
ನವದೆಹಲಿ: ಭಾರತದ ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ತನ್ನ ಮೊದಲ ಕೋವಿಡ್-19 ವ್ಯಾಕ್ಸಿನ್ ಡೋಸ್ ಪಡೆದುಕೊಂಡಿದ್ದಾರೆ. ಕೋವಿಡ್ ಮೊದಲ ಲಸಿಕೆ ಹಾಕಿಕೊಂಡ ಬಳಿಕ ದಿನೇಶ್ ಆ ಚಿತ್ರವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡು 'ವ್ಯಾಕ್ಸಿನೇಟೆಡ್' ಎಂದು ಬರೆದುಕೊಂಡಿದ್ದರು.
ದಿನೇಶ್ ಕಾರ್ತಿಕ್ ಹಾಕಿಕೊಂಡಿದ್ದ ಚಿತ್ರವನ್ನು ಮುಂದಿಟ್ಟುಕೊಂಡು, ಕಾರ್ತಿಕ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ (ಆಸ್ಟ್ರೇಲಿಯಾ ಆಟಗಾರ) ಟ್ರೋಲ್ ಮಾಡಿದ್ದಾರೆ. ಕನಿಷ್ಟ ನೀನು ಪ್ಯಾಂಟ್ ಆದರೂ ಹಾಕಬೇಕಿತ್ತು' ಎಂದು ಲಿನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೋಗುವಾಗ ಕಾರ್ತಿಕ್ ನೈಟ್ ಪ್ಯಾಂಟ್‌ನಂಥ ಡ್ರೆಸ್ ಹಾಕಿದ್ದರು. ಇದನ್ನೇ ಮುಂದಿಟ್ಟುಕೊಂಡು ಲಿನ್ ತಮಾಷೆ ಮಾಡಿದ್ದರು. ಆದರೆ ಇದಕ್ಕೆ ಕಾರ್ತಿಕ್ ಕೂಡ ತರಲೆಯಾಗೇ ಪ್ರತಿಕ್ರಿಯಿಸಿದ್ದಾರೆ.
ಲಿಗ್ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ಕಾರ್ತಿಕ್, 'ನಾನು ಕೂಡ ನಿನ್ ಹಾಗೆ ಶಾರ್ಟ್ಸ್ ಹಾಕಲು ಯೋಚಿಸಿದ್ದೆ. ಆದರೆ ನಾನು ಮಾಲ್ಡೀವ್ಸ್‌ನಲ್ಲಿಲ್ಲ ಎಂದು ಮನವರಿಕೆಯಾಗಿ ಮತ್ತೆ ಇದನ್ನು ಧರಿಸಿದೆ' ಎಂದು ಬರೆದುಕೊಂಡಿದ್ದಾರೆ. ಐಪಿಎಲ್ ಬಳಿಕ ಆಸ್ಟ್ರೇಲಿಯಾ ಆಟಗಾರರ ಕ್ವಾರಂಟೈನ್‌ಗಾಗಿ ಮಾಲ್ಡೀವ್ಸ್‌ಗೆ ತೆರಳಿದ್ದರು. ಹೀಗಾಗಿ ಕಾರ್ತಿಕ್ ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.