭಿಮಾನಿಗಳಿಗೆ ಬೇಸರ ತರಿಸಿದೆ.

Concerns Over Pakistan s Champions Trophy Preparations Amid ICC s Deadline Worries

ಪಾಕ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ

ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ 3 ಕ್ರೀಡಾಂಗಣಗಳಲ್ಲಿ ನಡೆಯಲಿವೆ.ಲಾಹೋರ್, ಕರಾಚಿ, ರಾವಲ್ಪಿಂಡಿ ಮೈದಾನಗಳು ಚಾಂಪಿಯನ್ಸ್‌ ಟ್ರೋಫಿಗೆ ಆತಿಥ್ಯವನ್ನು ವಹಿಸಲಿವೆ. ಆದರೆ ಈಗ ಈ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಗಳು ಇನ್ನು ಮುಗಿದಿಲ್ಲ. ಹೀಗಾಗಿ ಈ ಕಾರ್ಯಗಳು ಮುಗಿಯದೇ ಇದ್ದರೆ ಏನು ಕಥೆ ಎಂಬ ಆತಂಕ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಪಾಕಿಸ್ತಾನ ಕ್ರಿಕೆಟ್‌ ಸಂಸ್ಥೆ ವಿಶ್ವದ ಮುಂದೆ ತನ್ನ ಕೆಲಸಗಳೆಲ್ಲಾ ಮುಗಿದಿವೆ ಎಂದು ಹೇಳುತ್ತಲೇ ಇದೆ. ಆದರೆ ಈ ಮೈದಾನದ ಕಾರ್ಯಗಳು ಇನ್ನು ಸಹ ಪುರ್ಣಗೊಂಡಿಲ್ಲ. ಬಹುತೇಕ ಮೈದಾನಗಳಲ್ಲಿ ಕೆಲಸ ಅಪೂರ್ಣವಾಗಿದೆ. ಈ ಬಗ್ಗೆ ಫೋಟೋಗಳು ಸಹ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.

ಆಯೋಜನೆ ಕೈ ತಪ್ಪು ಆತಂಕ

ಈ ಬಗ್ಗೆ ತಮ್ಮ ಅನಿಸಿಕೆಯನ್ನು ಮೈಖೇಲ್‌ ಜೊತೆಗೆ ಹಂಚಿಕೊಂಡಿರುವ ಪಾಕ್‌ ಪತ್ರಕರ್ತ, "ಚಾಂಪಿಯನ್ಸ್ ಟ್ರೋಫಿಗೆ ಇನ್ನು ಆರು ವಾರಗಳು ಮಾತ್ರ ಉಳಿದಾಗ, ಕಾರ್ಯಗಳು ಇನ್ನು ಪೂರ್ಣ ಆಗದೇ ಇರುವ ಬಗ್ಗೆ ನಿಶ್ಚಿತವಾಗಿಯೂ ಆತಂಕ ಇದೆ. ಅಲ್ಲದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಮ್ಮ ಕೈಯಿಂದ ಜಾರಿ ಹೋಗುತ್ತದೆ ಎಂಬ ಭಯ ನಿಶ್ಚಿತವಾಗಿ ನಮಗೆ ಕಾಡುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಐಸಿಸಿ ನೀಡಿದ ಗಡುವು ಪೂರ್ಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಪಿಸಿಬಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಪಿಸಿಬಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಹೊಂದಿದ್ದಾರೆ. ಆದರೆ ಪಾಕ್‌ ಕ್ರಿಕೆಟ್‌ ಅಂಗಳಗಳ ಸ್ಥಿತಿಯನ್ನು ಕಂಡರೆ ಇದು ಸಾಧ್ಯವೇ ಇಲ್ಲ ಎಂಬಂತೆ ತೋರುತ್ತದೆ. ಹೀಗಾಗಿ ಸ್ಥಳಿಯ ಅಭಿಮಾನಿಗಳಿಗೆ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಿಂದ ಬೇರೆ ದೇಶಕ್ಕೆ ಶಿಫ್ಟ್ ಆಗುವ ಭಯ ಆರಂಭವಾಗಿದೆ.

Story first published: Thursday, January 9, 2025, 13:36 [IST]
Other articles published on Jan 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+