ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಸೋಲಿಗೆ ಪ್ರಮುಖ ಕಾರಣ ಹೇಳಿದ ವಾಲ್ಷ್

ಪೋರ್ಟ್ ಆಫ್ ಸ್ಪೇನ್, ಜುಲೈ 30: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್ ಸರಣಿಯನ್ನು ವೆಸ್ಟ್ ಇಂಡೀಸ್ ಯಶಸ್ವಿಯಾಗಿ ಆರಂಭಿಸಿತ್ತು. ಆದರೆ ಉಳಿದೆರಡು ಪಂದ್ಯಗಳನ್ನು ಸೋತ ಕೆರಿಬಿಯನ್ನರು, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿದ್ದರು.
ಮೊದಲ ಪಂದ್ಯ ಗೆದ್ದು ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿದ್ದ ವೆಸ್ಟ್ ಇಂಡೀಸ್, ಉಳಿದೆರಡು ಪಂದ್ಯಗಳಲ್ಲಿ ಸೋತು ಸರಣಿಯನ್ನು 2-1ರಿಂದ ಕಳೆದುಕೊಳ್ಳಲು ಪ್ರಮುಖ ಕಾರಣವೇನೆಂದು ವಿಂಡೀಸ್ ಮಾಜಿ ವೇಗಿ, ದಿಗ್ಗಜ ಕರ್ಟ್ನಿ ವಾಲ್ಷ್ ಹೇಳಿದ್ದಾರೆ. ತಪ್ಪು ನಿರ್ಧಾರದಿಂದ ವಿಂಡೀಸ್ ಸರಣಿ ಸೋತಿದೆ ಎಂದು ವಾಲ್ಷ್ ಅಭಿಪ್ರಾಯಿಸಿದ್ದಾರೆ.
ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ವಾಲ್ಷ್, 'ಬಹುಶಃ ವಿಂಡೀಸ್ ತಂಡ, ನಾವು 1-0ಯಿಂದ ಮುಂದಿದ್ದೇವೆ, ಜಾಗೃತೆಯಾಗಿ ಆಡಬೇಕು, ಮುಂದಿನ ಎರಡು ಪಂದ್ಯಗಳನ್ನು ಸೋಲಬಾರದು ಎಂದು ಯೋಚಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಆಂಗ್ಲರು ಹೀಗೆ ಯೋಚಿಸಿ ಆಡಿದರು. ಮುಖ್ಯವಾಗಿ ಐತಿಹಾಸಿಕ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಇನ್ನೂ ಚೆನ್ನಾಗಿ ಆಡಿದರು,' ಎಂದಿದ್ದಾರೆ.
'ಎರಡು ಬಾರಿ ವೆಸ್ಟ್ ಇಂಡೀಸ್ ಟಾಸ್ ಗೆದ್ದಿತ್ತು. ಆದರೆ ಅವರು ಬ್ಯಾಟಿಂಗ್ ಮಾಡಲಿಲ್ಲ ಯಾಕೆ?. ಇದು ಅವರು ಉತ್ತರಿಸಬೇಕಾದ ಒಳ್ಳೆಯ ಪ್ರಶ್ನೆ. ನನಗನ್ನಿಸುತ್ತದೆ ಬಹುಶಃ ಇದೇ ನಮ್ಮ ಸೋಲಿಗೆ ಕಾರಣವಾಯಿತು,' ಎಂದು 57ರ ಹರೆಯದ ವಾಲ್ಷ್ ಅಭಿಪ್ರಾಯಿಸಿದ್ದಾರೆ. ವಿಂಡೀಸ್ ಪರ ವಾಲ್ಷ್ 132 ಟೆಸ್ಟ್ ಪಂದ್ಯಗಳಲ್ಲಿ 519 ವಿಕೆಟ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications