ಚೆಂಡಿಗೆ ಎಂಜಲು ಸವರುವಂತಿಲ್ಲ, ಕ್ರಿಕೆಟ್‌ನಲ್ಲಿ ಬದಲಾಗಲಿವೆ ನಿಯಮಗಳು

ಲಂಡನ್, ಏಪ್ರಿಲ್ 25: ಕೊರೊನಾವೈರಸ್ ಸೋಂಕು ಕ್ರೀಡಾ ಸ್ಪರ್ಧೆಗಳ ವೇಳಾಪಟ್ಟಿಗಳನ್ನು ಅಸ್ತವ್ಯಸ್ತಗೊಳಿಸಿದ್ದಷ್ಟೇ ಅಲ್ಲ, ಕ್ರಿಕೆಟ್‌ನಲ್ಲಿದ್ದ ಕೆಲ ಹಳೆ ನಿಯಮಗಳನ್ನೂ ಬದಲಿಸುವುದರಲ್ಲಿದೆ. ಕೋವಿಡ್-19ನಿಂದಾಗಿ ಕ್ರಿಕೆಟ್‌ನಲ್ಲಿರುವ ಚೆಂಡು ವಿರೂಪ ನಿಯಮಗಳು ಕಾನೂನುಬದ್ದಗೊಳ್ಳುವುದರಲ್ಲಿದೆ.
ಎಂಜಲು ಅಥವಾ ಬೆವರನ್ನು ಉಪಯೋಗಿಸಿ ಆಟದ ವೇಳೆ ಕ್ರಿಕೆಟಿಗರು ಹೊಸ ಚೆಂಡಿನ ಹೊರಪದರವನ್ನು ತಿಕ್ಕಿ ಚೆಂಡನ ಹೊಳಪು ಹೆಚ್ಚಿಸುವುದು ಸಾಮಾನ್ಯವಾಗಿತ್ತು. ಆದರೆ ಕೋವಿಡ್-19 ಸೋಂಕಿನ ಕಾರಣ ಇದರಿಂದ ಮುಂದೊಮ್ಮೆ ಅಪಾಯ ಬರುವ ಸಾಧ್ಯತೆಯನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯ ವೈದ್ಯಕೀಯ ಮಂಡಳಿ ಮನಗಂಡಿದೆ.
ಹೀಗಾಗಿ ಆಟದ ವೇಳೆ ಎಂಜಲು ಮತ್ತು ಬೆವರು ಬಳಸುವ ನಿಯಮವನ್ನು ಬದಲಿಸುವಂತೆ ಐಸಿಸಿ ವೈದ್ಯಕೀಯ ಮಂಡಳಿ ಐಸಿಸಿಗೆ ತಿಳಿಸಿದೆ. ಆದ್ದರಿಂದ ಮುಂಬರಲಿರುವ ದಿನಗಳಲ್ಲಿ ಎಂಜಲು ಬಳಸಿ ಚೆಂಡನ್ನು ತಿಕ್ಕುವ ನಿಯಮ ಬದಲಾಗುವ ಸಾಧ್ಯತೆಯಿದೆ.
'ಟೆಸ್ಟ್ ಕ್ರಿಕೆಟ್‌ನಲ್ಲಿ ಅಂಪೈರ್‌ಗಳ ಮೇಲ್ವಿಚಾರಣೆಯಲ್ಲಿ ಕೃತಕ ಪದಾರ್ಥಗಳನ್ನು ಬಳಸಿ ಚೆಂಡನ್ನು ಪಾಲಿಶ್ ಮಾಡುವ ವಿಧಾನವನ್ನು ಪರಿಗಣಿಸಲು ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಎಂಜಲು ಬಳಸಿ ಚೆಂಡಿನ ಹೊಳಪು ಹೆಚ್ಚಿಸುವ ವಿಧಾನಕ್ಕೆ ಕೊನೆ ಹಾಡಲು ಅಧಿಕಾರಿಗಳು ಮುಂದಾಗಿದ್ದಾರೆ,' ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋದಲ್ಲಿನ ವರದಿಯೊಂದು ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications