ಇಂಗ್ಲೆಂಡ್ ಪರ ಆಡಿದ ವಾಷಿಂಗ್ಟನ್ ಸುಂದರ್ ವಿಕೆಟ್ ಮುರಿದ ಮೊಹಮ್ಮದ್ ಸಿರಾಜ್: ವೀಡಿಯೋ

ಚೆಸ್ಟರ್ ಲೆ ಸ್ಟ್ರೀಟ್: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆ ಭಾರತೀಯ ತಂಡದ ವಿರುದ್ಧ ಭಾರತೀಯ ಆಟಗಾರನೇ ಆಡೋದು ನೋಡೋಕೆ ಮಜಾ ಅನ್ನಿಸುತ್ತೆ. ಯಾಕೆಂದರೆ ಇಬ್ಬರೂ ಭಾರತೀಯರಾಗಿದ್ದಾಗ ಅವರ ನಡುವಿನ ಕದನ ಜಿದ್ದಾಜಿದ್ದಿ ಅನ್ನಿಸುತ್ತೆ. ಪಂದ್ಯ ಜಿದ್ದಾಜಿದ್ದಿ ಅನ್ನಿಸಲಿ ಬಿಡಲಿ ಭಾರತೀಯನಿಗೆ ಭಾರತೀಯನೇ ಎದುರಾಳಿಯಾಗಿದ್ದಾಗ ಪಂದ್ಯ ನೋಡೋದಂತೂ ಗಮ್ಮತ್ತೇ ಬಿಡಿ (ಪಂದ್ಯದ Live ವಿಡಿಯೋ ಕೆಳಗಿದೆ).
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯರಿಬ್ಬರು ಮುಖಾಮುಖಿಯಾದ ದೃಶ್ಯ ಇತ್ತೀಚೆಗೆ ಕಾಣಸಿಕ್ಕಿದೆ. ಇಂಗ್ಲೆಂಡ್‌ನ ಚೆಸ್ಟರ್ ಲೆ ಸ್ಟ್ರೀಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ಸ್ vs ಕೌಂಟಿ ಸೆಲೆಕ್ಟ್ XI ನಡುವಿನ ಅಭ್ಯಾಸ ಪಂದ್ಯದಲ್ಲಿ ಯುವ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಯುವ ಬ್ಯಾಟ್ಸ್‌ಮನ್ ವಾಷಿಂಗ್ಟನ್ ಸುಂದರ್ ಮುಖಾಮುಖಿಯಾಗಿದ್ದ ದೃಶ್ಯ ಗಮನ ಸೆಳೆದಿದೆ.

ಇಂಗ್ಲೆಂಡ್ ಪರ ಸುಂದರ್ ಕಣಕ್ಕೆ
ಇಂಗ್ಲೆಂಡ್-ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ನಡೆದ ಕೌಂಟಿ ಸೆಲೆಕ್ಟ್ XI ಮತ್ತು ಇಂಡಿಯನ್ಸ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ವಾಷಿಂಗ್ಟನ್ ಸುಂದರ್ ಕೌಂಟಿ ಸೆಲೆಕ್ಟ್ XI ಪರ ಆಡಿದ್ದರು. ಯಾಕೆಂದರೆ, ಇಂಗ್ಲೆಂಡ್ ತಂಡದಲ್ಲಿ ಕೋವಿಡ್-19 ಪ್ರಕರಣಗಳು ಕಾಣಸಿಕೊಂಡಿದ್ದರಿಂದ ಹಲವಾರು ಆಟಗಾರರು ಮುನ್ನೆಚ್ಚರಿಕೆಯಾಗಿ ಕ್ವಾರಂಟೈನ್ ಪಾಲಿಸಿದ್ದರು. ಹೀಗಾಗಿ ಅಭ್ಯಾಸ ಪಂದ್ಯಕ್ಕೆ ಆಂಗ್ಲ ತಂಡದಲ್ಲಿ ಆಟಗಾರರು ಕಡಿಮೆಯಾಗಿದ್ದರಿಂದ ಆರಂಭದಲ್ಲಿ ಆವೇಶ್ ಇಂಗ್ಲೆಂಡ್ ತಂಡದ ಪರ ಆಡಿದ್ದರು. ಖಾನ್ ಗಾಯಗೊಂಡು ಸರಣಿಯಿಂದ ಹೊರಬಿದ್ದ ಬಳಿಕ ಖಾನ್ ಜಾಗದಲ್ಲಿ ಇಂಗ್ಲೆಂಡ್ ತಂಡದಲ್ಲಿ ವಾಷಿಂಗ್ಟನ್ ಆಡಿದ್ದರು. ಅಚ್ಚರಿಯೆಂದರೆ ಸುಂದರ್ ಕೂಡ ಈಗ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ!
1 ರನ್‌ಗೆ ಸುಂದರ್ ವಿಕೆಟ್ ಪತನ
ಕೌಂಟಿ ಸೆಲೆಕ್ಟ್ XI ಪರ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದ್ದ ವಾಷಿಂಗ್ಟನ್ ಸುಂದರ್, 12.5ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಎಸೆತಕ್ಕೆ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. 12.4ನೇ ಎಸೆತದ ಬಳಿಕ ಸಿರಾಜ್ ಅವರು ಸುಂದರ್ ಅವರನ್ನುದ್ದೇಶಿಸಿ ಎಂಥದ್ದೋ ಹೇಳಿ ಕೆದಕಿದರು. ಮುಂದಿನ ಎಸೆತಕ್ಕೆ ಸುಂದರ್ ಅವರು ರೋಹಿತ್ ಶರ್ಮಾಗೆ ಕ್ಯಾಚಿತ್ತು ನಿರ್ಗಮಿಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಪಂದ್ಯದ ಸಂಕ್ಷಿಪ್ತ ಸ್ಕೋರ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಡಿಯನ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ 101, ರವೀಂದ್ರ ಜಡೇಜಾ 75 ರನ್‌ನೊಂದಿಗೆ 93 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 311 ರನ್ ಗಳಿಸಿತ್ತು. ಕೌಂಟಿ ಸೆಲೆಕ್ಟ್ XI ಮೊದಲನೇ ಇನ್ನಿಂಗ್ಸ್‌ನಲ್ಲಿ ಹಸೀಬ್ ಹಮೀದ್ 112, ಪೀಟರ್ಸನ್ ವೈಟ್ 33 ರನ್‌ನೊಂದಿಗೆ 82.3ನೇ ಓವರ್‌ಗೆ 10 ವಿಕೆಟ್ ನಷ್ಟದಲ್ಲಿ 220 ರನ್ ಬಾರಿಸಿ ಹಿನ್ನಡೆ ಅನುಭವಿಸಿದೆ. ಇಂಡಿಯನ್ಸ್ ಈಗ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications