Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಲ್ಮಾನ್‌ ಅಲಿ ರನೌಟ್ ವಿವಾದ: ಬಾಂಗ್ಲಾ ವಿರುದ್ಧ ಸರಣಿ ಸಮಬಲ ಸಾಧಿಸಿದ ಪಾಕ್

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಏಕದಿನ ಪಂದ್ಯ ಮೀರ್‌ಪುರದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಪಾಕ್‌ ಡಕ್ವರ್ತ್ ಲೂಯಿಸ್ ನಿಯಮದಂತೆ 128 ರನ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಸಲ್ಮಾನ್‌ ಅಲಿ ಆಘಾ ಅವರನ್ನು ಬಾಂಗ್ಲಾದೇಶ ಔಟ್ ಮಾಡಿದ್ದು, ಸದ್ಯ ವಿವಾದವನ್ನು ಸೃಷ್ಟಿಸಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕ್‌ 47.3 ಓವರ್‌ಗಳಲ್ಲಿ 274 ರನ್ ಸೇರಿಸಿ ಆಲೌಟ್ ಆಯಿತು. ಪಾಕಿಸ್ತಾನ ಪರ ಇನಿಂಗ್ಸ್‌ ಆರಂಭಿಸಿದ ಸಾಹಿಬ್‌ಜಾದ ಫರ್ಹಾನ್‌ (31) ಹಾಗೂ ಮಾಜ್ ಸದಾಕತ್ ಜೋಡಿ ಮೊದಲ ವಿಕೆಟ್‌ಗೆ ಶತಕ ಜೊತೆಯಾಟವನ್ನು ನೀಡಿತು. ಆರಂಭಿಕ ಮಾಜ್ ಸದಾಕತ್ 46 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್‌ ನೆರವಿನಿಂದ 75 ರನ್‌ಗಳಿಸಿದರು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 44 ರನ್‌ ಸಿಡಿಸಿದರು.

Controversial

ಸಲ್ಮಾನ್ ಅಲಿ ಆಘಾ 7 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 64 ರನ್‌ ಸಿಡಿಸಿದ್ದಾಗ ವಿವಾದಾತ್ಮಕ ರನ್‌ಔಟ್‌ಗೆ ಬಲಿಯಾದರು. ಸಲ್ಮಾನ್‌ ಅಲಿ ಆಘಾ ಬೌಲರ್‌ ತುದಿಯಲ್ಲಿದ್ದಾಗ ರನೌಟ್ ನಡೆಯಿತು. ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ 39ನೇ ಓವರ್‌ನ ನಾಲ್ಕನೇ ಎಸೆತನ್ನು ಪ್ಲೇಡ್ ಮಾಡಿದರು.

ವಿವಾದಾತ್ಮಕ ರನೌಟ್

ರಿಜ್ವಾನ್‌ ಪ್ಲೇಡ್ ಮಾಡಿದ ಚೆಂಡು ಬೌಲರ್‌ ಬಲಭಾಗದಲ್ಲಿ ಸಾಗಿತು. ಇದನ್ನು ಕಂಡು ಮೆಹದಿ ಹಸನ್‌ ಚೆಂಡನ್ನು ಪಡೆಯಲು ಮುಂದೆ ಸಾಗಿದರು. ಆಗ ಸಲ್ಮಾನ್ ಅಲಿ ಆಘಾ ರನ್‌ ಪಡೆಯಲು ಕ್ರೀಸ್ ಬಿಟ್ಟು ಆಗಿತ್ತು. ಮೆಹದಿ ಹಸನ್ ಹಾಗೂ ಸಲ್ಮಾನ್ ಅಲಿ ಡಿಕ್ಕಿ ಹೊಡೆದರು. ಆಗ ಸಮಯಪ್ರಜ್ಞೆ ಪ್ರದರ್ಶಿಸಿದ ಮೆಹದಿ ಚೆಂಡನ್ನು ಪಡೆದು ಸ್ಟಂಪ್ಸ್‌ ಗುರಿ ಇಟ್ಟರು. ಸಲ್ಮಾನ್ ಅಲಿ ಆಘಾ ಕ್ರೀಸ್‌ನಿಂದ ಹೊರಗಡೆ ಇದ್ದರು. ಹೀಗಾಗಿ ಫೀಲ್ಡ್ ಅಂಪೈರ್ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದರು. ಟಿವಿ ಅಂಪೈರ್ ಇದನ್ನು ಔಟ್ ಎಂದು ನೀಡಿದರು.

ಸಲ್ಮಾನ್ ಅಲಿ ಆಘಾ ಇಲ್ಲದ ಮನಸ್ಸಿನಿಂದ ಎದುರಾಳಿ ಆಟಗಾರರನ್ನು ಮಾತಿನ ಮೂಲಕ ತಿವಿಯುತ್ತಾ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

275 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡದ ಪರ ಲಿಟನ್ ದಾಸ್ 41 ರನ್‌ಗಳಿಗೆ ಆಟ ಮುಗಿಸಿದರು. ಅಂತಿಮವಾಗಿ ಬಾಂಗ್ಲಾದೇಶ 23.3 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಪಾಕ್‌ ಪರ ಮಾಜ್ ಸದಾಕತ್ ಹಾಗೂ ಹ್ಯಾರಿಸ್ ರೌಫ್ ತಲಾ ಮೂರು ವಿಕೆಟ್ ಪಡೆದರು.

ಹುಸೇನ್ ತಲಾತ್‌ಗೆ ಗಾಯ

ಪಾಕಿಸ್ತಾನದ ಮೊಹಮ್ಮದ್ ವಾಸಿಮ್ ಎಸೆದ ಇನಿಂಗ್ಸ್‌ನ 6 ನೇ ಓವರ್‌ನಲ್ಲಿ, ಲಿಟನ್ ದಾಸ್ ಎರಡನೇ ಎಸೆತದಲ್ಲಿ ಥರ್ಡ್‌ ಮ್ಯಾನ್ ಪ್ರದೇಶದಲ್ಲಿ ಬೌಂಡರಿ ಬಾರಿಸಲು ಮುಂದಾದರು. ಆಗ ಅಲ್ಲಿ ಫೀಲ್ಡ್ ಮಾಡುತ್ತಿದ್ದ ಹುಸೇನ್ ತಲಾತ್, ಬೌಂಡರಿಯ ಕಡೆಗೆ ಹೋಗುತ್ತಿದ್ದ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಅವರ ಭುಜಕ್ಕೆ ಗಾಯವಾಯಿತು. ಅವರು ನೋವಿನಿಂದ ಬಳಲುತ್ತಿದ್ದರು. ಇವರ ಪರಿಸ್ಥಿತಿಯನ್ನು ಕಂಡು ತಕ್ಷಣ ಅವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

Story first published: Friday, March 13, 2026, 23:51 [IST]
Other articles published on Mar 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+