For Quick Alerts
ALLOW NOTIFICATIONS  
For Daily Alerts
 

ಕೊರೊನಾ: ಹೊಸ ಉತ್ಪಾದನೆ ಆರಂಭಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್

ಮಾರಾಣಂತಿಕ ಕೊರೊನಾ ವೈರಸ್ ತನ್ನ ಕಬಂಧಬಾಹುವನ್ನು ವಿಶ್ವದೆಲ್ಲಡೆ ವಿಸ್ತರಿಸುತ್ತಿದೆ. ಆಸ್ಟ್ರೇಲಿಯಾದಲ್ಲಿ ಕೂಡಾ ಪಾಸಿಟಿವ್ ಕೇಸ್ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇದುವರೆಗೆ, 709 ಕೋವಿಡ್ - 19 ಕೇಸ್ ಅಲ್ಲಿ ಖಚಿತಗೊಂಡಿದೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನ (ಬುಷ್ ಫೈರ್) ವೇಳೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಶೇನ್ ವಾರ್ನ್ ಮಾನವೀಯತೆ ಮೆರೆದಿದ್ದರು.

ಕೊರೊನಾ ವೈರಸ್ ವಿರುದ್ದ ಹೋರಾಡಲು ತಮ್ಮ ಕೈಲಾದ ಸಹಾಯವನ್ನು ಮಾಡಲು ನಿರ್ಧರಿಸಿರುವ, ಶೇನ್ ವಾರ್ನ್ ಈಗ ಹೊಸ ಉತ್ಪಾದನೆ ಆರಂಭಿಸಿದ್ದಾರೆ.

ಈ ವೈರಸ್ ವಿರುದ್ದ ಹೋರಾಡಲು ತಮ್ಮ ಈಗಿನ ಉದ್ಯಮವನ್ನು ಬಂದ್ ಮಾಡಿ ಶೇನ್ ವಾರ್ನ್, ಹೊಸ ಉದ್ಯಮ ಸ್ಥಾಪಿಸಿ, ಈಗಾಗಲೇ ಉತ್ಪಾದನೆಯನ್ನೂ ಹೊರತೆಗೆದಿದ್ದಾರೆ.

ಆಸ್ಟ್ರೇಲಿಯಾ ಕಾಡ್ಗಿಚ್ಚು

ಆಸ್ಟ್ರೇಲಿಯಾ ಕಾಡ್ಗಿಚ್ಚು

ಕಾಡ್ಗಿಚ್ಚಿನ (ಬುಷ್ ಫೈರ್) ವೇಳೆ, ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ, ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ತಮ್ಮ ಬ್ಯಾಗಿ ಗ್ರೀನ್‌ ಕ್ಯಾಪ್‌ ಅನ್ನು ಮಾರಾಟಕ್ಕೆ ಇಟ್ಟಿದ್ದರು. ಅದು ಭರ್ಜರಿ ಮೊತ್ತಕ್ಕೆ ಹರಾಜಾಗಿತ್ತು. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚು ದುರಂತಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಾರ್ನ್ ತನ್ನ ಕ್ಯಾಪ್‌ನ್ನು ಹರಾಜಿಗಿಟ್ಟು ಹಣ ಸಂಗ್ರಹಿಸಲು ನೆರವಾಗಿದ್ದರು.

ಬ್ಯಾಗಿ ಗ್ರೀನ್‌ ಕ್ಯಾಪ್‌ ಮಾರಾಟ

ಬ್ಯಾಗಿ ಗ್ರೀನ್‌ ಕ್ಯಾಪ್‌ ಮಾರಾಟ

ಜನವರಿ 10ರ ಬೆಳಗ್ಗೆ ಬಿಡ್ಡಿಂಗ್ ಕೊನೆಗೊಂಡಿತ್ತು. ಆ ವೇಳೆಗೆ, 50ರ ಹರೆಯದ ಶೇನ್ ವಾರ್ನ್ ಅವರ ಜನಪ್ರಿಯ ಬ್ಯಾಗಿ ಗ್ರೀನ್‌ ಕ್ಯಾಪ್‌ $1,007,500 (7,15,97,483 ರೂ.)ಗೆ ಹರಾಜಾಗಿ ದಾಖಲೆ ನಿರ್ಮಿಸಿತ್ತು. 'M.C. from Sydney'ಗೆ ವಾರ್ನ್ ಕ್ಯಾಪ್‌ ಮಾರಾಟವಾಗಿತ್ತು.

ಶೇನ್ ವಾರ್ನ್‌ಗೆ 12 ತಿಂಗಳು ಡ್ರೈವಿಂಗ್ ನಿಷೇಧ, ವಕೀಲರ ಪ್ರತಿಕ್ರಿಯೆ ಏನು?

ಕೊರೊನಾ ವಿರುದ್ದ ಹೋರಾಟ

ಕೊರೊನಾ ವಿರುದ್ದ ಹೋರಾಟ

ಕೊರೊನಾ ವಿರುದ್ದ ಹೋರಾಡಲು ಪಣ ತೊಟ್ಟಿರುವ ಶೇನ್ ವಾರ್ನ್, ಸ್ಯಾನಿಟೈಸರ್ ಉದ್ಯಮವನ್ನು ಆರಂಭಿಸಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ, ಆಲ್ಕೋಹಾಲ್ ಮೂಲಕ ಈ ಉತ್ಪಾದನೆಯನ್ನು ಆರಂಭಿಸಿದ್ದಾರೆ.

ಎರಡು ಆಸ್ಪತ್ರೆಗಳಿಗೆ ಈಗಾಗಲೇ ಸ್ಯಾನಿಟೈಸರ್ ಪೂರೈಸಿದ್ದಾರೆ

ಎರಡು ಆಸ್ಪತ್ರೆಗಳಿಗೆ ಈಗಾಗಲೇ ಸ್ಯಾನಿಟೈಸರ್ ಪೂರೈಸಿದ್ದಾರೆ

ಶೇನ್ ವಾರ್ನ್ ಈಗಾಗಲೇ 'ಸೆವೆನ್ ಜೀರೋ ಏಟ್ ಜಿನ್' ಎನ್ನುವ ಕಂಪೆನಿಯನ್ನು ಹೊಂದಿದ್ದಾರೆ. ಶೇ.70ರಷ್ಟು ಆಲ್ಕೋಹಾಲ್ ಹೊಂದಿರುವ ಸ್ಯಾನಿಟೈಸರ್ ಅನ್ನು ವಾರ್ನ್ ತಯಾರಿಸುತ್ತಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾದ ಎರಡು ಆಸ್ಪತ್ರೆಗಳಿಗೆ ಈಗಾಗಲೇ ಸ್ಯಾನಿಟೈಸರ್ ಅನ್ನು ವಾರ್ನ್ ಪೂರೈಸಿದ್ದಾರೆ. ಇಲ್ಲಿ ಕೊರೊನಾ ವೈರಸ್ 52 ಜನರಿಗೆ ಪಾಸಿಟಿವ್ ಆಗಿದೆ.

Story first published: Friday, March 20, 2020, 14:32 [IST]
Other articles published on Mar 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+